
ಮಂಗಳೂರು ಅ 10: ಮಂಗಳೂರು ತಾಲೂಕಿನ ಗುರುಪುರ ಗ್ರಾಮ ಪಂಚಾಯತ್ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯು ಇಂದು ನಡೆಯಿತು ಅಡ್ಯಾರ್ ಅರ್ಕುಳ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ SDPI ಬೆಂಬಲಿತ ಅಭ್ಯರ್ಥಿ ಯಾಸೀನ್ ಅರ್ಕುಳ ಮತ್ತು ಉಪಾಧ್ಯಕ್ಷರಾಗಿ ಜೋಹರಾ ಆಯ್ಕೆಯಾದರು

ಅಡ್ಯಾರ್ ಅರ್ಕುಳ ಗ್ರಾಮ ಪಂಚಾಯತ್ ಒಟ್ಟು 31 ಸ್ಥಾನಗಳಲ್ಲಿ SDPI ಬೆಂಬಲಿತ 10 ಸದಸ್ಯರು, ಕಾಂಗ್ರೆಸ್ ಬೆಂಬಲಿತ 13, ಬಿಜೆಪಿ ಬೆಂಬಲಿತ 6, 1 ವಿಧಿವಶ, 1 ಪಕ್ಷೇತರ ಇರುವ ಅಡ್ಯಾರ್ ಅರ್ಕುಳ ಗ್ರಾಮ ಪಂಚಾಯತ್ ನಲ್ಲಿ ಇಂದು ನಡೆದ ಚುನಾವಣೆಯಲ್ಲಿ SDPI ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯಿತು

ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ SDPI ಬೆಂಬಲಿತ ಅಭ್ಯರ್ಥಿ ಯಾಸೀನ್ ಅರ್ಕುಳ 15 ಮತಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಶ್ರಫ್ 8 ಮತಗಳು
ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ SDPI ಬೆಂಬಲಿತ ಅಭ್ಯರ್ಥಿ ಜೋಹರ 15 ಮತಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಖುಬುರ 8 ಮತಗಳನ್ನು ಪಡೆದರು ಬಿಜೆಪಿ ಬೆಂಬಲಿತ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಗೈರು ಹಾಜರಾಗಿದ್ದರು
