
ಲಕ್ನೋ: ತಾಯಿಯೊಬ್ಬಳು ರೂಪಾಯಿ-ರೂಪಾಯಿ ಕೂಡಿಸಿ, ಮಗಳ ಮದುವೆಗೆಂದು ಜೋಪಾನವಾಗಿ ಉಳಿಸಿಟ್ಟ 18 ಲಕ್ಷ ರೂ. ಹಣವು ಬ್ಯಾಂಕ್ನ ಲಾಕರ್ನಲ್ಲಿ ಗೆದ್ದಲು ಹಿಡಿದು ನಾಶವಾಗಿರುವ ಘಟನೆ ಉತ್ತರಪ್ರದೇಶದ ಮೊರಾದಾಬಾದ್ನಲ್ಲಿ ವರದಿಯಾಗಿದೆ.

ಮೊರಾದಾಬಾದ್ ನಿವಾಸಿ ಅಲ್ಕಾ ಪಠಾಕ್ ಅವರು ಕಳೆದ ವರ್ಷ ಅಕ್ಟೋಬರ್ನಲ್ಲಿ ಅಶಿ ಯಾ ನಾದ ಬ್ಯಾಂಕ್ ಆಫ್ ಬರೋಡಾ ಶಾಖೆ ಯಲ್ಲಿ 18 ಲಕ್ಷ ರೂ.ಗಳನ್ನು ಇಟ್ಟಿದ್ದರು. ಇತ್ತೀ ಚಿಗೆ ಬ್ಯಾಂಕ್ ಸಿಬಂದಿ ಲಾಕರ್ ಅಗ್ರಿಮೆಂಟ್ ರಿನೀವಲ್ಗೆ ಎಂದು ಅಲ್ಕಾ ಅವರಿಗೆ ಕರೆ ಮಾಡಿ ಬರಲು ಹೇಳಿದ್ದಾರೆ. ಈ ವೇಳೆ ಲಾಕರ್ ತೆರೆದರೆ ನೋಟುಗಳಿಗೆ ಗೆದ್ದಲು ಹಿಡಿದಿರುವುದು ಗೊತ್ತಾಯಿತು.

ಈ ಬಗ್ಗೆ ಬ್ಯಾಂಕ್ನ ಮುಖ್ಯ ಕಚೇರಿಗೆ ತಿಳಿಸಿರುವುದಾಗಿ ಸಿಬಂದಿ ಹೇಳಿ ದ್ದಾರೆ. ತನಗಾದ ನಷ್ಟಕ್ಕೆ ಬ್ಯಾಂಕ್ನವರೇ ಪರಿಹಾರ ನೀಡಬೇಕೆಂದು ಮಹಿಳೆ ಕೂಡ ಪಟ್ಟು ಹಿಡಿದಿರುವುದು ವರದಿಯಾಗಿದೆ.
