
ಹಿಂದೂಪರ ಭಾಷಣಕಾರ್ತಿ ಚೈತ್ರಾ ಕುಂದಾಪುರ ವಂಚನೆ ಪ್ರಕಣದಲ್ಲಿ ಸಿಕ್ಕಿಕೊಂಡ ಬೆನ್ನಲ್ಲೇ ಅವಳು ವಿಶ್ವ ಹಿಂದೂ ಪರಿಷತ್ ಸಂಘಟನೆಗೆ ಸೇರದವಳಲ್ಲ ಎಂದು ಸಂಘಟನೆ ಮುಖಂಡರು ಹೇಳಿದ್ದಾರೆ.
ಮಂಗಳೂರು (ಸೆ.21): ರಾಜ್ಯದಲ್ಲಿ ಉಡುಪಿ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ಹಣವನ್ನು ಪಡೆದು ವಂಚನೆ ಮಾಡಿದ ಆರೋಪಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ, ವಿಶ್ವ ಹಿಂದೂ ಪರಿಷತ್‌ನಲ್ಲಿ ಇರಲಿಲ್ಲ ಎಂದು ಸಂಘಟನೆ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದ್ದಾರೆ.

ಇಡೀ ರಾಜ್ಯದಲ್ಲಿ ಚೈತ್ರಾ ಕುಂದಾಪುರ ಎಂದರೆ ಹಿಂದೂ ಕಾರ್ಯಯರ್ತೆ ಹಾಗೂ ಹಿಂದೂಪರ ಭಾಷಣಕಾರ್ತಿ ಎಂದು ಕರೆಯುತ್ತಿದ್ದರು. ಚೈತ್ರಾಳ ಭಾಷಣ ಕೇಳಿದ ಪ್ರತಿಯೊಬ್ಬ ಹಿಂದೂ ವ್ಯಕ್ತಿ ಕೂಡ ಪ್ರೇರಿತನಾಗುವುದು ಗ್ಯಾರಂಟಿ ಎನ್ನುವಷ್ಟರ ಮಟ್ಟಿಗೆ ಮಾತನಾಡುತ್ತಿದ್ದರು. ಆದರೆ, ಹಿಂದೂ ಧರ್ಮ ಹಾಗೂ ಸಂಘಟನೆಯಲ್ಲಿ ಗುರುತಿಸಿಕೊಂಡು ಬಿಜೆಪಿ ನಾಯಕರೊಂದಿಗೆ ಗುರುತಿಸಿಕೊಂಡಿದ್ದಾಳೆ. ಇದನ್ನೇ ಬಂಡವಾಳ ಮಾಡಿಕೊಂಡು ಚೈತ್ರಾ ಕುಂದಾಪುರ ಉಡುಪಿಯ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ರೂ. ಪಡೆದು ವಂಚನೆ ಮಾಡಿದ್ದಾರೆ. ಈ ಸಂಬಂಧ ದೂರು ದಾಖಲಾಗುತ್ತಿದ್ದಂತೆ ಚೈತ್ರಾ ಕುಂದಾಪುರ, ಶ್ರೀಕಾಂತ್, ಹಡಗಲಿಯ ಹಾಲಶ್ರೀ ಸ್ವಾಮೀಜಿ ಸೇರಿದಂತೆ 8 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ಆದರೆ, ಈಗ ಎಲ್ಲಾ ಕೋಮುವಾದಿ ಲಾಭ ಪಡಕೊಂಡ ಹಿಂದೂ ಸಂಘಟನೆ, ಈ ಕೇಸ್ ನಮ್ಮ ಬುಡಕ್ಕೆ ಬರುತ್ತೆ ಎಂದು ಮನವರಿಕೆ ಯಾದಾಗ, ಚೈತ್ರಾ ಹಿಂದೂ ಸಂಘಟನೆಗೆ ಸೇರಿದವಳಲ್ಲ ಎಂದು ಸಂಘಟನೆಯ ಮುಖಂಡರು ಹೇಳುತ್ತಿದ್ದಾರೆ.

ಮಂಗಳೂರಿನಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಅವರು, ಚೈತ್ರಾ ಕುಂದಾಪುರ ನಮ್ಮ ಸಂಘಟನೆಯಲ್ಲಿ ಇರಲಿಲ್ಲ. ಅವಳನ್ನ ನಮ್ಮ ಕಾರ್ಯಕ್ರಮದ ಭಾಷಣಕಾರಳಾಗಿ ಕರೆದಿದ್ದೆವು ಅಷ್ಟೇ. ಚೆನ್ನಾಗಿ ಭಾಷಣ ಮಾಡ್ತಿದ್ದ ಕಾರಣಕ್ಕೆ ನಾವು ಕರೀತಾ ಇದ್ದೆವು. ಹಿಂದುತ್ವ ಮತ್ತು ಅದರ ವಿಚಾರದಲ್ಲಿ ಮಾತನಾಡ್ತಾ ಇದ್ದಳು. ಸದ್ಯ ವಂಚನೆ ಪ್ರಕರಣದಲ್ಲಿ ಬಂಧನ ಆಗಿದೆ. ತಪ್ಪು ಮಾಡಿದ್ದರೆ ಕ್ರಮ ಆಗಲಿ. ನಮ್ಮ ಸಂಘಟನೆ ಇಂಥವುಗಳಿಗೆ ಯಾವುದೇ ಕಾರಣಕ್ಕೆ ಬೆಂಬಲಿಸಲ್ಲ ಎಂದು ಹೇಳಿದರು.

ಚೈತ್ರಾ ಕುಂದಾಪುರಳ ಬಗ್ಗೆ ಒಂದು ತಿಂಗಳ ಹಿಂದೆ ಗುರುಪುರ ವಜ್ರದೇಹಿ ಶ್ರೀಗಳೇ ನನ್ನ ಗಮನಕ್ಕೆ ತಂದಿದ್ದರು. ಆಗಲೂ ನಾನು ತನಿಖೆ ಆಗಲಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದೆನು. ಹೀಗಾಗಿ ತಪ್ಪು ಮಾಡಿದ ಯಾರೇ ಆದರೂ ಶಿಕ್ಷೆಯಾಗಲಿ. ಈ ವಿಚಾರದಲ್ಲಿ ವಿಶ್ವ ಹಿಂದೂ ಪರಿಷತ್‌ನಿಂದ ಯಾರನ್ನೂ ಬೆಂಬಲ ಮಾಡಲ್ಲ. ಮುಂದಿನ ದಿನಗಳಲ್ಲಿಯೂ ಇಂಥವರಿಗೆ ನಮ್ಮ ಸಂಘಣಟಯಲ್ಲಿ ಅವಕಾಶವನ್ನೂ ನೀಡುವುದಿಲ್ಲ ಎಂದು ಶರಣ್ ಪಂಪ್‌ವೆಲ್ ತಿಳಿಸಿದರು.
ತಮ್ಮ ಲಾಭಕ್ಕಾಗಿ ಯುವ ಜನತೆಯನ್ನು ಬಳಸಿಕೊಳ್ಳುವಹಿಂದುತ್ವ ಸಂಘಟನೆಗಳು ಪ್ರಮುಖ ನಾಯಕರು ಸಿಕ್ಕಿ ಬೀಳುವ ಸೂಚನೆ ಸಿಕ್ಕಾಗ ಈ ರೀತಿ ಜಾರಿಕೊಳ್ಳುವುದು ಇದೇ ಮೊದಲಲ್ಲ. ಯುವ ಜನರು ಎಚ್ಚತುಕೊಳ್ಳುವದು ಒಳಿತು.
