
ಇನ್ಸ್ಟಾಗ್ರಾಮ್ನಲ್ಲಿ ಅತ್ಯಾಚಾರದ ದೃಶ್ಯಗಳನ್ನು ಮಾರಾಟ ಮಾಡಿದ ದಂಪತಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಆರೋಪಿಗಳು ಫೋಟೋಗೆ 500 ರೂಪಾಯಿ ಮತ್ತು ವೀಡಿಯೊಗೆ 1500 ರೂಪಾಯಿಗಳವರೆಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
M.kammaje!Updated: Jul 29, 2023, 07:26 PM IST
- 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ
- ಇನ್ಸ್ಟಾಗ್ರಾಂನಲ್ಲಿ ದೃಶ್ಯಾವಳಿಗಳನ್ನು ಮಾರಾಟ
- ಪೊಲೀಸರಿಂದ ಕೇರಳ ದಂಪತಿಗಳ ಬಂಧನ
Couple arrested for selling rape visuals : 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಇನ್ಸ್ಟಾಗ್ರಾಂನಲ್ಲಿ ದೃಶ್ಯಾವಳಿಗಳನ್ನು ಮಾರಾಟ ಮಾಡಿದ್ದ ದಂಪತಿಯನ್ನು ಬಂಧಿಸಲಾಗಿದೆ. ಕೇರಳದ ಕುಳತುಪುಳ ಕಂಜಿರೋಟ್ನ ವಿಷ್ಣು (31) ಮತ್ತು ಅವನ ಪತ್ನಿ ಸ್ವೀಟಿ (20) ಬಂಧಿತರು. ಕೊಲ್ಲಂನ ಕುಲಾತುಪುಳದಲ್ಲಿ ಈ ಘಟನೆ ನಡೆದಿದೆ.

ಹೌದು.. ಟ್ಯೂಷನ್ ತೆಗೆದುಕೊಳ್ಳುವ ನೆಪದಲ್ಲಿ ವ್ಯಕ್ತಿಯೊಬ್ಬ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ, ಅತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ದೃಶ್ಯಗಳನ್ನು ಅತನ ಪತ್ನಿ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ನಂತರ, ಅವರು ಆ ವೀಡಿಯೊಗಳನ್ನು ಇನ್ಸ್ಟಾಗ್ರಾಮ್ ಮೂಲಕ ಮಾರಾಟ ಮಾಡಿದರು.

ಅಲ್ಲದೆ, ಫೋಟೋಗೆ 50 ರಿಂದ 500 ರೂ. ವಿಡಿಯೋಗೆ ಆರೋಪಿಗಳು 1500 ರೂಪಾಯಿ ವಸೂಲಿ ಮಾಡಿದ್ದಾರೆ. ಮುಂಗಡವಾಗಿ ಹಣ ಪಡೆದ ನಂತರ, ಚಿತ್ರಗಳು ಮತ್ತು ವೀಡಿಯೊಗಳನ್ನು Instagram ಮೂಲಕ ಕಳುಹಿಸಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆರೋಪಿಗಳನ್ನು ಹೊರತುಪಡಿಸಿ ಹಣ ಕೊಟ್ಟು ಚಿತ್ರಹಿಂಸೆಯ ದೃಶ್ಯಾವಳಿಗಳನ್ನು ಖರೀದಿಸಿದವರಿಗೂ ತನಿಖೆ ವಿಸ್ತರಿಸಲು ಪೊಲೀಸರು ನಿರ್ಧರಿಸಿದ್ದಾರೆ. ಈ ವರ್ಷದ ಆರಂಭದಿಂದಲೂ ಆರೋಪಿಗಳು ಬಾಲಕಿಗೆ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
