Ashraf Kammaje |
Updated on:Jul 31, 2023 | 8:31 AM
ಜೈಪುರ ಎಕ್ಸ್ಪ್ರೆಸ್ನಲ್ಲಿ ಅಪರಿಚಿತರಿಂದ ಗುಂಡಿನ ದಾಳಿ ನಡೆದಿದ್ದು, ನಾಲ್ವರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರ ಪಾಲ್ಗಢದಲ್ಲಿ ನಡೆದಿದೆ. ಆರ್ಪಿಎಫ್ ಎಎಸ್ಐ ಸೇರಿ ಮೂವರು ಪ್ರಯಾಣಿಕರು ಮೃತಪಟ್ಟಿದ್ದಾರೆ, ರೈಲು ಮುಂಬೈಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ.

ಜೈಪುರ ಎಕ್ಸ್ಪ್ರೆಸ್ನಲ್ಲಿ ಗುಂಡಿನ ದಾಳಿ ನಡೆದಿದ್ದು, ನಾಲ್ವರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರ ಪಾಲ್ಗಢದಲ್ಲಿ ನಡೆದಿದೆ. ಆರ್ಪಿಎಫ್ ಎಎಸ್ಐ ಸೇರಿ ಮೂವರು ಪ್ರಯಾಣಿಕರು ಮೃತಪಟ್ಟಿದ್ದಾರೆ, ರೈಲು ಮುಂಬೈಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೆಲ ಪ್ರಯಾಣಿಕರು ಗಾಯಗೊಂಡಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭಿಸುತ್ತಿದೆ. ಜಿಆರ್ಪಿ ಪೊಲೀಸರು ಮತ್ತು ಆರ್ಪಿಎಫ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ. ಗುಂಡಿನ ದಾಳಿ ಬಳಿಕ ದಾಳಿಕೋರರು ಪರಾರಿಯಾಗಿದ್ದಾರೆ.

ರೈಲ್ವೇ ರಕ್ಷಣಾ ಪಡೆಯ ಕಾನ್ಸ್ಟೆಬಲ್ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಸೋಮವಾರ ಮುಂಜಾನೆ 5 ಗಂಟೆ ಸುಮಾರಿಗೆ ವಾಪಿಯಿಂದ ಬೊರಿವಲಿಯಿಂದ ಮೀರಾ ರೋಡ್ ನಿಲ್ದಾಣದ ನಡುವೆ ಈ ಘಟನೆ ನಡೆದಿದೆ. ಆರೋಪಿ ಕಾನ್ಸ್ಟೆಬಲ್ನನ್ನು ಮುಂಬೈ ರೈಲ್ವೇ ಪೊಲೀಸರು ಬಂಧಿಸಿದ್ದಾರೆ.