
ಬೆಂಗಳೂರು : ಚೈತ್ರಾ ಕುಂದಾಪುರಗೆ CCB ಬಿಗ್ ಶಾಕ್ ನೀಡಿದೆ. 3 ಕೋಟಿಗೂ ಹೆಚ್ಚು ಬಾಂಡ್, ಚಿನ್ನಾಭರಣ, ನಗದು, ಕಾರ್ ನ್ನು CCB ವಶಕ್ಕೆ ಪಡೆದಿದೆ. ಸಿಸಿಬಿ ಡೀಲ್ನಲ್ಲಿ ಪಡೆದಿದ್ದಕ್ಕಿಂತಲೂ ಹೆಚ್ಚು ವಶಕ್ಕೆ ಪಡೆದಿದ್ದು, ವಶಕ್ಕೆ ಪಡೆದ ಹಣ, ಆಸ್ತಿ-ಪಾಸ್ತಿ ಬಗ್ಗೆ ವಿಚಾರಣೆಗೆ ತಯಾರಿ ನಡೆಯುತ್ತಿದೆ.

ಸಿಸಿಬಿ ವಶಕ್ಕೆ ಪಡೆದ ಹಣ, ಆಭರಣದ ಬಗ್ಗೆ ಹೇಳಿಕೆ ನೀಡಲೇಬೇಕು, ಆದಾಯ ಮೂಲದ ಬಗ್ಗೆ ಮಾಹಿತಿ, ಲೆಕ್ಕ ಕೊಡಲೇಬೇಕು. ಇಲ್ಲದಿದ್ರೆ ತನಿಖೆ ಮುಗಿದ್ಮೇಲೆ ಇವುಗಳನ್ನು ಬಿಡಿಸಿಕೊಳ್ಳೋದು ಕಷ್ಟ. ಚೈತ್ರಾ ಕುಂದಾಪುರಗೆ ಕಾನೂನು ಸಂಕಷ್ಟ ಎದುರಾಗುತ್ತೆ. ಚೈತ್ರಾ ಸಂಬಂಧಿಕರ ಹೆಸರಲ್ಲಿದ್ದ 1.8 ಕೋಟಿ ಠೇವಣಿ ಪತ್ರ ಜಪ್ತಿ ಮಾಡಿದ್ದಾರೆ. ಚೈತ್ರಾ ಮನೆಯಲ್ಲಿದ್ದ 65ಲಕ್ಷ ಮೌಲ್ಯದ ಚಿನ್ನಾಭರಣ ಸೀಜ್ ಮಾಡಿದ್ದು, ಬ್ಯಾಂಕ್ನಲ್ಲಿದ್ದ 40 ಲಕ್ಷ, ಚೈತ್ರಾಳ ಐಷಾರಾಮಿ ಕಾರು ವಶಕ್ಕೆ ಪಡೆದಿದ್ದಾರೆ.

ಇದೆಲ್ಲಾ ಹೇಗೆ ಬಂತು ಅನ್ನೋ ಸೂಕ್ತ ದಾಖಲೆಗಳನ್ನು ಚೈತ್ರಾ ಕೊಡ್ಬೇಕು. ಚೈತ್ರಾ ಕುಂದಾಪುರ ಇನ್ನೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದು, ವೈದ್ಯರ ಸಲಹೆ ಮೇಲೆ ಡಿಸ್ಚಾರ್ಜ್ ಮಾಡಿಸಿ ವಿಚಾರಣೆಗೆ ತಯಾರಿ ನಡೆಸುತ್ತಿದ್ದಾರೆ.

