Ashraf Kammaje |
Updated on:Aug 15, 2023 | 7:52 AM

ಕೆಂಪುಕೋಟೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶವನ್ನುದ್ದೇಶಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಕೆಂಪುಕೋಟೆ ತಲುಪಿದ ಪ್ರಧಾನಿ ಮೋದಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮತ್ತು ರಕ್ಷಣಾ ಕಾರ್ಯದರ್ಶಿ ಗಿರಿಧರ್ ಸ್ವಾಗತಿಸಿದರು. ಈ ಸಮಾರಂಭಕ್ಕೆ ದೇಶಾದ್ಯಂತ ವಿವಿಧ ವೃತ್ತಿಗೆ ಸೇರಿದ 1800 ಮಂದಿಯನ್ನು ತಮ್ಮ ಸಂಗಾತಿಗಳೊಂದಿಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು.

ಮಣಿಪುರದಲ್ಲಿ ಕೆಲವು ದಿನಗಳ ಹಿಂದೆ ಹಿಂಸಾಚಾರ ನಡೆದಿತ್ತು, ಸಾಕಷ್ಟು ಮಂದಿ ಜೀವ ಕಳೆದುಕೊಂಡರು, ಆದರೆ ಕೆಲವು ದಿನಗಳಿಂದ ಮತ್ತೆ ಶಾಂತಿ ನೆಲೆಸಲು ಆರಂಭವಾಗಿದೆ, ಇದೇ ರೀತಿಯಲ್ಲಿ ಶಾಂತಿಯಿಂದಿರಿ ಸರ್ಕಾರ ಸದಾ ಮಣಿಪುರದ ಜತೆಗಿರಲಿದೆ, ಜನರ ಸುರಕ್ಷೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ (Narendra Modi) 77ನೇ ಸ್ವಾತಂತ್ರ್ಯದಿನವನ್ನುದ್ದೇಶಿಸಿ ಮಾತನಾಡಿದ್ದಾರೆ. ಪ್ರಧಾನಿ ಮೋದಿ ಅವರು ಸತತ 10ನೇ ಬಾರಿಗೆ ಕೆಂಪು ಕೋಟೆಯ ಆವರಣದಿಂದ ಭಾಷಣ ಮಾಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಕೆಂಪು ಕೋಟೆಯಿಂದ ಭಾಷಣ ಮಾಡುತ್ತಿದ್ದಾರೆ. ದೇಶದ ಸ್ವಾತಂತ್ರ್ಯದ ಸಂಭ್ರಮಾಚರಣೆಯಲ್ಲಿ ಕೊಡುಗೆ ನೀಡಿದ ಮತ್ತು ತ್ಯಾಗ ಮಾಡಿದವರಿಗೆ ನಾನು ಇಂದು ವಂದಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು

ನೈಸರ್ಗಿಕ ವಿಕೋಪ
ಈ ಬಾರಿಯ ನೈಸರ್ಗಿಕ ವಿಕೋಪವು ದೇಶದ ಹಲವು ಭಾಗಗಳಲ್ಲಿ ಊಹಿಸಲಾಗದ ಬಿಕ್ಕಟ್ಟನ್ನು ಸೃಷ್ಟಿಸಿದೆ. ಈ ಬಿಕ್ಕಟ್ಟಿನಿಂದ ಬಳಲುತ್ತಿರುವ ಎಲ್ಲಾ ಕುಟುಂಬಗಳಿಗೆ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ ಆ ಎಲ್ಲ ತೊಂದರೆಗಳಿಂದ ಮುಕ್ತಿ ಹೊಂದಿ ಕ್ಷಿಪ್ರಗತಿಯಲ್ಲಿ ಮುನ್ನಡೆಯಲಿದೆ. ನಾನು ಈ ನಿಮಗೆ ಭರವಸೆ ನೀಡುತ್ತೇನ ಎಂದು ಮೋದಿ ಹೇಳಿದರು.

ಅರಬಿಂದೋ ಅವರನ್ನು ನೆನೆದ ಪ್ರಧಾನಿ ಮೋದಿ
ಇಂದು, ಆಗಸ್ಟ್ 15, ಮಹಾನ್ ಕ್ರಾಂತಿಕಾರಿ ಅರಬಿಂದೋ ಅವರ 150 ನೇ ವರ್ಷ ಪೂರ್ಣಗೊಳ್ಳುತ್ತಿದೆ. ಈ ವರ್ಷ ಸ್ವಾಮಿ ದಯಾನಂದ ಸರಸ್ವತಿಯ 150ನೇ ಜನ್ಮದಿನದ ವರ್ಷ. ಈ ವರ್ಷ ಮೀರಾಬಾಯಿ ಭಕ್ತಿ ಯೋಗದ 525 ನೇ ವರ್ಷ ಅಥವಾ ಪವಿತ್ರ ವರ್ಷ. ಈ ಬಾರಿ ನಾವು ಜನವರಿ 26 ರಂದು ಆಚರಿಸುವಾಗ, ಇದು ನಮ್ಮ ಗಣರಾಜ್ಯೋತ್ಸವದ 75 ನೇ ವಾರ್ಷಿಕೋತ್ಸವವಾಗಿದೆ ಎಂದರು.
1 ಸಾವಿರ ವರ್ಷಗಳ ಭಾರತದ ಸ್ಥಿತಿಯನ್ನು ನೆನೆದ ಮೋದಿ
ಸ್ವಾತಂತ್ರ್ಯದ ಕನಸನ್ನು ಹೊತ್ತು ಬದುಕದ ಭಾರತೀಯರೇ ಇಲ್ಲ. ತ್ಯಾಗ ಮತ್ತು ತಪಸ್ಸಿನ ವ್ಯಾಪಕ ರೂಪ, ಹೊಸ ನಂಬಿಕೆಯನ್ನು ಜಾಗೃತಗೊಳಿಸಿದ ಆ ಕ್ಷಣ, ಅಂತಿಮವಾಗಿ 1947 ರಲ್ಲಿ ದೇಶವು ಸ್ವತಂತ್ರವಾಯಿತು. 1000 ವರ್ಷಗಳ ಗುಲಾಮಗಿರಿಯ ಸಮಯದಲ್ಲಿ ಪಾಲಿಸಿದ ಕನಸುಗಳು ನನಸಾಗುತ್ತಿರುವುದನ್ನು ದೇಶ ಕಂಡಿತು. ದೇಶದ ಮುಂದೆ ಮತ್ತೊಮ್ಮೆ ಅವಕಾಶ ಬಂದಿರುವುದನ್ನು ನಾನು ನೋಡುತ್ತಿದ್ದೇನೆ. ಇದು ಅಮೃತಕಾಲದ ಮೊದಲ ವರ್ಷ, ಎಲ್ಲರ ಕಲ್ಯಾಣ ಮತ್ತು ಎಲ್ಲರ ಸಂತೋಷಕ್ಕಾಗಿ ಕೆಲಸ ಮಾಡುತ್ತೇನೆ.

ಕೆಂಪುಕೋಟೆ ತಲುಪಿದ ಪ್ರಧಾನಿ ಮೋದಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮತ್ತು ರಕ್ಷಣಾ ಕಾರ್ಯದರ್ಶಿ ಗಿರಿಧರ್ ಸ್ವಾಗತಿಸಿದರು. ಈ ಸಮಾರಂಭಕ್ಕೆ ದೇಶಾದ್ಯಂತ ವಿವಿಧ ವೃತ್ತಿಗೆ ಸೇರಿದ 1800 ಮಂದಿಯನ್ನು ತಮ್ಮ ಸಂಗಾತಿಗಳೊಂದಿಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು.

ಈ ವಿಶೇಷ ಅತಿಥಿಗಳಲ್ಲಿ 600 ಕ್ಕೂ ಹೆಚ್ಚು ಗ್ರಾಮಗಳ 400 ಸರಪಂಚ್ಗಳು, ರೈತ ಉತ್ಪಾದಕ ಸಂಸ್ಥೆಗಳ ಯೋಜನೆಯ 250 ರೈತರು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮತ್ತು ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆಯ ತಲಾ 50 ಮಂದಿ ಭಾಗವಹಿಸಿದ್ದಾರೆ.
ಸೆಂಟ್ರಲ್ ವಿಸ್ತಾ ಕಟ್ಟಡ ಕಟ್ಟಿದ 50 ಮಂದಿ ಶ್ರಮ ಯೋಗಿ ಕಾರ್ಮಿಕರು, 50 ಖಾದಿ ಕಾರ್ಮಿಕರು, ಗಡಿಯಲ್ಲಿ ರಸ್ತೆ ನಿರ್ಮಾಣ ಮಾಡಿದ 50 ಮಂದಿ, ಅಮೃತ್ ಸರೋವರ ಮತ್ತು ಹರ್ ಘರ್ ಜಲ ಯೋಜನೆಯಲ್ಲಿ ತೊಡಗಿದ 50 ಮಂದಿ, 50 ಪ್ರಾಥಮಿಕ ಶಾಲಾ ಶಿಕ್ಷಕರು, 50 ದಾದಿಯರು ಮತ್ತು 50 ಮೀನುಗಾರರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 10 ಸಾವಿರ ಪೊಲೀಸ್ ಸಿಬ್ಬಂದಿ ಹಾಗೂ ಒಂದು ಸಾವಿರ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಕೆಂಪು ಕೋಟೆಯಲ್ಲೂ ಆ್ಯಂಟಿ ಡ್ರೋನ್ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಪ್ರಧಾನಿ ಮತ್ತು ಇತರ ವಿವಿಐಪಿ ಅತಿಥಿಗಳ ಭದ್ರತೆಗಾಗಿ ಸ್ನೈಪರ್ಗಳು, SWAT ಕಮಾಂಡೋಗಳು ಮತ್ತು ಶಾರ್ಪ್ಶೂಟರ್ಗಳನ್ನು ನಿಯೋಜಿಸಲಾಗುತ್ತಿದೆ.