
ICC World Cup 2023 Prize Money: ವಿಶ್ವಕಪ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಅದಕ್ಕೂ ಮುನ್ನ ಐಸಿಸಿ ಈ ವಿಶ್ವಕಪ್‌ನ ಬಹುಮಾನದ ಮೊತ್ತವನ್ನು ಪ್ರಕಟಿಸಿದೆ. ಈ ಬಗ್ಗೆ ಐಸಿಸಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ಬರೋಬ್ಬರಿ 12 ವರ್ಷಗಳ ನಂತರ ಭಾರತದಲ್ಲಿ ಏಕದಿನ ವಿಶ್ವಕಪ್ ಅನ್ನು ಆಯೋಜಿಸಲಾಗಿದೆ. ಈ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಆಡಲಿವೆ. ಅಕ್ಟೋಬರ್ 5 ರಿಂದ ವಿಶ್ವಕಪ್ ಆರಂಭವಾಗಲಿದ್ದು, ನವೆಂಬರ್ 19 ರಂದು ಫೈನಲ್ ಪಂದ್ಯ ನಡೆಯಲಿದೆ. ಟೂರ್ನಿಯ ಉದ್ಘಾಟನಾ ಮತ್ತು ಅಂತಿಮ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ಒಟ್ಟು 45 ದಿನಗಳ ಕಾಲ ಈ ವಿಶ್ವಕಪ್ ನಡೆಯಲ್ಲಿದ್ದು, ಈ 45 ದಿನಗಳಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿವೆ. ವಿಶ್ವಕಪ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಅದಕ್ಕೂ ಮುನ್ನ ಐಸಿಸಿ ಈ ವಿಶ್ವಕಪ್‌ನ ಬಹುಮಾನದ ಮೊತ್ತವನ್ನು ಪ್ರಕಟಿಸಿದೆ. ಈ ಬಗ್ಗೆ ಐಸಿಸಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

2019 ರ ವಿಶ್ವಕಪ್ ಬಹುಮಾನದ ಮೊತ್ತವನ್ನೇ ಈ ವಿಶ್ವಕಪ್ನಲ್ಲೂ ಮೀಸಲಿರಿಸಲಾಗಿದೆ. ಈ ವಿಶ್ವಕಪ್‌ನ ಒಟ್ಟಾರೆ ಬಹುಮಾನದ ಗಾತ್ರ ಸರಿಸುಮಾರು 83 ಕೋಟಿ ರೂ. ಆಗಿದೆ. ಇದರಲ್ಲಿ ವಿಜೇತ ತಂಡಕ್ಕೆ 33,18 ಕೋಟಿ ರೂ. ಬಹುಮಾನವಾಗಿ ಸಿಗಲಿದೆ. ಹಾಗೆಯೇ ಫೈನಲ್ನಲ್ಲಿ ಸೋತ ತಂಡಕ್ಕೆ ಅಂದರೆ ರನ್ನರ್ ಅಪ್ ತಂಡಕ್ಕೆ 16.59 ಕೋಟಿ ರೂ. ಬಹಮಾನ ಸಿಗಲಿದೆ. ಇದಲ್ಲದೆ ಗುಂಪು ಹಂತದಲ್ಲಿ ಪ್ರತಿಯೊಂದು ಪಂದ್ಯದ ಗೆಲುವಿಗೆ 33.18 ಲಕ್ಷ ರೂ. ಬಹುಮಾನವಾಗಿ ಸಿಗಲಿದೆ. ಇನ್ನುಳಿದಂತೆ ನಾಕೌಟ್ ಹಂತವನ್ನು ತಲುಪಲು ವಿಫಲವಾದ ಪ್ರತಿಯೊಂದು ತಂಡಗಳಿಗೂ ತಲಾ 82.94 ಲಕ್ಷ ರೂಗಳನ್ನು ಬಹುಮಾನವಾಗಿ ನೀಡಲಾಗುತ್ತದೆ.

