
ಚುನಾವಣಾಧಿಕಾರಿಯಾಗಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ ಆಗಮಿಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಅಧ್ಯಕ್ಷರಾಗಿ ನವಾಝ್ ಸಜಿಪ, ಕಾರ್ಯದರ್ಶಿಯಾಗಿ ಶಾಫಿ ಸಜಿಪ, ಕೋಶಾಧಿಕಾರಿಯಾಗಿ ಸದಖ ಸಜಿಪ, ಉಪಾಧ್ಯಕ್ಷರಾಗಿ ಅಲಿ ಅಬ್ದುಲ್ಲ, ಜೊತೆ ಕಾರ್ಯದರ್ಶಿಯಾಗಿ ರಿಝ್ವಾನ್ ಸಜಿಪ ಮತ್ತು ಸಮಿತಿ ಸದಸ್ಯರಾಗಿ ಹಾರಿಸ್ ಬೈಲಗುತ್ತು, ನೌಷಾದ್ ಸಜಿಪ, ನವಾಝ್ ಸಜಿಪ, ಲತೀಫ್ ಸಜಿಪ ಆಯ್ಕೆಯಾದರು.

ಗ್ರಾಮ ಸಮಿತಿ ಮಾಜಿ ಅಧ್ಯಕ್ಷರಾದ ರಶೀದ್ ಸಜಿಪ ಅವರು ನೂತನ ಅಧ್ಯಕ್ಷರಾದ ನವಾಝ್ ಸಜಿಪ ಇವರಿಗೆ ಪಕ್ಷದ ಧ್ವಜವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಜಿಪನಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್.ಎನ್ ಇಕ್ಬಾಲ್, ಸದಸ್ಯರಾದ ಇಸ್ಮಾಯಿಲ್ ಗೋಳಿಪಡ್ಪು ಉಪಸ್ಥಿತರಿದ್ದರು.

