
Chikkamagaluru News: ಭಾರಿ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಗ್ರಾಮ ಸಮೀಪ ಚಾರ್ಮಾಡಿ ಘಾಟ್‌ನ 8ನೇ ತಿರುವಿನಲ್ಲಿ 3 ಮರಗಳು ರಸ್ತೆಗುರುಳಿವೆ. ಮೂರು ಯಂತ್ರಗಳಿಂದ ಪೊಲೀಸರ ಜೊತೆ ಸ್ಥಳಿಯರ ನಿರಂತರ ಕಾರ್ಯಾಚರಣೆಯಿಂದ ಮರ ತೆರವು ಮಾಡಿ, ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ

ಮಳೆ ಇಲ್ಲದೆ ಕಂಗಾಲಾಗಿದ್ದ ಕಾಫಿನಾಡಿನ ಮಲೆನಾಡಿಗರ . ಹನಿ ಹನಿ ನೀರಿಗೂ ಸಂಕಷ್ಟವಾಗುವ ಆತಂಕದಲ್ಲಿದ್ದ ಮಲೆನಾಡಿಗರಿಗೆ ನಿನ್ನೆಯಿಂದ ಸುರಿಯುತ್ತಿರುವ ವರುಣ ಆತಂಕ ದೂರ ಮಾಡಿದ್ದು, ಇನ್ನೊಂದೆ ಮಳೆಯಿಂದಾಗಿ ಮರಗಳು ಉರುಳಿ ಬಿದ್ದಿವೆ.

ಭಾರಿ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಗ್ರಾಮ ಸಮೀಪ ಚಾರ್ಮಾಡಿ ಘಾಟ್‌ನ 8ನೇ ತಿರುವಿನಲ್ಲಿ 3 ಮರಗಳು ರಸ್ತೆಗುರುಳಿವೆ.

ನಿನ್ನೆಯಿಂದ ಮಳೆ ಸುರಿಯುತ್ತಿದ್ದು, ಪರಿಣಾಮ ಅಪಾಯಗಳು ಸಂಭವಿಸಬಹುದು ಎಂದು ಜನರಲ್ಲಿ ಆತಂಕ ಶುರುವಾಗಿದೆ

ಚಾರ್ಮಾಡಿ ಘಾಟಿಯಲ್ಲಿ ಮೂರು ಯಂತ್ರಗಳಿಂದ ಪೊಲೀಸರ ಜೊತೆ ಸ್ಥಳಿಯರ ನಿರಂತರ ಕಾರ್ಯಾಚರಣೆಯಿಂದ ಮರ ತೆರವು ಮಾಡಿ, ಟ್ರಾಫಿಕ್ ಕ್ಲಿಯರ್ ಮಾಡಲು ಹರಸಾಹಸ ಪಟ್ಟಿದ್ದಾರೆ.

