Edited By: Ashraf Kammaje
Updated on: Aug 26, 2023 | 6:03 PM

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳದ ಇಬ್ರಾಹಿಂ ಫಾಹಿಂ (18) ಎಂಬಾತನನ್ನು ಮಂಗಳೂರಿನ ಬಲ್ಮಠ ಬಳಿಯ ಮತ್ತೊಂದು ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರು ಹೊರವಲಯದ ಅಡ್ಯಾರ್ ಬಳಿಯ ಫ್ಲಾಟ್ಗೆ ಅಪಹರಿಸಿಕೊಂಡು ಹೋಗಿ, ಹುಡುಗಿ ವಿಚಾರಕ್ಕೆ ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದರು. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ಕನ್ನಡ, ಆ.26: ಖಾಸಗಿ ಕಾಲೇಜಿನ ವಿದ್ಯಾರ್ಥಿಯ ಮೇಲೆ ಇನ್ನೊಂದು ಕಾಲೇಜಿನ ವಿದ್ಯಾರ್ಥಿಗಳಿಂದ (College Students) ಮಾರನಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳದ ಇಬ್ರಾಹಿಂ ಫಾಹಿಂ (18) ಹಲ್ಲೆಗೊಳಗಾಗಿದ್ದ ಯುವಕ. ಇವರು ನಗರದ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಇಬ್ರಾಹಿಂ ಫಾಹಿಂನನ್ನು ಮಂಗಳೂರಿನ (Mangalore) ಬಲ್ಮಠ ಬಳಿಯ ಮತ್ತೊಂದು ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿರುವ ಆರೋಪಿಗಳು, ಮಂಗಳೂರು ಹೊರವಲಯದ ಅಡ್ಯಾರ್ ಬಳಿಯ ಫ್ಲಾಟ್ಗೆ ಅಪಹರಿಸಿಕೊಂಡು ಹೋಗಿ, ಹುಡುಗಿ ವಿಚಾರಕ್ಕೆ ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದರು

ಆರೋಪಿಗಳನ್ನು ಬಂಧಿಸಿದ ಪೊಲೀಸರು
ಗಾಂಜಾ ನಶೆಯಲ್ಲಿ ವಿದ್ಯಾರ್ಥಿ ಮೇಲೆ ರಕ್ತ ಹೆಪ್ಪುಗಟ್ಟುವಂತೆ ಬೆಲ್ಟ್ ಹಾಗೂ ಕೋಲಿನಿಂದ ಹೊಡೆದು ಮನ ಬಂದಂತೆ ದಾಳಿ ಮಾಡಿದ್ದಾರೆ. ಅಗಸ್ಟ್ 23ರ ಮಧ್ಯಾಹ್ನ ಕಿಡ್ನಾಪ್ ಮಾಡಿಕೊಂಡು ತೆರಳಿ ಗಂಭೀರ ಹಲ್ಲೆ ಮಾಡಲಾಗಿತ್ತು. ಸದ್ಯ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಫಾಹಿಂಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಬಂದರು ಠಾಣೆ ಪೊಲೀಸರಿಂದ ಆರೋಪಿಗಳಾದ ಅಬ್ದುಲ್ಲಾ ಹನ್ನಾನ್(19), ಇಬ್ರಾಹಿಂ ತಾಬೀಶ್ (19), ಮಹಮ್ಮದ್ ಶಾಕೀಫ್(19), ಮಹಮ್ಮದ್ ಶಾಯಿಕ್(19), ಯು.ಪಿ.ತನ್ವೀರ್(19), ಅಬ್ದುಲ್ ರಶೀದ್(20) ಮತ್ತು ಮನ್ಸೂರ್(19) ಸೇರಿ ಒಟ್ಟು ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ.
