
77 ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ ಕಾವಳಕಟ್ಟೆಯಲ್ಲಿ ನಡೆಯಿತು.
ಧ್ವಜರೋಹಣವನ್ನು ಸರಪಾಡಿ ಬ್ಲಾಕ್ ಅಧ್ಯಕ್ಷರಾದ ಉಸ್ಮಾನ್ ಅಲಂಗಾಲು ನೆರೆವೇರಿಸಿದರು.
ಮುಖ್ಯ ಅತಿಥಿಯಾಗಿ ಎಸ್ಡಿಪಿಐ ದ ಕ ಜಿಲ್ಲಾ ಸದಸ್ಯರಾದ ಅಬೂಬಕ್ಕರ್ ಮದ್ದ, ,ಬಿಸ್ಮಿಲ್ಲಾ ಜುಮ್ಮಾ ಮಸೀದಿ ಅಧ್ಯಕ್ಷರಾದ ಅಬೂಸಾಲಿ ಏನ್ ಸಿ ರೋಡ್, ಬಿಸ್ಮಿಲ್ಲಾ ಜುಮ್ಮಾ ಮಸೀದಿ ಖತೀಬರಾದ ಎ ಎಂ ಆದಂ ಉಸ್ತಾದ್ ದೂಮಲಿಕೆ ಹಾಗೂ ರಝಕ್ ಉಸ್ತಾದ್, ಮಣ್ಣಾನಿ ಉಸ್ತಾದ್ ಹಾಗೂ ಕಾವಳ ಮುಡೂರು ಗ್ರಾಮ ಪಂಚಾಯತ್ ಸದಸ್ಸೆರಾದ ಶೈನಝ್ ಏನ್ ಸಿ ರೋಡ್,ಸಫಾ ಸಲ್ಮಾ ಕಾವಳಕಟ್ಟೆ ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಮುಸ್ತಾಫ ದೂಮಲಿಕೆ ನಿರೂಪಿಸಿ ಖಲೀಲ್ ವಗ್ಗ ಧನ್ಯವಾದಗೈದರು.




