
ಮಂಗಳೂರಿನ ಪ್ರಖ್ಯಾತ ಹಾಗೂ ಜನಪ್ರಿಯ ಐಡಿಯಲ್ ಐಸ್‌ಕ್ರೀಮ್ ಸಂಸ್ಥೆಯು ಲಾಲ್ ಬಾಗ್ ನಲ್ಲಿ ನಡೆಸುತ್ತಿರುವ ಪಬ್ಬಾಸ್ ಮಳಿಗೆಯ ‘ಗಡ್ ಬಡ್’ ಉತ್ಪನ್ನವು ಟೇಸ್ಟ್ ಎಟ್‌ಲಾಸ್ ಎಂಬ ಜನಪ್ರಿಯ ಫುಡ್ ಆ್ಯಂಡ್ ಟ್ರಾವೆಲ್ ಗೈಡ್ ಸಂಸ್ಥೆಯ ಮೋಸ್ಟ್ ಹನ್‌ಡ್ರೆಡ್ ಐಕಾನಿಕ್ ಐಸ್‌ಕ್ರೀಮ್ಸ್ ಅಫ್ ದಿ ವರ್ಲ್ಡ್ ಇದರಲ್ಲಿ ಸ್ಥಾನ ಪಡೆದಿದೆ.

ಮಂಗಳೂರು : ಮಂಗಳೂರಿನ ಪ್ರಖ್ಯಾತ ಹಾಗೂ ಜನಪ್ರಿಯ ಐಡಿಯಲ್ ಐಸ್‌ಕ್ರೀಮ್ ಸಂಸ್ಥೆಯು ಲಾಲ್ ಬಾಗ್ ನಲ್ಲಿ ನಡೆಸುತ್ತಿರುವ ಪಬ್ಬಾಸ್ ಮಳಿಗೆಯ ಗಡ್ ಬಡ್ ಉತ್ಪನ್ನವು ಟೇಸ್ಟ್ ಎಟ್‌ಲಾಸ್ ಎಂಬ ಜನಪ್ರಿಯ ಫುಡ್ ಆ್ಯಂಡ್ ಟ್ರಾವೆಲ್ ಗೈಡ್ ಸಂಸ್ಥೆಯ ಮೋಸ್ಟ್ ಹನ್‌ಡ್ರೆಡ್ ಐಕಾನಿಕ್ ಐಸ್‌ಕ್ರೀಮ್ಸ್ ಅಫ್ ದಿ ವರ್ಲ್ಡ್ ಇದರಲ್ಲಿ ಸ್ಥಾನ ಪಡೆದಿದೆ.

ಈ ಬಗ್ಗೆ ಐಡಿಯಲ್ ಐಸ್‌ಕ್ರೀಮ್ ಸಂಸ್ಥೆಯ ಮಾಲಕ ಮುಕುಂದ ಕಾಮತ್ ಅವರು ಮಾಹಿತಿ ನೀಡಿ, ಗಡ್ಬಡ್ ಒಂದು ಐಕಾನಿಕ್ ಪ್ರಾಡಕ್ಟ್ ಆಗಿ ಆಯ್ಕೆಯಾಗಿರುವುದು ತುಂಬಾ ಖುಷಿಯ ಸಂಗತಿ.
ಮಂಗಳೂರಿನ ಜನರು ಮತ್ತು ಗ್ರಾಹಕರ ವಿಶ್ವಾಸ ಇದಕ್ಕೆ ಮುಖ್ಯ ಕಾರಣ. ನಾವು ಯಾವುದೇ ಐಸ್‌ಕ್ರೀಮ್ ಪ್ರಾಡಕ್ಟ್ ಕೊಡ ಬಹುದು;
ಆದರೆ ಜನರು ಟೇಸ್ಟ್ ಮಾಡಿ ಅದನ್ನು ಅಪ್ರೀಶಿಯೇಟ್ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ. ಜನರ ವಿಶ್ವಾಸದಿಂದ ನಾವು ಬೆಳೆದಿದ್ದೇವೆ.
ಜನರ ಪ್ರಶಂಸೆ ನಮಗೆ ಪ್ರೋತ್ಸಾಹ ನೀಡಿದೆ ಎಂದರು.
ತಂದೆ ಪ್ರಭಾಕರ ಕಾಮತ್ 1975 ರಲ್ಲಿ ಆರಂಭಿಸಿದ್ದ ಐಡಿಯಲ್ ಐಸ್‌ಕ್ರೀಮ್ ಸಂಸ್ಥೆಗೆ ಈಗ 48 ವರ್ಷ ಸಂದಿದೆ.
ಮುಂದಿನ 2 ವರ್ಷಗಳಲ್ಲಿ ಸುವರ್ಣ ಮಹೋತ್ಸವ ಆಚರಿಸಲಿದೆ. 15 ಸಿಟ್ಟಿಂಗ್‌ನಲ್ಲಿ ಆರಂಭವಾದ ವ್ಯವಹಾರ ಈಗ 1000 ಸಿಟ್ಟಿಂಗ್ ಗೆ ತಲುಪಿದೆ.
ಮಂಗಳೂರಿನಲ್ಲಿ 5 ಐಸ್‌ಕ್ರೀಂ ಪಾರ್ಲರ್ ಮತ್ತು ಕೆಫೆಗಳಿವೆ. ಐಸ್‌ಕ್ರೀಂ ಜತೆಗೆ ಇತರ ತಿಂಡಿ ತಿನಿಸುಗಳೂ ಇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಉತ್ಪನ್ನಗಳನ್ನು ಪರಿಚಯಿಸಲಿದ್ದೇವೆ ಎಂದು ಹೇಳಿದ್ದಾರೆ.
