
ಸಿಟಿ ಗೋಲ್ಡ್ ಮಂಗಳೂರು ಇದರ ವತಿಯಿಂದ ಆಗಸ್ಟ್ 15 ರ ಸ್ವಾತಂತ್ರ್ಯೊತ್ಸವದ ಪ್ರಯುಕ್ತ ಸಿಟಿ ಗೋಲ್ಡ್ ಕಂಕನಾಡಿ ಮಳಿಗೆಯಲ್ಲಿ 5 ರಿಂದ 10 ವರ್ಷ ಪ್ರಾಯದ ಒಳಗಿನ ಮಕ್ಕಳಿಗೆ ಚಿತ್ರ ಕಲೆ ಸ್ಪರ್ಧೆ ನಡೆಯಿತು.


ಇತರೆ ಸ್ಪರ್ದೆಗಳಾದ ಹಾಡುಗಾರಿಹೆ, ಕ್ವಿಜ್ ಹಾಗು ಇನ್ನಿತರ ಸ್ಪರ್ಧಾ ಕಾರ್ಯಕ್ರಮಗಳು ಮತ್ತು ಸಾಂಸ್ಕ್ರಿತಿಕ ಕಾರ್ಯಕ್ರಮಗಳು ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನವನ್ನು ಸಮೀಹ ಫಾತಿಮ ಕಂಕನಾಡಿ ಪಡೆದುಕೊಂಡರೆ ದ್ವಿತೀಯ ಸ್ಥಾನವನ್ನು ಹವ್ವಾ ಲುತ್ಫಿಯಾ ಮೆಲ್ಕಾರ್ ಹಾಗು ತ್ರತೀಯ ಸ್ಥಾನವನ್ನು ಹಲೀಮಾ ರಮೀನಾ ಕಂಕನಾಡಿ ಇವರು ಪಡೆದುಕೊಂಡರು. ಈ ಸಂಧರ್ಬದಲ್ಲಿ ಮುಖ್ಯ ಅತಿಥಿಯಾಗಿ ಹಝ್ಮತ್ ಅಲಿ ಪೊಲೀಸ್ ಇನ್ಸ್ಪೆಕ್ಟರ್ ಮಂಗಳೂರು ಇವರು ಮಾತನಾಡಿ ಸಿಟಿ ಗೋಲ್ಡ್ ಸಂಸ್ಥೆ ವಿದ್ಯಾರ್ಥಿಗಳಿಗೆ ಕಲೆಯನ್ನು ಪ್ರೋತ್ಸಾಹಿಸಲು ಉತ್ತಮ ಪ್ರೇರಣೆಯನ್ನು ನೀಡಿದ್ದಾರೆ. ಹಾಗು ಚಿತ್ರಕಲಾ ಅದ್ಯಾಪಕರಾದ ಬಿ ಎಮ್ ರಫೀಕ್ ತುಂಬೆ ಇವರು ಮಾತನಾಡಿ ವಿದ್ಯಾರ್ಥಿಗಳಿಗೆ ಭಾರತದ ಭೂಪಟವನ್ನು ಪರಿಚಯಿಸುವ ಮೂಲಕ ಈ ಸಂಸ್ಥೆಯು ಪ್ರೇರಣೆ ನೀಡಿದೆ ಎಂದು ಹೇಳಿದರು ಸಂಸ್ಥೆಯ ಬ್ರಾಂಚ್ ಮ್ಯಾನೇಜರ್ ಅಹ್ಮದ್ ಹಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ, ಗ್ರಾಹಕರು ಹಾಗು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.




