
ಟ್ರಿಪೋಲಿ: ಪೂರ್ವ ಲಿಬಿಯಾದ (Eastern Libyan) ನಗರ ಡರ್ನಾದಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ (Libya Floods) 2 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಇಲ್ಲಿನ ಸಚಿವರು ತಿಳಿಸಿದ್ದಾರೆ

ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಪ್ರವಾಹ ಉಂಟಾಗಿದ್ದು, ಮೃತದೇಹಗಳು ಎಲ್ಲೆಂದರಲ್ಲಿ ಬಿದ್ದಿವೆ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ, ಕಟ್ಟಗಳು ಧ್ವಂಸವಾಗಿವೆ. ಸಮುದ್ರ ತೀರದಲ್ಲಿ ಕಟ್ಟಡ ಅವಶೇಷಗಳ ಅಡಿಯಲ್ಲಿ ಮೃತದೇಹಗಳು ಸಿಲುಕಿಕೊಂಡಿವೆ. ನಗರದ 25% ನಷ್ಟು ಜನ ಕಣ್ಮರೆಯಾಗಿದ್ದಾರೆ. ಕೆಲವರು ಸಾವಿನ ಸಂಖ್ಯೆ 2 ಸಾವಿರಕ್ಕಿಂತಲೂ ಹೆಚ್ಚಿದೆ. ಒಂದು ಸಾವಿರಕ್ಕೂ ಹೆಚ್ಚು ಮೃತದೇಹಗಳನ್ನ ಪತ್ತೆಮಾಡಲಾಗಿದೆ ಎಂದು ಸ್ಥಳೀಯ ಸಚಿವರೊಬ್ಬರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಲಿಬಿಯಾ ರಾಷ್ಟ್ರೀಯ ಸೇನಾ ಅಧಿಕಾರಿ ಅಹ್ಮದ್ ವಿಸ್ಮರಿ, ಡರ್ನಾ ನಗರದಲ್ಲಿರುವ ಅಣೆಕಟ್ಟೆಗಳು ಕುಸಿದ ನಂತರ ಡರ್ನಾನಗರ (Derna City) ನೆರೆಗೆ ತುತ್ತಾಗಿದೆ. ಇನ್ನೂ ಕಾಣೆಯಾದವರ ಸಂಖ್ಯೆ 5-6 ಸಾವಿರ ದಾಟಿರಬಹುದು ಎಂದು ಹೇಳಿದ್ದಾರೆ. ಈ ನಡುವೆ ರಕ್ಷಣಾ ತಂಡಗಳು ಕಾರ್ಯಾಚರಣೆಗಿಳಿಸಿವೆ. ಪ್ರವಾಹ ಪರಿಸ್ಥಿತಿಯಿಂದ ಚೇತರಿಸಿಕೊಳ್ಳಲು ಲಿಬಿಯಾ, ನೆರೆಯ ರಾಷ್ಟ್ರಗಳ ಸಹಾಯ ಕೋರಿದೆ.

