
ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದದಲ್ಲಿ ಕರ್ಫ್ಯೂ ವಿರೋಧಿಸಿ ಸಾವಿರಾರು ಮಹಿಳೆಯರು ಬುಧವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಪೊಲೀಸರ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಫಾಲ್: ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದದಲ್ಲಿ ಕರ್ಫ್ಯೂ ವಿರೋಧಿಸಿ ಸಾವಿರಾರು ಮಹಿಳೆಯರು ಬುಧವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಪೊಲೀಸರ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಆಶ್ರವಾಯು ಸಿಡಿಸಿದ್ದು, 25 ಜನರು ಗಾಯಗೊಂಡಿರುವ ಘಟನೆ ಬಿಷ್ಣುಪುರ ಜಿಲ್ಲೆಯ ಚೌಗಕ್‌ಚಾವೊ ಇಖಾಯ್‌ನಲ್ಲಿ ನಡೆದಿದೆ.

ಕರ್ಫ್ಯೂ ಹೇರಿಕೆ ವಿರೋಧಿಸಿ ಬುಧವಾರ ಭದ್ರತಾ ಬ್ಯಾರಿಕೇಡ್‌ಗಳನ್ನು ತಡೆದು ಪ್ರತಿಭಟನೆಗಿಳಿದಿದ್ದ ಸಾವಿರಾರು ಜನರನ್ನು ಚದುರಿಸಲು ಭದ್ರತಾ ಪಡೆಗಳು ಹಲವು ಸುತ್ತಿನ ಆಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದರಿಂದ 25 ಮಂದಿ ಗಾಯಗೊಂಡಿದ್ದಾರೆ. ಬಳಿಕ ಗಾಯಾಳುಗಳನ್ನು ಬಿಷ್ಣುಪುರ ಜಿಲ್ಲಾಸ್ಪತ್ರೆ ಮತ್ತು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ರಿದಂತೆ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಎಂಬ ವಿಶ್ವಸಂಸ್ಥೆಯ ತಜ್ಞರ ವರದಿಯನ್ನು ಬಲವಾಗಿ ತಿರಸ್ಕರಿಸಿರುವ ಭಾರತ ‘ಮಣಿಪುರದ ಪರಿಸ್ಥಿತಿ ಶಾಂತವಾಗಿದೆ’ ಎಂದು ಪ್ರತಿಪಾದಿಸಿದೆ.
