M. Ashraf kammaje First Published Jul 29, 2023, 9:34 PM IST

ತಿರುವನಂತಪುರಂ: 75ರ ವೃದ್ದನೊಬ್ಬನ ಜೊತೆ ಬೆತ್ತಲಾಗಿ ನಿಂತು ಹನಿಟ್ರ್ಯಾಪ್ ಮಾಡಿ ಲಕ್ಷಾಂತರ ರೂಪಾಯಿ ಪೀಕಿಸಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಟಿವಿ ಸೀರಿಯಲ್ ನಟಿಯೊಬ್ಬಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ನಟಿ ನಿತ್ಯಾ ಸಸಿ

ಬಂಧಿತಳನ್ನು ನಿತ್ಯಾ ಸಸಿ ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ವಿವರ
75 ವರ್ಷದ ಮಾಜಿ ಸೈನಿಕ ಹಾಗೂ ಕೇರಳ ವಿಶ್ವವಿದ್ಯಾನಿಲಯದ ಮಾಜಿ ನೌಕರನೊಬ್ಬ ತನ್ನ ಮನೆಯನ್ನು ಬಾಡಿಗೆಗೆ ನೀಡುತ್ತಿದ್ದ. ಈ ವೇಳೆ ನಟಿ ನಿತ್ಯಾ ಸಸಿಯ ಸಂಪರ್ಕಕ್ಕೆ ಬಂದಿದ್ದ.

ಈ ವೇಳೆ ನಿತ್ಯಾ ಸಸಿ ಆತನನ್ನು ಬಲೆಗೆ ಬೀಳಿಸಿ ಆತ್ಮೀಯತೆ ಬೆಳೆಸಿಕೊಂಡಿದ್ದಾಳೆ. ನಂತರ ಆತನನ್ನು ಮನೆಗೆ ಕರೆಸಿ ಆತನನ್ನು ವಿವಸ್ತ್ರನನ್ನಾಗಿ ಮಾಡಿ, ಆಕೆಯೂ ಈತನ ಜೊತೆ ಬೆತ್ತಲಾಗಿ ನಿಂತುಕೊಂಡಿದ್ದ ಫೋಟೊ ತೆಗೆಸಿಕೊಂಡಿದ್ದಾಳೆ.
ನಂತರ ಆ ಫೋಟೊಗಳನ್ನಿಟ್ಟುಕೊಂಡು 25 ಲಕ್ಷ ಹಣ ನೀಡುವಂತೆ ಬೆದರಿಕೆ ಹಾಕಿದ್ದಳೆ. ಮಾನಕ್ಕೆ ಹೆದರಿ ಮಾಜಿ ಸೈನಿಕ ಸುಮಾರು 11 ಲಕ್ಷ ರೂ ಮೊತ್ತವನ್ನು ನೀಡಿದ್ದಾನೆ. ಅದಾದ ಬಳಿಕ ಇನ್ನಷ್ಟು ಹಣಕ್ಕೆ ಡಿಮ್ಯಾಂಡ್ ಮಾಡಿದಾಗ ಮಾಜಿ ಸೈನಿಕ ಪರವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ಇದೀಗ ನಟಿ ಹಾಗೂ ಆಕೆಯ ಗೆಳತಿಯನ್ನು ವಶಕ್ಕೆ ಪಡೆದಿದ್ದು, ಈ ಇಬ್ಬರು ಈ ಹಿಂದೆಯೂ ಇಂತಹದ್ದೇ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರಾ ಎಂದು ಪತ್ತೆ ಹಚ್ಚುತ್ತಿದ್ದಾರೆ.