ಕಾರ್ಕಳ, ಆ 09(hayath tv): ಅಕ್ರಮ ಗೋ-ಸಾಗಾಟ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.ಆ.7ರಂದು ಮುಂಜಾನೆಯ ವೇಳೆ ಕೆರ್ವಾಶೆಯಿಂದ ಸ್ಕಾರ್ಫಿಯೋ ವಾಹನದಲ್ಲಿ ಆರೋಪಿಗಳು ಗೋವುಗಳನ್ನು ಸಾಗಾಟ ನಡೆಸುತ್ತಿದ್ದರು. ಪೊಲೀಸರು ವಾಹನವನ್ನು ಬೆನ್ನಟ್ಟಿದ್ದು, ಬಜಗೋಳಿ ಬಳಿಯಲ್ಲಿ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದರು.ಬಳಿಕ ಕಾರ್ಯಾಚರಣೆ ನಡೆಸಿ ಬಂಟ್ವಾಳ ಫರಂಗಿಪೇಟೆ ನಿವಾಸಿಗಳಾದ ಜಬ್ಬರ್(24), ಹೈದರಾಲಿ(26), ಕಾರ್ಕಳ ಶಿರ್ಲಾಲು ಗ್ರಾಮದ ಪ್ರಸಾದ್ ಪೂಜಾರಿ(23) ಮತ್ತು ಜಗನ್ನಾಥ ಶೆಟ್ಟಿ (58) ಆರೋಪಿಗಳನ್ನು ಬಂಧಿಸಿದ್ದಾರೆ. ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಗ್ರಾಮಾಂತರ ಪಿಎಸ್‌ಐ ದಿಲೀಪ್ ನೇತೃತ್ವದ ಪೊಲೀಸ್ ತಂಡವು ಘಟನೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಪೊಲೀಸರು ಕಾರ್ಯವೈಖರಿ ಶ್ಲಾಘನೆ ವ್ಯಕ್ತವಾಗಿದೆ.