
3 ವರ್ಷಗಳ ಬಳಿಕ ದಿಢೀರ್ ಮಗನನ್ನು ಕಂಡು ಬಿಗಿಯಾಗಿ ತಬ್ಬಿಕೊಂಡು ಆನಂದಭಾಷ್ಪ ಸುರಿಸಿದ ತಾಯಿಯ ಭಾವನಾತ್ಮಕ ವಿಡಿಯೋ ಇದೀಗಾ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ತಾಯಿ ಮಗನ ಭಾವನಾತ್ಮಕ ಬಂಧದ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. ವಿಡಿಯೋ ಇಲ್ಲಿದೆ ನೋಡಿ.
ತಾಯಿಗೆ ಸರ್ಪ್ರೈಸ್ ಕೊಟ್ಟ ಮಗ ವೈರಲ್ ವಿಡಿಯೋ:
ಕುಂದಾಪುರದ ರೋಹಿತ್ ಎಂಬವರು 3ವರ್ಷದ ಬಳಿಕ ಊರಿಗೆ ಬಂದು ತನ್ನ ತಾಯಿ ಮೀನು ಮಾರುವ ಸ್ಥಳಕ್ಕೆ ಅಪರಿಚಿತರಂತೆ ಅಂದರೆ ಮುಖವನ್ನು ಕರವಸ್ತ್ರದಿಂದ ಮುಚ್ಚಿ ಜೊತೆಗೆ ಕೂಲಿಂಗ್ ಗ್ಲಾಸ್ ಧರಿಸಿ ಮೀನು ಖರೀದಿಸಲು ಗ್ರಾಹಕರಂತೆ ಹೋಗಿದ್ದಾರೆ. ಕೆಲ ಹೊತ್ತಿನ ವರೆಗೆ ತಾಯಿಗೆ ಗುರುತಿಸಲು ಸಾಧ್ಯವಾಗಲಿಲ್ಲ. ಆದರೆ ಮಗನ ಧ್ವನಿ ಕೇಳುತ್ತಿದ್ದಂತೆ ತನ್ನ ಕರುಳಿನ ಕುಡಿ ಎಂದು ತಿಳಿದಿದ್ದು, 3 ವರ್ಷಗಳ ಬಳಿಕ ಮಗನ ಕಂಡು ಬಿಗಿಯಾದ ತಬ್ಬಿಕೊಂಡು ಆನಂದಭಾಷ್ಪ ಸುರಿಸಿದ ತಾಯಿಯ ಭಾವನಾತ್ಮಕ ವಿಡಿಯೋ ಇದೀಗಾ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.


