
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಾಡ ಹಗಲೇ ಡಬಲ್ ಮರ್ಡರ್ (Double Murder) ನಡೆದಿದ್ದು, ಜನರನ್ನ ಬೆಚ್ಚಿ ಬೀಳಿಸಿದೆ.
ಏರೋನಿಕ್ಸ್ ಇಂಟರ್ನೆಟ್ ಕಂಪನಿಯ (Aeronics Internet Company) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಇಬ್ಬರನ್ನೂ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿ ಠಾಣಾ (Amruthahalli Police) ವ್ಯಾಪ್ತಿಯಲ್ಲಿ ನಡೆದಿದೆ.

ಏರೋನಿಕ್ಸ್ ಇಂಟರ್ನೆಟ್ ಕಂಪನಿಯ ಎಂಡಿ ಫಣೀಂದ್ರ ಸುಬ್ರಮಣ್ಯ, ಸಿಇಒ ವಿನು ಕುಮಾರ್ ಮೃತ ದುರ್ದೈವಿಗಳು. ಕಂಪನಿಯ ಮಾಜಿ ಉದ್ಯೋಗಿ ಫೆಲಿಕ್ಸ್ ಎಂಬಾತನೇ ಕೊಲೆ ಆರೋಪಿ.

ಏರೋನಿಕ್ಸ್ ಸಂಸ್ಥೆಯ ಮಾಜಿ ಉದ್ಯೋಗಿ ಫೆಲಿಕ್ಸ್ ಕೆಲಸ ಬಿಟ್ಟು ಸ್ವಂತ ಕಂಪನಿ ಆರಂಭಿಸಿದ್ದ. ಆದ್ರೆ ತನ್ನ ಉದ್ಯಮಕ್ಕೆ ಫಣೀಂದ್ರ ಎದುರಾಳಿಯಾಗಿದ್ದರಿಂದ ಆತನನ್ನೇ ಮುಗಿಸಲು ಸ್ಕೆಚ್ ಹಾಕಿದ್ದ. ಅದರಂತೆ ಮಂಗಳವಾರ ಸಂಜೆ 4 ಗಂಟೆ ವೇಳೆಗೆ ಇನ್ನೂ ಇಬ್ಬರೊಂದಿಗೆ ಕಂಪನಿಗೆ ಎಂಟ್ರಿ ಕೊಟ್ಟ ಫೆಲಿಕ್ಸ್, ತಲ್ವಾರ್ ಮತ್ತು ಚಾಕುವಿನಿಂದ ಫಣೀಂದ್ರ ಹಾಗೂ ವಿನು ಕುಮಾರ್ ಮೇಲೆ ದಾಳಿ ಮಾಡಿದ್ದಾರೆ. ದಾಳಿ ಬಳಿಕ ಮೂವರು ಹಂತಕರು ಕಟ್ಟಡದ ಹಿಂಭಾಗದ ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದಾರೆ.

ಸದ್ಯ ಸ್ಥಳ ಪರಿಶೀಲನೆ ನಡೆಸುತ್ತಿರುವ ಅಮೃತಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.