
ಈ ವರ್ಷ ಜೂನ್ನಲ್ಲಿ ಕೆನಡಾ(Canada)ದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ( Hardeep Singh Nijjar)ಹತ್ಯೆಗೆ ಸಂಬಂಧಿಸಿದಂತೆ ಭಾರತ ಹಾಗೂ ಕೆನಡಾ ನಡುವೆ ಉದ್ವಿಗ್ನತೆ ನಿರಂತರವಾಗಿ ಹೆಚ್ಚುತ್ತಿದೆ. ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಅದನ್ನು ಸಾಬೀತುಪಡಿಸಲು ವಿಶ್ವಾಸಾರ್ಹ ಸಾಕ್ಷಿಗಳು ನಮ್ಮ ಜತೆ ಇವೆ ಎಂದು ಹೇಳಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಟೊ ಆ ಸಾಕ್ಷ್ಯಗಳನ್ನು ಬಹಿರಂಗಪಡಿಸಲು ಹಿಂದೇಟು ಹಾಕುತ್ತಿದ್ದಾರೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟ್ಗಳು ಭಾಗಿಯಾಗಿದ್ದಾರೆ ಎಂದು ಗುರುವಾರ ಮತ್ತೊಮ್ಮೆ ಟ್ರುಡೊ ಆರೋಪಿಸಿದ್ದಾರೆ

ಈ ವರ್ಷ ಜೂನ್ನಲ್ಲಿ ಕೆನಡಾ (Canada)ದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ( Hardeep Singh Nijjar)ಹತ್ಯೆಗೆ ಸಂಬಂಧಿಸಿದಂತೆ ಭಾರತ ಹಾಗೂ ಕೆನಡಾ ನಡುವೆ ಉದ್ವಿಗ್ನತೆ ನಿರಂತರವಾಗಿ ಹೆಚ್ಚುತ್ತಿದೆ. ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಅದನ್ನು ಸಾಬೀತುಪಡಿಸಲು ವಿಶ್ವಾಸಾರ್ಹ ಸಾಕ್ಷಿಗಳು ನಮ್ಮ ಜತೆ ಇವೆ ಎಂದು ಹೇಳಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಟೊ ಆ ಸಾಕ್ಷ್ಯಗಳನ್ನು ಬಹಿರಂಗಪಡಿಸಲು ಹಿಂದೇಟು ಹಾಕುತ್ತಿದ್ದಾರೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟ್ಗಳು ಭಾಗಿಯಾಗಿದ್ದಾರೆ ಎಂದು ಗುರುವಾರ ಮತ್ತೊಮ್ಮೆ ಟ್ರುಡೊ ಆರೋಪಿಸಿದ್ದಾರೆ.

ನಿಜ್ಜರ್ನನ್ನು ಕೆನಡಿಯನ್ ಎಂದು ಕರೆದಿರುವ ಟ್ರುಡೊ, ಕೆನಡಾದ ನೆಲದಲ್ಲಿ ಕೆನಡಾ ಪ್ರಜೆಯ ಪ್ರಜೆಯ ಹತ್ಯೆಯ ಹಿಂದೆ ಭಾರತ ಸರ್ಕಾರದ ಏಜೆಂಟರು ಭಾಗಿಯಾಗಿದ್ದಾರೆ ಎಂದು ನಂಬಲು ಅರ್ಹ ಕಾರಣಗಳಿವೆ ಎಂದರು. ಈ ವಿಚಾರದಲ್ಲಿ ಭಾರತ ಸರ್ಕಾರದ ಸಹಕಾರಕ್ಕೆ ಮನವಿ ಮಾಡಿದರು ಮತ್ತು ಕೆನಡಾ ಪ್ರಜೆಗಳನ್ನು ಸುರಕ್ಷಿತವಾಗಿಡುವುದಷ್ಟೇ ನನ್ನ ಗುರಿ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಈ ವಿಚಾರವಾಗಿ ನೇರ ಮಾತುಕತೆ ನಡೆಸಿದ್ದೇನೆ, ನನಗಿರುವ ಕಳವಳವನ್ನು ಹೇಳಿಕೊಂಡಿದ್ದೇನೆ ಎಂದು ಹೇಳಿದರು.

ವಿಶ್ವದಲ್ಲಿ ಭಾರತದ ಪ್ರಾಮುಖ್ಯತೆ ಬೆಳೆಯುತ್ತಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನಾವು ಪ್ರಚೋದಿಸಲು ಅಥವಾ ಸಮಸ್ಯೆಗಳನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತಿಲ್ಲ, ಕೆನಡಾದ ಜನರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದೇನೆ.
ಭಾರತ ಕೆನಡಾದ ನಾಗರಿಕರಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಹಿನ್ನೆಲೆ ಭಾರತ-ಕೆನಡಾ ವಿವಾದ ಮತ್ತಷ್ಟು ಉಲ್ಬಣಗೊಂಡಿದೆ.

ನಮ್ಮ ಮೇಲೆ ಸುಳ್ಳು ಆಪಾದನೆ ಮಾಡಬೇಡಿ, ಸಾಕ್ಷ್ಯಗಳಿದ್ದರೆ ನೀಡಿ, ಆದರೆ ಇಲ್ಲಸಲ್ಲದ್ದನ್ನು ಹೇಳಿಕೊಳ್ಳುತ್ತಾ ತಿರುಗಾಡಬೇಡಿ ಎಂದು ಕೆನಡಾಗೆ ಭಾರತ ಹೇಳಿದೆ.