
ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಸೋಮವಾರ ಯುವಕನ ಕೊಲೆಯಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಇಬ್ಬರು ಸಾವಿಗೀಡಾಗಿದ್ದಾರೆ. ಒಂದು ಕೊಲೆ, ಎರಡು ಎನ್ನುವಂತಾಗಿದೆ ಪ್ರಕರಣ.
ನಿನ್ನೆ ನಡೆದಿದ್ದ ಯುವಕನ ಕೊಲೆ ಪ್ರಕರಣದಲ್ಲಿ ತಂದೆ – ಮಗ ಆರೋಪಿಯಾಗಿದ್ದ ಕಾರಣ ಮನನೊಂದು ಆರೋಪಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಆತ್ಮಹತ್ಯೆ ಸುದ್ದಿ ಕೇಳಿ ಜೈಲಿನಲ್ಲಿದ್ದ ಆರೋಪಿ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಮೈಸೂರಿನ ವಿದ್ಯಾನಗರದಲ್ಲಿ ಬಾಲರಾಜ್ ಎಂಬ ಯುವಕನ ಕೊಲೆ ಆಗಿತ್ತು. ಕೊಲೆ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನಾಲ್ವರು ಆರೋಪಿಗಳಲ್ಲಿ ಸಾಮ್ರಾಟ್ ಮತ್ತು ತೇಜಸ್ ಎಂಬ ತಂದೆ – ಮಗ ಕೂಡ ಇದ್ದರು.

ತಂದೆ – ಮಗ ಜೈಲು ಸೇರಿದ್ದರಿಂದ ಅವಮಾನಗೊಂಡ ಸಾಮ್ರಾಟ್ ಪತ್ನಿ ಇಂದ್ರಾಣಿ (35) ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಈ ವಿಚಾರ ಜೈಲಿನಲಿದ್ದ ತಂದೆ – ಮಗನಿಗೆ ತಿಳಿದಿದೆ. ಈ ಆಘಾತದಲ್ಲಿ ಇಂದ್ರಾಣಿ ಪತಿ ಸಾಮ್ರಾಟ್ಗೆ ಹೃದಯಾಘಾತವಾಗಿ ಜೈಲಿನಲ್ಲೇ ಮೃತಪಟ್ಟಿದ್ದಾನೆ
