
ಬಂಟ್ವಾಳ :ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲು ಇದರ ಅಧೀನದಲ್ಲಿ ಇರುವ ಮೂಹಿಯ್ಯುದ್ದೀನ್ ಮದರದ ತರಗತಿಯನ್ನು ಸ್ಮಾರ್ಟ್ ಕ್ಲಾಸ್ ರೂಮಿನ ಉದ್ಘಾಟನೆಯನ್ನು ಕೇಂದ್ರ ಜುಮಾ ಮಸೀದಿಯ ಖತೀಬರಾದ ಅಶ್ರಫ್ ಫೈಝಿ ಉದ್ಘಾಟನೆ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ಜಮಾತ್ ಅಧ್ಯಕ್ಷರಾದ ಸಯ್ಯದ್ ಫಲುಲ್ ತಂಗಳ್ ವಹಿಸಿದ್ದರು.

ಸಮಾರಂಭದಲ್ಲಿ ಮಸೀದಿಯ ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಶಾಂತಿ ಅಂಗಡಿ ಕಾರ್ಯದರ್ಶಿಯರಾದ ಆದಮ್ ಪಲ್ಲ ಹಾಗೂ ಅಶ್ರಫ್ ಶಾಂತಿಯಂಗಡಿ ಬಂಟ್ವಾಳ ಸುನ್ನಿ ಮಹಲ್ಲ್ ಫೆಡರೇಷನ್ ಅಧ್ಯಕ್ಷರಾದ ಇರ್ಷಾದ್ ಹುಸೈನ್ ದಾರಿಮಿ, ಮಿತ್ತಬೈಲ್ ಜಮಾತ್ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಸಾಗರ್. ಸದರ್ ಉಸ್ತಾದ್ ಇಬ್ರಾಹಿಂ ದಾರಿಮಿ ಉಪಸ್ಥಿತರಿದ್ದರು.

ಸಭೆಯಲ್ಲಿ ಭಾಗವಹಿಸಿದ ಮಕ್ಕಳ ಪೋಷಕರು, ಜಮಾತ್ ಸದಸ್ಯರು ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಕಾರ್ಯಕ್ರಮ ನಿರೂಪಿಸಿದರು.

