
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿರೋ ಅನ್ನಭಾಗ್ಯ ಯೋಜನೆ (Annabhagya Scheme) ಜಾರಿಗೆ ಬಂದು ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಬಿಪಿಎಲ್ ಕಾರ್ಡ್‍ನ (BPL Card) ಪ್ರತಿಯೊಬ್ಬರಿಗೂ ತಲಾ 10 ಕೆಜಿ ಅಕ್ಕಿ ಕೊಡ್ತಿವಿ ಅಂದಿದ್ದ ಸರ್ಕಾರದ 10 ಕೆಜಿ ಅಕ್ಕಿ ನೀಡಲು ಸಾಧ್ಯವಾಗದೇ 5 ಕೆಜಿ ಅಕ್ಕಿಯ ಬದಲಿಗೆ ಖಾತೆಗೆ ಹಣ ಹಾಕ್ತಿದ್ದಾರೆ.

ಯಾರ ಮನೆಯಲ್ಲಿ ವೈಟ್ ಬೋರ್ಡ್ ಕಾರ್ (White Board Card) ಇದೇಯೋ ಅಂತಹವರ ಬಿಪಿಎಲ್ ಕಾರ್ಡ್ ಅಮಾನ್ಯ ಮಾಡಲು ಆಹಾರ ಇಲಾಖೆ ಆರ್‍ಟಿಓ ಬಳಿ ಮಾಹಿತಿ ಕೇಳಿದೆ. ಸದ್ಯ ರಾಜ್ಯದಲ್ಲಿ ಒಟ್ಟು 44.62.107 ವೈಟ್ ಬೋರ್ಡ್ ಕಾರುಗಳ ಬಗ್ಗೆ ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ಕಳೆದ ವರ್ಷ ವೈಟ್‍ಬೋರ್ಡ್ ಹೊಂದಿರುವವರ ಒಟ್ಟು 12,100 ಕಾರ್ಡ್‍ಗಳನ್ನ ಆಹಾರ ಇಲಾಖೆ ರದ್ದು ಮಾಡಿದ್ದು, ಇದರಲ್ಲಿ ಐಷಾರಾಮಿ ಕಾರುಗಳಾದ ಬೇನ್ಸ್, ರ್ಆಡಿ ಸೇರಿದಂತೆ ಅನೇಕ ಟಾಪ್‍ಕ್ಲಾಸ್ ಕಾರುಗಳು ಹೊಂದಿದ್ದವರು ಇದ್ದಾರೆ. ಜೊತೆಗೆ 20,000 ಸರ್ಕಾರಿ ನೌಕರರು ಸಹ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಇವರ ಕಾರ್ಡ್‍ಗಳನ್ನ ರದ್ದು ಮಾಡಿ ಒಟ್ಟಾರೆ 13 ಕೋಟಿ ದಂಡವನ್ನ ವಸೂಲಿ ಮಾಡಿದ್ದಾರೆ.

ಈಗ ರಾಜ್ಯದಲ್ಲಿರೋ ಕಾರ್ ಗಳ ಸಂಖ್ಯೆ ಸಿಕ್ಕಿದೆ. ಕಳೆದ 15 ದಿನಗಳಿಂದ ಫಲನುಭವಿಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ಶುರು ಮಾಡಿದ್ದು, ಇ ಜನ್ಮ ಪೋರ್ಟಲ್ ಮೂಲಕ ಸಾವನ್ನಪ್ಪಿರುವವ ಮಾಹಿತಿಯನ್ನ ಪಡೆದುಕೊಂಡಿದೆ. ಇದರಲ್ಲಿ ಬಿಪಿಎಲ್ ಕಾರ್ಡ್‍ನಲ್ಲಿರುವ ಬರೋಬ್ಬರಿ 4,65,000 ಮೃತಪಟ್ಟಿದ್ದು, ಈಗ ಈ ಹೆಸರುಗಳನ್ನ ಬಿಪಿಎಲ್ ಕಾರ್ಡ್‍ನಿಂದ ಡಿಲೀಟ್ ಮಾಡೋ ಪ್ರಕ್ರಿಯೆ ಶುರು ಮಾಡಲಾಗಿದೆ ಅಂತಾ ಆಹಾರ ಇಲಾಖೆಯ ಎಂಡಿ ಜ್ಞಾನೇಂದ್ರ ತಿಳಿಸಿದ್ದಾರೆ.

ಇದರಿಂದ ಮುಂದಿನ ತಿಂಗಳಿಂದ ಆಹಾರ ಇಲಾಖೆಗೆ 8 ಕೋಟಿಯಷ್ಟು ಹಣ ಉಳಿತಾಯ ಆಗಲಿದೆ.. ಇನ್ನೂ ಈ ಪ್ರಕ್ರಿಯೆ ನಡೆಯುತ್ತಿದ್ದು, ಸದ್ಯಕ್ಕೆ ಹೀಗೆ ಸತ್ತವರ ಹೆಸರನಲ್ಲಿ ರೇಷನ್ ಪಡೆಯುತ್ತಿರೋರಿಗೆ ದಂಡವನ್ನ ಹಾಕುವ ಪ್ಲಾನ್ ಕೂಡ ಮಾಡಲಾಗ್ತಿದ್ದು, ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯೋದಾಗಿ ಎಂಡಿ ತಿಳಿಸಿದ್ದಾರೆ.
ಬಿಪಿಎಲ್ ಕಾರ್ಡ್ ಮಾನದಂಡ ಏನು?: ವಾರ್ಷಿಕ ಆದಾಯ 1.2 ಲಕ್ಷ ಮೀರಬಾರದು. 3 ಹೆಕ್ಟರ್‍ಗಿಂತ ಹೆಚ್ಚಿನ ಒಣಭೂಮಿ ಹೊಂದಿರಬಾರದು. ವೈಟ್‍ಬೋರ್ಡ್ ನಾಲ್ಕು ಚಕ್ರದ ವಾಹನ ಇರಬಾರದು. ಯಾವುದೇ ಸರ್ಕಾರಿ ನೌಕರರಾಗಿರಬಾರದು. ನಗರದ ಭಾಗದಲ್ಲಿ ಮನೆಯ ವಿಸ್ತೀರ್ಣ 1000 ಅಡಿ ಮೀರಬಾರದು. ವಾಣಿಜ್ಯ ತೆರಿಗೆ, ಆದಾಯ ತೆರಿಗೆ, ಐಟಿ ರಿಟನ್ರ್ಸ್ ಪಾವತಿದಾರರಾಗಿರಬಾರದು.