
ಡಿಆರ್‌ಡಿಒ ಅಭಿವೃದ್ಧಿ ಪಡಿಸಿದ ಡ್ರೋನ್ ಮಾದರಿಯ ಚಾಲಕ ರಹಿತ ತಪಸ್ ವಿಮಾನ ತಾಲೂಕಿನ ವದ್ದಿಕೆರೆ ಗ್ರಾಮದ ರೈತರ ಜಮೀನಿನಲ್ಲಿ ಧರೆಗುರುಳಿ ಪತನಗೊಂಡಿದೆ.
ಚಿತ್ರದುರ್ಗ (ಆ.20): ಚಿತ್ರದುರ್ಗ ಜಿಲ್ಲೆಯಲ್ಲಿರುವ ಚಳ್ಳಕೆರೆಯ ಡಿಆರ್‌ಡಿಒ ಸೆಂಟರ್‌ನಲ್ಲಿ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿ ಪಡಿಸಿದ ಡ್ರೋನ್ ಮಾದರಿಯ ಚಾಲಕ ರಹಿತ ತಪಸ್ ವಿಮಾನ ತಾಲೂಕಿನ ವದ್ದಿಕೆರೆ ಗ್ರಾಮದ ರೈತರ ಜಮೀನಿನಲ್ಲಿ ಧರೆಗುರುಳಿ ಪತನಗೊಂಡಿದೆ.

ವದ್ದಿಕೆರೆ ಬಳಿ ಧರೆಗುರುಳಿದ ಚಾಲಕ ರಹಿತ ತಪಸ್ ವಿಮಾನ ಪತನಗೊಂಡಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮ. ಡಿಆರ್ ಡಿಓ ಸಿದ್ಧಪಡಿಸಿದ್ದ ಚಾಲಕ ರಹಿತ ವಿಮಾನ ಈಗ ಪತನವಾಗಿದೆ., ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯಿರುವ ಡಿಆರ್ ಡಿಓ ಸಂಸ್ಥೆಯು ಪರಿಕ್ಷಾರ್ಥ ಹಾರಾಟ ನಡೆಸುತ್ತಿದ್ದ ಡ್ರೋಣ್ ಮಾದರಿ ವಿಮಾನ ನಿಯಂತ್ರಣ ತಪ್ಪಿ ವದ್ದಿಕೆರೆ ಬಳಿಯ ಜಮೀನಿನಲ್ಲಿ ಬಿದ್ದಿದೆ. ಇನ್ನು ಡಿಆರ್‌ಡಿಒ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಲಿದ್ದಾರೆ

