
ಕೋಲ್ಕತ್ತಾ: ರಾಕೇಶ್ ರೋಷನ್ ಪ್ರಮಾದದ ಬೆನ್ನಲ್ಲೇ ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಮಹಾಭಾರತವನ್ನು (Mahabharat) ಋಷಿ ವೇದವ್ಯಾಸರಿಂದ ಬರೆಯಲಾಗಿಲ್ಲ, ಇದನ್ನು ಬಂಡಾಯ ಕವಿ ಕಾಜಿ ನಜ್ರುಲ್ ಇಸ್ಲಾಂ (Kazi Nazrul Islam) ಬರೆದಿದ್ದಾರೆ ಎಂದು ಹೇಳಿದ್ದಾರೆ. ಇವರ ಈ ವಿವಾದಾತ್ಮಕ ಹೇಳಿಕೆಯ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.

ಕಾಜಿ ನಜ್ರುಲ್ ಇಸ್ಲಾಂ ಬಂಗಾಳದ ಬಂಡಾಯ ಬಾರ್ಡ್ ಎಂದು ಸಾಮಾನ್ಯವಾಗಿ ಉಲ್ಲೇಖಿಸಲ್ಪಡುತ್ತಾರೆ. ಇವರು ವಸಾಹತುಶಾಹಿ ವಿರೋಧಿ ಕವಿತೆಗಳು ಮತ್ತು ಕೋಮು ಸೌಹಾರ್ದವನ್ನು ಉತ್ತೇಜಿಸುವ ಸಾಹಿತ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಇದೀಗ ಮಮತಾ ಬ್ಯಾನರ್ಜಿ ಮಹಾಭಾರತವನ್ನು ಕಾಜಿ ನಜ್ರುಲ್ ಅವರು ಬರೆದಿದ್ದರೂ ಇದರ ಕ್ರೆಡಿಟ್ ವೇದವ್ಯಾಸರಿಗೆ ಸಲ್ಲುತ್ತದೆ ಎಂದು ಹೇಳಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಟಿಎಂಸಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧ್ಯಯನಗಳು ಒಬ್ಬ ವ್ಯಕ್ತಿಯನ್ನು ನಿಜವಾದ ಅರ್ಥದಲ್ಲಿ ಕಲಿಯುವಂತೆ ಮಾಡುವುದಿಲ್ಲ. ಒಬ್ಬ ವ್ಯಕ್ತಿ ವಿಶಾಲವಾದ ಹೃದಯವನ್ನು ಹೊಂದಿರಬೇಕು. ನಮ್ಮ ಮಹಾಪುರುಷರು ಬರೆದದ್ದನ್ನು ಓದಿ ಮತ್ತು ಅರ್ಥಮಾಡಿಕೊಳ್ಳಿ. ರವೀಂದ್ರನಾಥ, ನಜ್ರುಲ್ ಮತ್ತು ವಿವೇಕಾನಂದರ ಬಗ್ಗೆ ಓದಿ. ಮಹಾಭಾರತವನ್ನು ಬರೆದವರು ನಜ್ರುಲ್ ಇಸ್ಲಾಂ ಎಂದರು