
- ಬಗ್ದಾದ್,ಆ 08 (HAYATH TV):ಇರಾಕ್‌ನಲ್ಲಿ ಮಾರಾಟವಾಗಿರುವ ಭಾರತದಲ್ಲಿ ತಯಾರಿಸಲಾದ ಕಾಮನ್ ಕೋಲ್ಡ್ ಕೆಮ್ಮಿನ ಸಿರಪ್‌ನಲ್ಲಿ ವಿಷಕಾರಿ ಅಂಶ ಪತ್ತೆಯಾಗಿದ್ದು, ಬಳಕೆಗೆ ಯೋಗ್ಯವಲ್ಲ ಎಂದು ಕಂಡುಬಂದ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಕೋಲ್ಡ್ ಔಟ್ ಎಂಬ ಹೆಸರಿನ ಸಿರಪ್ ಅನ್ನು ಭಾರತದ ಫೋರ್ಟ್ಸ್ ಲ್ಯಾಬೋರೇಟರೀಸ್ ತಯಾರಿಸಿದೆ. ಗ್ಲೋಬಲ್ ಹೆಲ್ತ್ ಏಜೆನ್ಸಿಯು ಸಿರಪ್‌ಗಳನ್ನು ಪರೀಕ್ಷೆಗೆ ಒಳಪಡಿಸಿ ಅದರಲ್ಲಿ ವಿಷಕಾರಿ ಅಂಶಗಳನ್ನು ಪತ್ತೆಹಚ್ಚಿತ್ತು. ಇದರಲ್ಲಿ ಡೈಥಿಲೀನ್ ಮತ್ತು ಎಥಿಲೀನ್ ಗ್ಲೈಕೋಲ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಕಂಡುಹಿಡಿದಿರುವುದಾಗಿ ವರದಿಯಾಗಿದೆ.ಕೆಮ್ಮಿನ ಸಿರಪ್ ತಯಾರಕರು ಹಾಗೂ ಮಾರಾಟಗಾರರು ಉತ್ಪನ್ನದ ಗುಣಮಟ್ಟ ಹಾಗೂ ಸುರಕ್ಷತೆಯ ಬಗ್ಗೆ ಏಜೆನ್ಸಿಗೆ ಯಾವುದೇ ಖಾತರಿಗಳನ್ನು ನೀಡಿಲ್ಲ. ಕಂಪನಿಗಳು ಈ ಆರೋಪಗಳಿಗೆ ಹಾಗೂ ಎಚ್ಚರಿಕೆಗಳಿಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.ಕಳೆದ ವರ್ಷ ಗ್ಯಾಂಬಿಯಾದಲ್ಲಿ 66 ಹಾಗೂ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವಿಗೆ ಭಾರತದಿಂದ ರಫ್ತಾಗಿದ್ದ ಕೆಮ್ಮಿನ ಸಿರಪ್‌ಗಳು ಕಾರಣವಾಗಿದೆ ಎಂದು ಆರೋಪಿಸಲಾಗಿತ್ತು. ಇದಾದ ಬಳಿಕ ಭಾರತದ 5 ಕಂಪನಿಗಳ ಸಿರಪ್‌ಗಳನ್ನು ಪರೀಕ್ಷೆಗೆ ಒಳಪಡಿಸಿ ಅದರಲ್ಲಿ ವಿಷಕಾರಿ ಅಂಶಗಳನ್ನು ಪತ್ತೆಹಚ್ಚಲಾಯಿತು


ಭಾರತದ ದಾಬಿಲೈಫ್ ಫಾರ್ಮಾದ ಫೋರ್ಟಸ್ ಲ್ಯಾಬೋರೇಟರಿ ತಯಾರಿಸಿದ ಕೋಲ್ಡ್ ಸಿರಪ್ ಔಷಧಿಯಲ್ಲಿ ವಿಷ ಎಂದು ವಿಶ್ವ ಆರೋಗ್ಯ ಸಂಸ್ಥೆ ಇರಾಕ್‌ಗೆ ಎಚ್ಚರಿಕೆ ನೀಡಿದೆ. ಸಿರಪ್‌ನಲ್ಲಿನ ಮಾಲಿನ್ಯಕಾರಕ ಡೈಥಿಲೀನ್ ಮತ್ತು ಎಥಿಲೀನ್ ಗ್ಲೈಕೋಲ್ ಮಿತಿಗಿಂತ ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ವೈದ್ಯಕೀಯ ಪರೀಕ್ಷೆಯಲ್ಲಿ 0.25 ಶೇಕಡಾ ಡೈಥಿಲೀನ್ ಗ್ಲೈಕೋಲ್ ಹಾಗೂ ಶೇಕಡಾ 2.1 ರಷ್ಟು ಎಥಿಲಿನ್ ಗ್ಲೈಕೋಲ್ ಇದೆ. ಇದರ ಪರಿಮಿತಿ ಶೇಕಡಾ 0.10ಕ್ಕಿಂತ ಮೀರಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ
WHO ತನ್ನ ವೈದ್ಯಕೀಯ ಉತ್ಪನ್ನ ಎಚ್ಚರಿಕೆಯಲ್ಲಿ, ಸಿರಪ್‌ನ ಬ್ಯಾಚ್‌ನಲ್ಲಿ 0.25 ಶೇಕಡಾ ಡೈಥಿಲೀನ್ ಗ್ಲೈಕೋಲ್ ಮತ್ತು ಶೇಕಡಾ 2.1 ರಷ್ಟು ಎಥಿಲೀನ್ ಗ್ಲೈಕೋಲ್ ಇದೆ ಎಂದು ಹೇಳಿದೆ, ಇವೆರಡಕ್ಕೂ ಸ್ವೀಕಾರಾರ್ಹ ಸುರಕ್ಷತಾ ಮಿತಿಯು ಶೇಕಡಾ 0.10 ವರೆಗೆ ಇರುತ್ತದೆ. ಆದರೆ ಡಾಬಿಲೈಫ್ ಪಾರ್ಮಾದ ಔಷಧಿ ಪರಿಮಿತಿ ಮೀರಿದೆ ಎಂದಿದೆ.
ಕಳೆದ ಅಕ್ಟೋಬರ್‌ನಲ್ಲಿ ಗಾಂಬಿಯಾ ದೇಶದಲ್ಲಿ 18 ಮಕ್ಕಳ ಸಾವಿಗೆ, ಭಾರತೀಯ ಕಂಪನಿಯೊಂದು ಉತ್ಪಾದಿಸಿದ ಔಷಧಕ್ಕೂ ಬಲವಾದ ನಂಟಿದೆ ಎಂದು ಅಮೆರಿಕ ಮತ್ತು ಗ್ಯಾಂಬಿಯಾದ ಆರೋಗ್ಯ ಇಲಾಖೆ ನಡೆಸಿದ ಜಂಟಿ ತನಿಖಾ ವರದಿ ಹೇಳಿದೆ. ಗ್ಯಾಂಬಿಯಾದಲ್ಲಿ ನಡೆದ ಮಕ್ಕಳ ಸಾವಿಗೆ, ಭಾರತ ಮೂಲದ ಮೈಡೆನ್ ಫಾರ್ಮಾಸ್ಯುಟಿಕಲ್ಸ್ ಕಂಪನಿ ಪೂರೈಸಿದ ನಾಲ್ಕು ಸಿರಪ್‌ನ ನಂಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿತ್ತು. ಅದರ ಬೆನ್ನಲ್ಲೇ ಮಕ್ಕಳ ಸಾವಿಗೆ ಕಾರಣವೇನು ಎಂಬುದರ ಬಗ್ಗೆ ತನಿಖೆಗೆ ನೆರವಾಗುವಂತೆ ಗ್ಯಾಂಬಿಯಾ ಸರ್ಕಾರ, ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ(ಸಿಡಿಸಿ) ನೆರವು ಕೋರಿತ್ತು. ಅದರ ವರದಿ ಇದೀಗ ಬಿಡುಗಡೆಯಾಗಿದೆ. ವರದಿ ಅನ್ವಯ, ‘ಗ್ಯಾಂಬಿಯಾದಲ್ಲಿ ಮಕ್ಕಳು ಸೇವನೆ ಮಾಡಿದ ಔಷಧವು ಡೀಈಥೈಲೀನ್ ಗ್ಲೈಕೋಕ್‌ನಿಂದಾಗಿ ವಿಷಪೂರಿತವಾಗಿತ್ತು. ಇದನ್ನು ಸೇವಿಸಿದ ಮಕ್ಕಳು ತೀವ್ರ ಮೂತ್ರಜನಕಾಂಗ ಗಾಯದ ಸಮಸ್ಯೆಗೆ ತುತ್ತಾಗಿದ್ದರು’ ಎಂದು ಹೇಳಿದೆ.
ಕಳೆದ ವರ್ಷ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವಿಗೆ ಕಾರಣವಾಯಿತು ಎನ್ನಲಾದ ಡಿಒಕೆ-1 ಎಂಬ ಕೆಮ್ಮಿನ ಸಿರಪ್ ಉತ್ಪಾದಿಸಿದ್ದ ಉತ್ತರ ಪ್ರದೇಶದ ನೊಯ್ಡಾದಲ್ಲಿರುವ ಔಷಧ ತಯಾರಕ ಕಂಪನಿ ಮರಿಯನ್ ಬಯೋಟೆಕ್‌ನ ಮೂವರು ಉದ್ಯೋಗಿಗಳನ್ನು ನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಕಂಪನಿಯ ಇಬ್ಬರು ನಿರ್ದೇಶಕರು ಸೇರಿದಂತೆ ಐವರ ಮೇಲೆ ಗುರುವಾರ ತಡರಾತ್ರಿ ಸೆಂಟ್ರಲ್ ಡ್ರಗ್‌್ಸ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಜೇಷನ್‌ನ ಡ್ರಗ್‌್ಸ ಇನ್ಸ್‌ಪೆಕ್ಟರ್ ದಾಖಲಿಸಿದ ಎಫ್‌ಐಆರ್ ಪೈಕಿ ನಿರ್ದೇಶಕರನ್ನು ಹೊರತುಪಡಿಸಿ ಮೂವರನ್ನು ಬಂಧಿಸಲಾಗಿದೆ.