
Farmer : ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿ ಮತ್ತು ಖುಷಿಯಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಶ್ರಮ ಮತ್ತು ಶ್ರದ್ಧೆಯಿಂದ ದುಡಿಯುತ್ತಿರುವ ನಮ್ಮ ದೇಶದ ಪ್ರತೀ ರೈತರೆಲ್ಲರನ್ನೂ ಹೀಗೆಯೇ ನೋಡುವ ಆಸೆ. ಸುಜಿತ್ ಅನೇಕ ಯುವಕರಿಗೆ ಒಳ್ಳೆಯ ಮಾದರಿ ಎಂದು ಶ್ಲಾಘಿಸುತ್ತಿದ್ದಾರೆ ನೆಟ್ಟಿಗರು. Audi ಯಿಂದ ಇಳಿದು ರಸ್ತೆಯಲ್ಲಿ ನಿಂತು ಸೊಪ್ಪನ್ನು ಮಾರುವ ಸುಜಿತ್ ವಿಡಿಯೋ ಅನ್ನು ನೀವು ನೋಡಲೇಬೇಕು.

Kerala: ರೈತರು ಮಾರುಕಟ್ಟೆಗೆ ತರಕಾರಿ ಸೊಪ್ಪು ಮಾರಲು ಬಸ್ಸಿನಲ್ಲಿ, ಸೈಕಲ್ಲಿನಲ್ಲಿ, ದ್ವಿಚಕ್ರವಾಹನದಲ್ಲಿ, ರೈಲಿನಲ್ಲಿ, ಟೆಂಪೋದಲ್ಲಿ ಬರುವುದನ್ನು ನೋಡಿದ್ದೀರಿ. ಆದರೆ ಕಾರಿನಲ್ಲಿ? ಅದೂ ಔಡಿ ಎ4 ( Audi A4 Luxury Sedan) ನಲ್ಲಿ ಬಂದಿದ್ದನ್ನು ನೋಡಿದ್ದೀರೇ? ಕೇರಳದ ರೈತನೊಬ್ಬ ತನ್ನ ಔಡಿ ಕಾರಿನಲ್ಲಿ ಮಾರುಕಟ್ಟೆಗೆ ಬರುತ್ತಾನೆ. ಇನ್ನೊಂದು ಟೆಂಪೋದಲ್ಲಿ ಅವನು ಬೆಳೆದ ಸೊಪ್ಪೂ ಬರುತ್ತದೆ. ಚಪ್ಪಲಿ ಕಳಚಿ, ಭರಭರನೆ ಉಟ್ಟ ಪಂಚೆಯನ್ನು ಬಿಚ್ಚಿ ಕಾರಿನಲ್ಲಿಟ್ಟು ಬರ್ಮುಡಾ ಮೇಲೆ ಸೊಪ್ಪು ಮಾರಲು ರಸ್ತೆ ಬದಿ ನಿಲ್ಲುತ್ತಾನೆ. ರೈತನ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯೇ ಅವನ ಯಶಸ್ಸಿಗೇ ಕಾರಣ ಎಂದು ನೆಟ್ಟಿಗರು ಮನದುಂಬಿ ಇವನನ್ನು ಶ್ಲಾಘಿಸುತ್ತಿದ್ದಾರೆ.

ರೈತ ಸುಜಿತ್ ಎಸ್ ಪಿ variety_farmer ಎಂಬ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ನಾಲ್ಕು ದಿನಗಳ ಹಿಂದೆ ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 4.5 ಲಕ್ಷ ಜನರು ಲೈಕ್ ಮಾಡಿದ್ಧಾರೆ. ಅನೇಕರು ಪ್ರತಿಕ್ರಿಯಿಸಿ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಇಂಡಿಯಾದ ಅತ್ಯಂತ ಶ್ರೀಮಂತ ರೈತ ಎಂದಿದ್ದಾರೆ ಒಬ್ಬರು. ಹಾಗಾದರೆ ಮೊದಲು ನಾನು ಔಡಿ ಕಾರು ಖರೀದಿಸಿ ನಂತರ ತರಕಾರಿ ಮಾರಬೇಕು ಎನ್ನುವುದು ತಿಳಿಯಿತು ಎಂದಿದ್ದಾರೆ ಇನ್ನೊಬ್ಬರು. ಭಾರತದ ಎಲ್ಲಾ ರೈತರು ಈ ಮಟ್ಟಕ್ಕೆ ಬೆಳೆಯಬೇಕು ಎಂದು ಆಶಿಸುತ್ತೇನೆ ಎಂದಿದ್ದಾರೆ ಹಲವಾರು ಜನರು.
