
Uttar Pradesh Shooting Incident: ಆರೋಪಿಗಳಾದ ಗುಫ್ರಾನ್ ಮತ್ತು ನದಿಮ್‍ರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಬೈಕ್‍ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. 3ನೇ ಆರೋಪಿ ತಾರಿಕ್ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಶೋಕ್ ಮೀನಾ ತಿಳಿಸಿದ್ದಾರೆ.
- ಮಗಳನ್ನು ಕೂರಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಗುಂಡಿನ ದಾಳಿ
- ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಹತ್ತಿರದಿಂದಲೇ ಗುಂಡು ಹಾರಿಸಿ ಎಸ್ಕೇಪ್
- ಸಿಸಿಟಿವಿಯಲ್ಲಿ ಸೆರೆಯಾಗಿದ ಭಯಾನಕ ಗುಂಡಿನ ದಾಳಿ ದೃಶ್ಯ
https://twitter.com/Delhiite_/status/1691053266430492672?ref_src=twsrc%5Etfw%7Ctwcamp%5Etweetembed%7Ctwterm%5E1691053266430492672%7Ctwgr%5E76ccda5947479ef66b229476770d55b19d0d2dec%7Ctwcon%5Es1_c10&ref_url=https%3A%2F%2Fzeenews.india.com%2Fkannada%2Fviral%2Fman-shot-at-close-range-in-shahjahanpur-was-carrying-little-daughter-on-shoulders-152614
ನವದೆಹಲಿ: ಹೆಗಲ ಮೇಲೆ ಮಗಳನ್ನು ಕೂರಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಉತ್ತರಪ್ರದೇಶದ ಶಹಜಹಾನ್‌ಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಹೊರಗೆ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿದ್ದಾರೆ. ಘಟನೆಯಲ್ಲಿ ಆತನಿಗೆ ಗಂಭೀರ ಗಾಯಗಳಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಆತನ ಪುತ್ರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಈ ಮೊದಲೇ ಪ್ಲಾನ್ ಮಾಡಿಕೊಂಡು ಬೈಕ್‍ನಲ್ಲಿ ಬಂದಂತೆ ಕಾಣುವ ದುಸ್ಕರ್ಮಿಗಳು ತುಂಬಾ ಹತ್ತಿರದಿಂದಲೇ ಗುಂಡಿನ ದಾಳಿ ನಡೆಸಿದ್ದಾರೆ. ಕಿರಿದಾದ ಪ್ರದೇಶದ ರಸ್ತೆಯಲ್ಲಿ ತನ್ನ ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ 2 ಬೈಕ್‍ಗಳು ಆಗಮಿಸುತ್ತವೆ. ಬೈಕ್‍ನಿಂದ ಕೆಳಗೆ ಇಳಿಯುವ ಅಪರಿಚತನೊಬ್ಬ ವ್ಯಕ್ತಿಯ ಹತ್ತಿರ ಬಂದು ಗುಂಡು ಹಾರಿಸುತ್ತಾನೆ.
ಗುಂಡಿನ ದಾಳಿಯಿಂದ ವ್ಯಕ್ತಿ ಹಠಾತ್ ಕುಸಿದುಬೀಳುತ್ತಾನೆ. ಈ ವೇಳೆ ಗುಂಡು ಹಾರಿಸಿದ ವ್ಯಕ್ತಿ ಮುಂದೆ ನಿಂತಿದ್ದ ಬೈಕ್ ಹತ್ತಿ ಎಸ್ಕೇಪ್ ಆಗುತ್ತಾನೆ. ಈ ಎಲ್ಲಾ ಘಟನೆಯು ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡಲು ಭಯಾನಕವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಯಿಂದ ಗಾಯಗೊಂಡಿರುವ ವ್ಯಕ್ತಿಯನ್ನು ಶೋಯೆಬ್ ಎಂದು ಗುರುತಿಸಲಾಗಿದೆ. ಆತ ಸ್ಥಳೀಯ ವ್ಯಾಪಾರಿಯಾಗಿದ್ದು, ಅಂದು ತನ್ನ ಮಗಳೊಂದಿಗೆ ಶಹಜಹಾನ್‌ಪುರದಲ್ಲಿರುವ ಸಂಬಂಧಿಕರ ಮನೆಗೆ ಹೋಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಾದ ಗುಫ್ರಾನ್ ಮತ್ತು ನದಿಮ್‍ರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಬೈಕ್‍ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. 3ನೇ ಆರೋಪಿ ತಾರಿಕ್ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಶೋಕ್ ಮೀನಾ ತಿಳಿಸಿದ್ದಾರೆ.