| Edited By: M. Ashraf Kammaje
Updated on:Aug 18, 2023 | 8:20 AM

Kalaburagi News: 1992 ರಿಂದಲೇ ಕಳ್ಳತನ ಮಾಡುತ್ತಿದ್ದ ಉದಯ್ ಪಾರ್ದಿ ಎಂಬ ಆರೋಪಿಯನ್ನು ನಿನ್ನೆ(ಆ.17) ಕಲಬುರಗಿಯ ಅಶೋಕ ನಗರ ಠಾಣೆಯ ಪೊಲೀಸರು ಬಂಧಿಸಿ, ಕರೆತರುತ್ತಿದ್ದರು. ಈ ವೇಳೆ ಆತ ಮೃತಪಟ್ಟಿದ್ದ. ಇದನ್ನು ಪೊಲೀಸರು ಹೃದಯಾಘಾತದಿಂದ ಆಗಿದೆ ಎಂದಿದ್ದರು. ಆದರೆ, ಇದೀಗ ಮೃತನ ಕುಟುಂಬದವರು ಕೊಲೆ ಎಂದು ಆರೋಪಿಸಿದ್ದಾರೆ.
ಕಲಬುರಗಿ, ಆ.18: ನಿನ್ನೆ(ಆ.17) ಕಲಬುರಗಿ(Kalburagi)ಯ ಅಶೋಕ ನಗರ ಠಾಣೆಯ ಪೊಲೀಸರು ಕಳ್ಳತನ (Theft) ಆರೋಪಿಯನ್ನು ವಿಚಾರಣೆಗೆ ಕರೆತರುತ್ತಿದ್ದರು. ಈ ವೇಳೆ ಉದಯ್ ಪಾರ್ದಿ(55) ಮೃತಪಟ್ಟಿದ್ದರು. ಬಳಿಕ ಪೊಲೀಸರು(Police) ಹೃದಯಾಘಾತದಿಂದ ಆರೋಪಿ ಸಾವನ್ನಪ್ಪಿರುವುದಾಗಿ ಹೇಳಿದ್ದರು. ಆದ್ರೆ, ಉದಯ್ನನ್ನು ಪೊಲೀಸರೇ ಹೊಡೆದು ಸಾಯಿಸಿದ್ದಾರೆ ಎಂದು ಆರೋಪ ಮಾಡಿರುವ ಕುಟುಂಬದವರು, ಈ ಬಗ್ಗೆ ಅಶೋಕ ನಗರ ಠಾಣೆಯಲ್ಲಿ ಮೂವರು ಸಿಬ್ಬಂದಿ ವಿರುದ್ಧ ದೂರು ನೀಡಿದ್ದರು. ಇದೀಗ ಕುಟುಂಬದವರು ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ.

1992 ರಿಂದಲೇ ಕಳ್ಳತನ ಮಾಡ್ತಿದ್ದ ಮೃತ ಉದಯ್ ಪಾರ್ದಿ
ಇನ್ನು ಉದಯ್ ಪಾರ್ದಿ 1992 ರಿಂದಲೇ ಕಳ್ಳತನದಲ್ಲಿ ತೊಡಗಿದ್ದ. ಈ ಹಿನ್ನಲೆ ಆತನ ಮೇಲೆ ಆಗಲೇ ಪೊಲೀಸರು ಎಂಓಬಿ ಸೀಟ್ ಓಪನ್ ಮಾಡಿದ್ದರು. ಕಳ್ಳತನ ಮಾಡುವುದು, ಕಳ್ಳತನ ವಸ್ತುಗಳನ್ನು ಖರೀದಿಸಿ ಮತ್ತೆ ಮಾರಾಟ ಮಾಡುತ್ತಿದ್ದ ಉದಯ್ನನ್ನು ಪೊಲೀಸರು ಬಂಧಿಸಿ ಕರೆತರುವ ವೇಳೆ ಈ ದುರ್ಘಟನೆ ನಡೆದಿದೆ. ಇದೀಗ ಈ ಕುರಿತು ಕೊಲೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ತನಿಖೆ ನಡೆಸಿದ ಮೇಲೆ ಕೊಲೆಯೋ ಅಥವಾ ಹೃದಯಾಘಾತದಿಂದ ಮೃತಪಟ್ಟಿದ್ದಾನೋ ತಿಳಿಯಲಿದೆ.
