ಕಾಸರಗೋಡು, ಜು 16 (HAYATH TV): ಮರಳು ಮಾಫಿಯಾದೊಂದಿಗೆ ನಂಟು ಹೊಂದಿದ್ದ ಕಾಸರಗೋಡಿನ ಇಬ್ಬರು ಸೇರಿದಂತೆ ಏಳು ಮಂದಿ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಿರುವ ಘಟನೆ ನಡೆದಿದೆ.ಕಾಸರಗೋಡು ಚಂದೇರಾ ಪೊಲೀಸ್ ಠಾಣೆಯ ಟಿ.ಎಂ. ಅಬ್ದುಲ್ ರಶೀದ್ ಮತ್ತು ಚೀಮೇನಿ ಠಾಣೆಯ ಬಿ. ಹರಿಕೃಷ್ಣನ್, ಗ್ರೇಡ್ ಎಸ್ಐಗಳಾದ ಕಣ್ಣೂರು ರೂರಲ್ನ ಸಿ. ಗೋಕುಲನ್, ಕಲ್ಲಿಕೋಟೆ ರೂರಲ್ನ ಪಿ. ಜೋಯಿ ಥೋಮಸ್, ಸಿವಿಲ್ ಪೊಲೀಸ್ ಆಫೀಸರ್ಗಳಾದ ಪಿ.ಎ. ನಿಸಾರ್ (ಕಣ್ಣೂರು ಸಿಟಿ), ಎಂ.ವೈ. ಶಿಬಿನ್ (ಕಲ್ಲಿಕೋಟೆ ರೂರಲ್) ಮತ್ತು ಪಿ.ಎ. ಶಜೀರ್ (ಕಣ್ಣೂರು ರೂರಲ್) ಸೇವೆಯಿಂದ ವಜಾಗೊಂಡವರು.ಇನ್ನು ಈ 7 ಮಂದಿ ತೃಶ್ಶೂರು ಠಾಣೆಯಲ್ಲಿದ್ದಾಗ ಅಲ್ಲಿನ ಮರಳು ಮಾಫಿಯಾ ದೊಂದಿಗೆ ನಿಕಟ ನಂಟು ಬೆಳೆಸಿ, ಅವರಿಗೆ ಅಕ್ರಮ ಮರಳು ಸಾಗಾಟಕ್ಕೆ ಅಗತ್ಯ ಸಹಾಯ ಒದಗಿಸಿದ ಆರೋಪ ಎದುರಿಸುತ್ತಿದ್ದಾರೆ.