
Tomato Price in Karnataka: ದೇಶದಲ್ಲಿ ಟೊಮೇಟೊ ದರ ದಿನೇ ದಿನೇ ಕುಸಿತ ಕಾಣುತ್ತಿದೆ. ರಾಜ್ಯದ ಕೆಲವು ಎಪಿಎಂಸಿಯಲ್ಲಿ ಟೊಮೇಟೊ ದರ ಕೆಜಿಗೆ 14 ರೂ.ನಂತೆ ಮಾರಾಟವಾಗುತ್ತಿದೆ. ಅನೇಕ ಸ್ಥಳಗಳಲ್ಲಿ 20 ರೂ. ಇದೆ. ಬೆಂಗಳೂರಿನಲ್ಲಿ ಟೊಮೇಟೊ 30-35 ರೂ. ನಂತೆ ಮಾರಾಟವಾಗುತ್ತಿದೆ.

- ದೇಶದಲ್ಲಿ ಸಖತ್ ಸದ್ದು ಮಾಡಿದ್ದ ಟೊಮೇಟೊ ದರದಲ್ಲಿ ದಿಢೀರ್ ಕುಸಿತ ಕಂಡಿದೆ
- ಟೊಮೇಟೊ ದರ ಕುಸಿತದಿಂದ ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿದ್ರೆ ಬೆಳಗಾರರಲ್ಲಿ ಆತಂಕ ಮೂಡಿಸಿದೆ
- ಬೆಂಗಳೂರಿನಲ್ಲಿ ಟೊಮೇಟೊ ಪ್ರತಿ ಕೆಜಿ ಟೊಮೇಟೊ 30-35 ರೂ. ನಂತೆ ಮಾರಾಟವಾಗುತ್ತಿದೆ
ಬೆಂಗಳೂರು: ದೇಶದಲ್ಲಿ ಸಖತ್ ಸದ್ದು ಮಾಡಿದ್ದ ಟೊಮೇಟೊ ದರದಲ್ಲಿ ದಿಢೀರ್ ಕುಸಿತ ಕಂಡಿದೆ. ಇದರಿಂದ ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿದ್ರೆ ಬೆಳಗಾರರಲ್ಲಿ ಆತಂಕ ಮನೆ ಮಾಡಿದೆ.
ದೇಶದ ಕೆಲವು ಕಡೆ ಪ್ರತಿ ಕೆಜಿ 250-300 ರೂ.ವರೆಗೆ ಮಾರಾಟವಾಗುತ್ತಿದ್ದ ಟೊಮೇಟೊ ಭರ್ಜರಿ ಡಿಮ್ಯಾಂಡ್ ಸೃಷ್ಟಿಸಿಕೊಂಡಿತ್ತು. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು ಟೊಮೇಟೊ ಖರೀದಿಸಲು ಹಿಂದೇಟು ಹಾಕುತ್ತಿದ್ದರು. ಆದರೆ ಟೊಮೇಟೊವನ್ನು ಉತ್ತಮ ಬೆಲೆಗೆ ಮಾರಾಟ ಮಾಡಿದ್ದ ಬೆಳೆಗಾರರು ಲಕ್ಷಾಧೀಶ ಮತ್ತು ಕೋಟ್ಯಧಿಪತಿಗಳಾಗಿದ್ದರು.

1-2 ಎಕರೆಯಲ್ಲಿ ಬೆಳೆದ ಟೊಮೇಟೊಗೆ ಬಂಪರ್ ಬೆಲೆ ಸಿಕ್ಕು ಅನೇಕ ರೈತರು ರಾತ್ರೋ ರಾತ್ರಿ ಕೋಟ್ಯಧಿಪತಿಗಳಾಗಿ ಬದಲಾಗಿದ್ದರು. ಆದರೆ ಬೆಲೆ ಏರಿಕೆಯ ಹೊಡೆತಕ್ಕೆ ಗ್ರಾಹಕರು ಕಂಗಾಲಾಗಿ ಹೋಗಿದ್ದರು. ಇದೀಗ ಏಕಾಏಕಿ ಟೊಮೇಟೊ ದರದಲ್ಲಿ ಭಾರೀ ಕುಸಿತ ಕಾಣುತ್ತಿದೆ.

ಕರ್ನಾಟಕ ಸೇರಿದಂತೆ ಉತ್ತರ ರಾಜ್ಯಗಳಲ್ಲಿ ಬೇಡಿಕೆ ಕಡಿಮೆಯಾಗಿರುವುದರಿಂದ ಟೊಮೇಟೊ ಬೆಲೆ ಕುಸಿತ ಕಂಡಿದೆ. ನೇಪಾಳದಿಂದಲೂ ಭಾರತಕ್ಕೆ ಟೊಮೇಟೊ ಆಮದಾಗುತ್ತಿದೆ. ಉತ್ತರ ಭಾರತದಲ್ಲಿ ಟೊಮೇಟೊ ಪೂರೈಕೆ ಹೆಚ್ಚಾಗಿರುವುದರಿಂದ ಬೇಡಿಕೆ ಕಡಿಮೆಯಾಗಿದೆ. ಇದು ಹೀಗೆ ಮುಂದುವರೆದರೆ ಸಗಟು ದರ ಪ್ರತಿ ಕೆಜಿಗೆ 5-10 ರೂ.ಗೆ ಕುಸಿತವಾಗಬಹುದು ಅಂತಾ ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಟೊಮೇಟೊ ದರ ದಿನೇ ದಿನೇ ಕುಸಿತ ಕಾಣುತ್ತಿದೆ. ರಾಜ್ಯದ ಕೆಲವು ಎಪಿಎಂಸಿಯಲ್ಲಿ ಟೊಮೇಟೊ ದರ ಕೆಜಿಗೆ 14 ರೂ.ನಂತೆ ಮಾರಾಟವಾಗುತ್ತಿದೆ. ಅನೇಕ ಸ್ಥಳಗಳಲ್ಲಿ 20 ರೂ. ಇದೆ. ಬೆಂಗಳೂರಿನಲ್ಲಿ ಟೊಮೇಟೊ 30-35 ರೂ. ನಂತೆ ಮಾರಾಟವಾಗುತ್ತಿದೆ.
ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದ ಟೊಮೇಟೊಗೆ ಇದೀಗ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಬೆಲೆ ಏರಿಕೆಯ ಹೊಡೆತಕ್ಕೆ ಸಿಲುಕಿದ್ದ ಜನಸಾಮಾನ್ಯರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.ಬೆಲೆ ಕುಸಿತ ಕಂಡಿದ್ದು ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.