Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಸುಪ್ರೀಂ ಅಂಗಳಕ್ಕೆ ದಸರಾ ಉದ್ಘಾಟನೆ – ನಾಳೆ ತುರ್ತು ವಿಚಾರಣೆ

    ಕಾಂಗ್ರೆಸ್​ ಮತದಾರರೇ ಟಾರ್ಗೆಟ್, ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಆರೋಪ

    ಧರ್ಮಸ್ಥಳ ಕೇಸ್​​ ತನಿಖೆಗೆ ಅನಿರೀಕ್ಷಿತ ಟ್ವಿಸ್ಟ್.. ನಿಜವಾಯ್ತಾ ಸೌಜನ್ಯ ಮಾವ ವಿಠಲ್ ಹೇಳಿದ್ದು..?

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಜ್ಯ

ಸಾಮಾಜಿಕ ಪ್ರಜಾಪ್ರಭುತ್ವದ ಭವ್ಯ ಇತಿಹಾಸವುಳ್ಳ ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಬಲಿಷ್ಠ ಗೊಳಿಸುವ ಕಾವಲಾಳುಗಳು ನಾವಾಗಬೇಕು:ಅಬ್ದುಲ್ ಮಜೀದ್ ಮೈಸೂರು ಕರೆ

editor tv by editor tv
August 23, 2023
in ರಾಜ್ಯ
0
ಸಾಮಾಜಿಕ ಪ್ರಜಾಪ್ರಭುತ್ವದ ಭವ್ಯ ಇತಿಹಾಸವುಳ್ಳ ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಬಲಿಷ್ಠ ಗೊಳಿಸುವ ಕಾವಲಾಳುಗಳು ನಾವಾಗಬೇಕು:ಅಬ್ದುಲ್ ಮಜೀದ್ ಮೈಸೂರು ಕರೆ
1.9k
VIEWS
Share on FacebookShare on TwitterShare on Whatsapp

ಸಾಮಾಜಿಕ ಪ್ರಜಾಪ್ರಭುತ್ವದ ಭವ್ಯ ಇತಿಹಾಸವುಳ್ಳ ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಬಲಿಷ್ಠ ಗೊಳಿಸುವ ಕಾವಲಾಳುಗಳು ನಾವಾಗಬೇಕು

ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾ ಪ್ರತಿನಿಧಿಗಳ ಸಮಾವೇಶದಲ್ಲಿ ರಾಜ್ಯಾಧ್ಯಕ್ಷರಾದಂತಹ ಅಬ್ದುಲ್ ಮಜೀದ್ ಮೈಸೂರು ಕರೆ

ಮಂಗಳೂರು ಅ 22: ಸಾಮಾಜಿಕ ಪ್ರಜಾಪ್ರಭುತ್ವದ ಭವ್ಯ ಇತಿಹಾಸ ಹಾಗೂ ಪರಂಪರೆ ಉಳ್ಳ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರಸ್ತುತ ದಿನಗಳಲ್ಲಿ ಅಪಾಯದತ್ತ ಹೋಗುತ್ತಿದೆ ದೇಶದ ಸಂವಿಧಾನವನ್ನು ಉಳಿಸಿ ಬೆಳೆಸಿ ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನದ ಆಶಯಗಳು ಖಾತ್ರಿಪಡಿಸುವಂತಹ ಮಹತ್ತರ ಜವಾಬ್ದಾರಿ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಪ್ರತಿಯೊಬ್ಬ ನಾಯಕರ ಹಾಗೂ ಕಾರ್ಯಕರ್ತರ ಮೇಲಿದೆ ಇದಕ್ಕಾಗಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು, ನಾಯಕರು ಶಕ್ತಿಮೀರಿ ಶ್ರಮಿಸಬೇಕು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿದರೆ ಮಾತ್ರ ಈ ದೇಶದ ಭವ್ಯ ಪರಂಪರೆ ಭವ್ಯ ಇತಿಹಾಸ ಮುಂದುವರಿಯಲು ಸಾಧ್ಯ ಎಂದು ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ರಾದ ಅಬ್ದುಲ್ ಮಜಿದ್ ಮೈಸೂರು ಕರೆ ನೀಡಿದರು

ಅವರಿಂದು ಮಂಗಳೂರು ಹೊರವಲಯದ ಅರ್ಳಕದ ಯಶಸ್ವಿ ಹಾಲಿನಲ್ಲಿ ನಡೆದಂತಹ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಪ್ರತಿನಿಧಿಗಳ ಸಮಾವೇಶದಲ್ಲಿ ಜಿಲ್ಲಾ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಲಕ್ಷಾಂತರ ಮಹನೀಯರು ತನ್ನ ಸರ್ವಸ್ವವನ್ನು ಅರ್ಪಿಸಿ ಹೋರಾಟ ಮಾಡಿದ ಫಲವಾಗಿ ಈ ದೇಶವು ಇಂದು ಸ್ವಾತಂತ್ರ್ಯಗೊಂಡಿದೆ ಆದರೆ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ದೇಶದ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ,ಮಹಿಳೆಯರು ,ರೈತರು ಅಭದ್ರತೆಯ ಬದುಕು ಸಾಗಿಸುವಂತಹ ಒಂದು ವ್ಯವಸ್ಥೆ ಈ ದೇಶದಲ್ಲಿ ನಮಗೆ ಕಾಣಲಿಕ್ಕೆ ಸಾಧ್ಯವಾಗ್ತಾ ಇದೆ ಇಂತಹ ವ್ಯವಸ್ಥೆಯಿಂದ ಈ ದೇಶವನ್ನು ಮುಕ್ತಿ ಗೊಳಿಸುವ ಮೂಲಕ ಈ ದೇಶವನ್ನು ಒಂದು ನೈಜವಾದಂತಹ ಪ್ರಜಾಪ್ರಭುತ್ವ ಚೌಕಟ್ಟಿನಲ್ಲಿ ಕಟ್ಟಿ ಉಳಿಸಿ ಬೆಳೆಸಬೇಕಾದಂತ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ ಇದಕ್ಕಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಪ್ರತಿಯೊಬ್ಬ ಕಾರ್ಯಕರ್ತರು ಶಕ್ತಿಮೀರಿ ರಾತ್ರಿ ಹೆಗಲೆನ್ನದೆ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ಪಕ್ಷದ ಜಿಲ್ಲಾ ಪ್ರತಿನಿದಿಗಳಿಗೆ ಕರೆ ನೀಡಿದರು

ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದಂತಹ ಅನ್ವರ್ ಸಾದತ್ ಬಜತ್ತೂರು ರವರ ಅಧ್ಯಕ್ಷತೆಯಲ್ಲಿ ನಡೆದಂತಹ ಇಂದಿನ ಪ್ರತಿನಿಧಿಗಳ ಸಭೆಯು ಅನ್ವರ್ ಸಾದತ್ ರವರು ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಲಾಯಿತು,ಬಳಿಕ ಪ್ರಸ್ತಾವಿಕ ಮಾತುಗಳನ್ನಾಡಿದಂತಹ ಅವರು ಯಾವುದೇ ಸಂದಿಗ್ಧ ಕಾಲಘಟ್ಟದಲ್ಲಿಯೂ ಕೂಡ ನಿಸ್ವಾರ್ಥ ಮನೋಭಾವದಿಂದ ಪ್ರಾಮಾಣಿಕ ಸೇವೆ ನಡೆಸುವಂತಹ ಎಸ್‌ಡಿಪಿಐ ಪಕ್ಷದ ಕಾರ್ಯಕರ್ತರು ಈ ಪಕ್ಷದ ನಿಜವಾದ ಆಸ್ತಿ ಎಂದು ಹೇಳಿದರು

ನಾಯಕತ್ವ ವಿಚಾರದ ಬಗ್ಗೆ ತರಬೇತಿ ನಡೆಸಿಕೊಟ್ಟಂತಹ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಇಲ್ಯಾಸ್ ಮುಹಮ್ಮದ್ ತುಂಬೆಯವರು ಜನಪರ ಮತ್ತು ಸಂವಿದಾನದ ಪರವಾಗಿ ಕಾರ್ಯನಿರ್ವಹಿಸುತ್ತಿರುವ SDPI ಪಕ್ಷದ ನಾಯಕರು ಕ್ರಿಯಾಶೀಲ ಮತ್ತು ಸಕ್ರಿಯ ನಾಯಕತ್ವದ ಗುಣಗಳನ್ನು ತನ್ನ ಸಾಮಾಜಿಕ, ರಾಜಕೀಯ ಮತ್ತು ವೈಯಕ್ತಿಕ ಬದುಕಿನಲ್ಲಿ ಅಳವಡಿಸಿಕೊಂಡು ಜನರ ಪ್ರೀತಿ ವಿಶ್ವಾಸ ಗಳಿಸಬೇಕು ಎಂದು ಹೇಳಿದರು

ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ಪಕ್ಷದ ಬೆಳವಣಿಗೆ ಮತ್ತು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ವಿಚಾರ ಮಂಡನೆ ಮಾಡಿದರು , ಸಮಾರೋಪ ಬಾಷಣ ಮಾಡಿದ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಯವರು ನಿರ್ಭೀತಿಯ ಸಮಾಜ ನಿರ್ಮಾಣ ಮಾಡುವ ಮೂಲಕ SDPI ದೇಶದಲ್ಲಿ ಭರವಸೆಯ ಬೆಳಕಾಗಲಿದೆ ಎಂದರು. ಯಾವುದೇ ಶಕ್ತಿಗಳು ಅದೆಷ್ಟೇ ಶ್ರಮ ಪಟ್ಟರು SDPI ಪಕ್ಷವು ಭಯ ಮತ್ತು ಹಸಿವಿನಿಂದ ಮುಕ್ತಿ ಹೊಂದಿದ ಸಮಾಜವನ್ನು ಒಂದಲ್ಲಾ ಒಂದು ದಿನ ನಿರ್ಮಿಸುವುದು ಶತಸಿದ್ದ ಎಂದು ನುಡಿದರು

ಜಿಲ್ಲಾ ಸಮಿತಿಯು ಈ ಅವಧಿಯಲ್ಲಿ ಕೈಗೊಂಡ ಪಕ್ಷದ ಕಾರ್ಯ ಚಟುವಟಿಕೆಗಳ ಮಧ್ಯಂತರ ವರಧಿಯನ್ನು ಕ್ರಮವಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು, ಜಮಾಲ್ ಜೋಕಟ್ಟೆ ಜಿಲ್ಲಾ ಕಾರ್ಯದರ್ಶಿ ಗಳಾದ ಅಕ್ಬರ್ ಬೆಳ್ತಂಗಡಿ, ಸುಹೈಲ್ ಖಾನ್, ಶಾಕಿರ್ ಅಳಕೆ ಮಜಲು ಜಿಲ್ಲಾ ಸಮಿತಿ ಸದಸ್ಯರಾದ ನವಾಝ್ ಉಳ್ಳಾಲ ಸಭೆಯ ಮುಂದೆ ಮಂಡಿಸಿದರು, ನೂತನ ವಾಗಿ ಜಿಲ್ಲಾ ಸಮಿತಿಗೆ ಸಿದ್ದೀಕ್ ಪುತ್ತೂರು, ಮೂಸಬ್ಬ ತುಂಬೆ,ನಝೀರ್ ಫರಂಗಿಪೇಟೆ, ಶಮೀಮ್ ನವರಂಗ್ ರವರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು ಈ ಪ್ರಕ್ರಿಯೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಮಜೀದ್ ತುಂಬೆ ನಡೆಸಿ ಕೊಟ್ಟರು . ಕಾರ್ಯಕ್ರಮದಲ್ಲಿ ನೂತನವಾಗಿ ಎರಡನೇ ಅವಧಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರಾಗಿ ಆಯ್ಕೆ ಗೊಂಡವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು . ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಮ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ , ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ, ಶಾಹಿದಾ ತಸ್ನೀಮ್ , ನೌರೀನ್ ಆಲಂಪಾಡಿ SDTU ರಾಜ್ಯ ಕೋಶಾಧಿಕಾರಿ ಖಾದರ್ ಅಮ್ಮೆಮ್ಮಾರ್ SDPI ಜಿಲ್ಲಾ ಮುಖಂಡರಾದ ಯೂಸುಫ್ ಆಲಡ್ಕ , ಅಬೂಬಕ್ಕರ್ ಮದ್ದ, ಅಬ್ದುಲ್ ಬಶೀರ್, ಹನೀಫ್ ಬೊಳಿಯಾರ್ ಉಪಸ್ಥಿತರಿದ್ದರು , ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು ಸ್ವಾಗತಿಸಿ ಶಾಕಿರ್ ಧನ್ಯವಾದ ಗೈದರು ಬಂಟ್ವಾಳ ಕ್ಷೇತ್ರ ಜತೆ ಕಾರ್ಯದರ್ಶಿ ಅಶ್ರಫ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು

Previous Post

ಇಂದು ಭಾರತದ ಐತಿಹಾಸಿಕ ಚಂದ್ರಚುಂಬನಕ್ಕೆ ಕ್ಷಣಗಣನೆ : ವಿಶ್ವದ ಕಣ್ಣು ಭಾರತದತ್ತ

Next Post

ಮುಸ್ಲಿಮರು ನಿಮ್ಮ ಗುಲಾಮರಲ್ಲ’ : ಕಾಂಗ್ರೆಸ್ ನಾಯಕ ಅಜೀಜ್ ಖುರೇಷಿ

Next Post
ಮುಸ್ಲಿಮರು ನಿಮ್ಮ ಗುಲಾಮರಲ್ಲ’ : ಕಾಂಗ್ರೆಸ್ ನಾಯಕ ಅಜೀಜ್ ಖುರೇಷಿ

ಮುಸ್ಲಿಮರು ನಿಮ್ಮ ಗುಲಾಮರಲ್ಲ’ : ಕಾಂಗ್ರೆಸ್ ನಾಯಕ ಅಜೀಜ್ ಖುರೇಷಿ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.