ನವದೆಹಲಿ: ಆಯುಷ್ ವೈದ್ಯರಿಗೆ ಶಸ್ತçಚಿಕಿತ್ಸೆ ನೀಡಲು ಅವಕಾಶ ನೀಡಿರುವುದನ್ನು ವಿರೋಧಿಸಿ ಭಾರತೀಯ ವೈದ್ಯರ ಸಂಘ ದೇಶದಾದ್ಯಂತ ಡಿ. 11ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಡಿ. 11ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಹೊರರೋಗಿ ವಿಭಾಗಗಳನ್ನು ಬಂದ್ ಮಾಡಲಾಗುವುದು ಎಂದು ಸಂಘ ತಿಳಿಸಿದೆ.
ನವೆಂಬರ್‌ನಲ್ಲಿ ಕೇಂದ್ರ ಸರಕಾರ ಹೊರಡಿಸಿರುವ ಅಧಿಸೂಚನೆ ಪ್ರಕಾರ ಸ್ನಾತಕೋತ್ತರ ಆಯುರ್ವೇದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಶಸ್ತçಚಿಕಿತ್ಸೆ ನಡೆಸುವ ತರಬೇತಿಯನ್ನು ನೀಡಬೇಕು ಹಾಗೂ ಅವರು ಸ್ವತಂತ್ರ ಶಸ್ತçಚಿಕಿತ್ಸೆ ಮಾಡುವಂತಿರಬೇಕು ಎಂದು ತಿಳಿಸಿತ್ತು.
ಇದನ್ನು ಭಾರತೀಯ ವೈದ್ಯರ ಸಂಘ ಟೀಕಿಸಿದ್ದೂ, ಪ್ರತಿಭಟನೆಗೆ ಕರೆ ನೀಡಿದೆ.
