
▪️ಅಧ್ಯಕ್ಷರಾಗಿ “ಅಬ್ದುಲ್ ರಝಾಕ್ ಕೆನರಾ” ಹಾಗೂ ಉಪಾಧ್ಯಕ್ಷರಾಗಿ ಬಾಬು ಎನ್ ಸವಣೂರು,ಅಬ್ದುಲ್ ಕಲಾಂ ಸುಳ್ಯ ಆಯ್ಕೆ
ಸುಳ್ಯ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರದ ಮಧ್ಯಂತರ ಪ್ರತಿನಿಧಿಗಳ ಸಭೆಯು ಶುಕ್ರವಾರ ಸವಣೂರಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು .ನಿರ್ಗಮಿತ ಅದ್ಯಕ್ಷರಾದ ಅಬ್ದುಲ್ ಕಲಾಂರವರ ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಳೆದ ಒಂದೂವರೆ ವರ್ಷಗಳ ಅವದಿಯ ಪಕ್ಷದ ಚಟುವಟಿಕೆಗಳ ವರದಿಯನ್ನು ಕಾರ್ಯದರ್ಶಿ ರಫೀಕ್ ಎಂ ಎ ಮಂಡಿಸಿದರು . ನಂತರ ಜಿಲ್ಲಾ ವೀಕ್ಷಕರ ಸಮ್ಮುಖದಲ್ಲಿ ಕ್ಷೇತ್ರ ಸಮಿತಿಯಲ್ಲಿ ಕೆಲವೊಂದು ಬದಲಾವಣೆ ಮಾಡಿ ಈ ಕೆಳಕಂಡ ನೂತನ ಸಮಿತಿಯನ್ನು ಅಂತರಿಕ ಚುನಾವಣೆ ಮೂಲಕ ರಚಿಸಲಾಗಿದೆ .

ನೂತನ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಕೆನರಾ,ಉಪಾಧ್ಯಕ್ಷರಾಗಿ ಅಬ್ದುಲ್ ಕಲಾಂ ಸುಳ್ಯ, ಹಾಗೂ ಬಾಬು ಎನ್ ಸವಣೂರು, ಕಾರ್ಯದರ್ಶಿಗಳಾಗಿ ರಫೀಕ್ ಎಂ ಎ ಹಾಗೂ ಸದ್ದೀಕ್ ಅಲೆಕ್ಕಾಡಿ, ಜೊತೆ ಕಾರ್ಯದರ್ಶಿಯಾಗಿ ಶರೀಫ್ ನಿಂತಿಕಲ್,ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ಬೆಳ್ಳಾರೆ ಆಯ್ಕೆಯಾದರು.
ಸಮಿತಿ ಸದಸ್ಯರಾಗಿ ಅಡ್ವಕೇಟ್ ಕಬೀರ್ ಆತೂರು,ರಝಾಕ್ ಸುಳ್ಯ, ಬಶೀರ್ ಆತೂರು,ಹಾಗೂ ಅಶ್ರಫ್ ಟರ್ಲಿ ಆಯ್ಕೆಯಾದರು.

ಚುನಾವಣಾ ವೀಕ್ಷಕರಾಗಿ
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು ಹಾಗೂ ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಮದ್ದ ಆಗಮಿಸಿ ಚುನಾವಣೆ ನಡೆಸಿಕೊಟ್ಟರು
