
ಮೂಡುಶೆಡ್ಡೆ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ನೀರಿನ ಶುಲ್ಕವನ್ನು ಹೆಚ್ಚು ಮಾಡಲು ನಿರ್ಧರಿಸಿದ್ದು. ನೀರಿನ ವೆಚ್ಚವನ್ನು ಹೆಚ್ಚು ಮಾಡಿದರೆ ಜನ ಸಾಮಾನ್ಯರಿಗೆ ಹೊರೆ ಆಗುವುದನ್ನು ಅರಿತು ಇದನ್ನು ವಿರೋಧಿಸಿ ಮೂಡುಶೆಡ್ಡೆ ಗ್ರಾಮ ಪಂಚಾಯತ್ ಸದಸ್ಯರಾದ ಸಾಜುದ್ದೀನ್ ಹಾಗೂ ಇಕ್ಬಾಲ್ C.H, ಸೈಫುಲ್ಲ, ರಝಾಕ್, ಶಂಸುದ್ದಿನ್ ರವರ SDPI ನಿಯೋಗವು ಮೂಡುಶೆಡ್ಡೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಭೇಟಿಯಾಗಿ ಯಾವುದೇ ಕಾರಣಕ್ಕೂ ನೀರಿನ ಶುಲ್ಕವನ್ನು ಹೆಚ್ಚಿಸಬಾರದೆಂದು ಮನವಿಯನ್ನು ನೀಡಿದರು.



