Edited by Ashraf Kammaje

Chaitra Kundapura: ಅಂದು ವಿಷಯ ಏನೆಂದು ಅರಿಯದ ಸಚಿವ ಸುನಿಲ್ ಕುಮಾರ್ ಚೈತ್ರಾಳನ್ನು ಎಂದಿನಂತೆ ಸಹಜವಾಗಿ ಗುರುತಿಸಿ ಮಾತಾನಾಡಿಸಿದ್ದರು. ಆ ವೇಳೆಯೇ ಅಷ್ಟೋ ಇಷ್ಟೋ ಗೋವಿಂದ ಬಾಬು ಪೂಜಾರಿ ಬಗ್ಗೆ ಸಹ ಹೇಳಿದ್ದಳು ಮಿಸ್ ಚೈತ್ರಾ. ಆದರೆ ಸುನಿಲ್ ಕುಮಾರ್ ಭೇಟಿ ಬಳಿಕ, ಅದಕ್ಕೆ ಬೇರೆ ಬಣ್ಣ ಬಳಿದು ಈ ಸಚಿವರೇ ಮುಂದೆ ಸಂಘ ಮತ್ತು ಪಕ್ಷದಲ್ಲಿ ಪ್ರಮುಖರು. ಅದಕ್ಕೆ ನಿಮ್ಮ ಟಿಕೆಟ್ಗಾಗಿ ಅವರನ್ನು ಭೇಟಿ ಮಾಡಿಸಿದ್ದು ಎಂದು ಮಿಸ್ ಚೈತ್ರಾ ಬೂಸಿ ಬಿಟ್ಟಿದ್ದಳಂತೆ

ಬೆಂಗಳೂರು, ಸೆಪ್ಟೆಂಬರ್ 14: ಪ್ರಮುಖ ರಾಜಕೀಯ ಪಕ್ಷದ ವತಿಯಿಂದ ಅಸೆಂಬ್ಲಿ ಟಿಕೆಟ್ ಆಮಿಷವೊಡ್ಡಿ ಯುವ ಉದ್ಯಮಿಯೊಬ್ಬರಿಗೆ (BJP ticket aspirant industrialist Govinda Babu for Byndoor assembly seat) ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿರುವ ವಂಚಕಿ ಚೈನ್ ಚೈತ್ರ ಮತ್ತು ಗಗನ್ ಕಡೂರು ಜೋಡಿ ಬಾನಗಡಿಗಳು ನೂರೆಂಟು ಹೊರಬರುತ್ತಿವೆ. ಸಿಸಿಬಿ ವಿಚಾರಣೆಯಿಂದ ಸವಿಸ್ತಾರ ಮಾಹಿತಿ ಹೊರಬರುತ್ತಿದ್ದು, ಬಿಜೆಪಿ ಮತ್ತು ಆರ್ ಎಸ್ ಎಸ್ ಹೆಸರಿನಲ್ಲಿ ಸಂಪೂರ್ಣ ನಕಲಿ ನಾಯಕರುಗಳನ್ನು ಸೃಷ್ಟಿ ಮಾಡಿತ್ತು ಈ ಖತರನಾಕ್ ಜೋಡಿ. ಆಶ್ಚರ್ಯದ ಸಂಗತಿಯೆಂದರೆ ಈ ನಕಲಿಗಳ ಸೃಷ್ಟಿ ಭಾಗವಾಗಿ ಒಮ್ಮೆ ಅಸಲಿ ಸಚಿವರನ್ನೇ ಭೇಟಿ ಮಾಡಿದ್ದ ಮಿಸ್ ಚೈತ್ರಾ ಕುಂದಾಪುರ ಆ ಭೇಟಿಯನ್ನೇ ಅಸಲಿಯೆಂದು ಬಿಂಬಿಸಿಕೊಂಡಿದ್ದಳು. ಆದರೆ ಆ ಸಚಿವರಿಗೆ ಅದರ ಬಗ್ಗೆ ಸಣ್ಣ ಸುಳಿವೂ ಇರಲಿಲ್ಲ. ಎಂದಿನಂತೆ ಹತ್ತಾರು ಮಂದಿ ತಮ್ಮನ್ನು ಭೇಟಿ ಮಾಡುತ್ತಿರುತ್ತಾರೆ. ಅದರಲ್ಲಿ ಸ್ವಲ್ಪ ಪರಿಚಯವಿದ್ದ ಚೈತ್ರಾ ಕುಂದಾಪುರ ಸಹ ಅಂದು ಭೇಟಿಯಾಗಿರಬಹುದು. ಆದರೆ ಪ್ರಸ್ತುತ ಮೋಸ ಹೋಗಿರುವ ಗೋವಿಂದ ಬಾಬುಗೆ ಅಂದು ಆ ಭೇಟಿಯನ್ನೇ ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಮಿನಿಸ್ಟರ್ ಭೇಟಿಯನ್ನೇ ಅಸಲಿ ಎಂಬಂತೆ ಬಿಂಬಿಸಿದ್ದಳು ಮಿಸ್ ಚೈತ್ರಾ ( MLA ticket cheating case)!

ಅಂದು ಕ್ಯಾಬಿನೆಟ್ ಮಿನಿಸ್ಟರ್ ಸುನಿಲ್ ಕುಮಾರ್ ಮನೆಗೆ ಕರೆದುಕೊಂಡು ಹೋಗಿದ್ದ ಮಿಸ್ ಚೈತ್ರಾ, ನಾವು ನಿಮಗೆ ಖಂಡಿತಾ ಟಿಕೆಟ್ ಕೊಡಿಸುತ್ತೇವೆ ಎಂದು ಗೋವಿಂದ ಬಾಬುಗೆ ಬಿಂಬಿಸುವ/ ನಂಬಿಸುವ ಯತ್ನದಲ್ಲಿ ಇದು ಸಹ ಒಂದು ಭಾಗವಾಗಿತ್ತು ಎಂಬುದು ಈಗ ವಿಚಾರಣೆ ವೇಳೆ ತಿಳಿದುಬಂದಿದೆ. ಮಾಜಿ ಸಚಿವ ಸುನಿಲ್ ಕುಮಾರ್ ರನ್ನು ಭೇಟಿ ಮಾಡಿಸಿದ್ದ ಮಿಸ್ ಚೈತ್ರಾ ತಮ್ಮ ಮೈನವಿರೇಳಿಸುವ ಭಾಷಣದಿಂದ ಬಿಜೆಪಿ ನಾಯಕರಿಗೆ ಪರಿಚಿತಳಾಗಿದ್ದಳು. ಹೀಗಾಗಿ ಆ ಪರಿಚಯವನ್ನೇ ದುರುಪಯೋಗ ಮಾಡಿಕೊಂಡಿರುವುದು ಈಗ ಬೆಳಕಿಗೆ ಬಂದಿದೆ.

ಅಂದು ವಿಷಯ ಏನೆಂದು ಅರಿಯದ ಸಚಿವ ಸುನಿಲ್ ಕುಮಾರ್ ಚೈತ್ರಾಳನ್ನು ಎಂದಿನಂತೆ ಸಹಜವಾಗಿ ಗುರುತಿಸಿ ಮಾತಾನಾಡಿಸಿದ್ದರು. ಆ ವೇಳೆಯೇ ಅಷ್ಟೋ ಇಷ್ಟೋ ಗೋವಿಂದ ಬಾಬು ಪೂಜಾರಿ ಬಗ್ಗೆ ಸಹ ಹೇಳಿದ್ದಳು ಮಿಸ್ ಚೈತ್ರಾ. ಆದರೆ ಸುನಿಲ್ ಕುಮಾರ್ ಭೇಟಿ ಬಳಿಕ, ಅದಕ್ಕೆ ಬೇರೆ ಬಣ್ಣ ಬಳಿದು ಈ ಸಚಿವರೇ ಮುಂದೆ ಸಂಘ ಮತ್ತು ಪಕ್ಷದಲ್ಲಿ ಪ್ರಮುಖರು. ಅದಕ್ಕೆ ಅವರನ್ನು (ಸುನಿಲ್ ಕುಮಾರ್) ಭೇಟಿ ಮಾಡಿಸಿದ್ದು, ನಿಮ್ಮ ಬಗ್ಗೆ ಎಲ್ಲಾ ಹೇಳಿದ್ದೇನೆ, ಟೆಕೆಟ್ ಕೊಡಿಸಲು ಸಹ ಸಹಾಯ ಮಾಡ್ತಾರೆ ಎಂದು ಬೂಸಿ ಬಿಟ್ಟಿದ್ದಳು ಮಿಸ್ ಚೈತ್ರಾ!

ಆದ್ರೆ ಸುನಿಲ್ ಕುಮಾರ್ ಅವರ ಅರಿವಿಗೆ ಈ ಯಾವ ವಿಚಾರಗಳು ಗಮನಕ್ಕೆ ಬಂದಿರಲಿಲ್ಲ. ಎಲ್ಲಾರಂತೆ ಅದು ಸಾಮಾನ್ಯ ಭೇಟಿಯಾಗಿತ್ತು. ಅವರ ಭೇಟಿ ಬಳಿಕ, ಅವರನ್ನೆಲ್ಲ ವಾಪಸ್ಸು ಕಳಿಸಿದ್ದರು ಸುನಿಲ್ ಕುಮಾರ್