
ವಾಷಿಂಗ್ಟನ್ : ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾವನ್ನಪ್ಪಿದ್ದಾರೆ ಅನ್ನೋ ಸುದ್ದಿ ಕೆಲ ಕಾಲ ಅಮೆರಿಕಾದಲ್ಲಿ ಆತಂಕ ಸೃಷ್ಟಿಯಾಗಿತ್ತು. ಡೊನಾಲ್ಡ್ ಟ್ರಂಪ್ ಪುತ್ರನ X ಖಾತೆಯಿಂದ್ಲೇ ಸುದ್ದಿ ರಿಲೀಸ್ ಆಗಿದ್ದು, ಭಾರೀ ಗೊಂದಲಕ್ಕೆ ಕಾರಣವಾಗಿತ್ತು. ಆದರೆ, ಇದು ಹ್ಯಾಕರ್ ಗಳ ಆಟ ಅನ್ನೋದು ಅ ಬಳಿಕ ಬಯಲಾಗಿದೆ.

ಹಿರಿಯ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ X ಖಾತೆಯನ್ನು ಹ್ಯಾಕ್ ಮಾಡಿ ಕಿಡಿಗೇಡಿಗಳು ಸರಣಿ ಟ್ವೀಟ್ಗಳನ್ನು ಪೋಸ್ಟ್ ಮಾಡಿದ್ದಾರೆ. ಆಕ್ಷೇಪಾರ್ಹ ಟ್ವೀಟ್‌ಗಳ ಸರಣಿಯಲ್ಲಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಧನಹೊಂದಿರುವುದಾಗಿ ತಪ್ಪು ಸಂದೇಶವನ್ನೂ ರವಾನಿಸಲಾಗಿದೆ.

ಪೋಸ್ಟ್‌ಗಳ ಸರಣಿಯನ್ನು ಸೆಪ್ಟೆಂಬರ್ 20 ರಂದು ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ X ಖಾತೆಯಿಂದ ಹಂಚಿಕೊಳ್ಳಲಾಗಿದೆ. ಅಲ್ಲದೆ 140k ವೀಕ್ಷಣೆಗಳನ್ನು ಪಡೆದಿದೆ.

ಟ್ವೀಟ್ ನಲ್ಲಿ ‘ನನ್ನ ತಂದೆ ಡೊನಾಲ್ಡ್ ಟ್ರಂಪ್ ನಿಧನರಾಗಿದ್ದಾರೆ ಎಂದು ಘೋಷಿಸಲು ನನಗೆ ದುಃಖವಾಗುತ್ತಿದೆ. ನಾನು 2024 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದೇನೆ ಎಂದು ಜ್ಯೂನಿಯರ್ ಡೊನಾಲ್ಡ್ ಟ್ರಂಪ್ ಅವರ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿತ್ತು. ಖಾತೆ ಹ್ಯಾಕ್ ಆಗಿರುವುದು ಮನವರಿಕೆಯಾದ ಕೂಡಲೇ ಪೋಸ್ಟನ್ನು ಡಿಲೀಟ್ ಮಾಡಲಾಗಿದೆ.
