
ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಗಳೊಂದಿಗೆ ಮುಖಾಮುಖಿಯಾಗಿ ಕ್ಲಾಸ್ ತೆಗೆದುಕೊಂಡು ವಾರ್ನಿಂಗ್ ನೀಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ಸಭೆಯಿಂದಾಗಿ ಅಲರ್ಟ್ ಆದಂತಿರುವ ಕಲಬುರಗಿ ಖಾಕಿಪಡೆ ಸಭೆಯಲ್ಲಿ ಪ್ರಸ್ತಾಪವಾದ ಬೇರು ಬಿಟ್ಟಿರುವ ಪೊಲೀಸ್ ಸಿಬ್ಬಂದಿ ಎತ್ತಂಗಡಿ ವಿಚಾರದಲ್ಲಿ ತಕ್ಷಣ ಕ್ರಮ ಕೈಗೊಂಡಿದೆ
ಕಲಬುರಗಿ (ಜು.10) : ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಗಳೊಂದಿಗೆ ಮುಖಾಮುಖಿಯಾಗಿ ಕ್ಲಾಸ್ ತೆಗೆದುಕೊಂಡು ವಾರ್ನಿಂಗ್ ನೀಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ಸಭೆಯಿಂದಾಗಿ ಅಲರ್ಚ್ ಆದಂತಿರುವ ಕಲಬುರಗಿ ಖಾಕಿಪಡೆ ಸಭೆಯಲ್ಲಿ ಪ್ರಸ್ತಾಪವಾದ ಬೇರು ಬಿಟ್ಟಿರುವ ಪೊಲೀಸ್ ಸಿಬ್ಬಂದಿ ಎತ್ತಂಗಡಿ ವಿಚಾರದಲ್ಲಿ ತಕ್ಷಣ ಕ್ರಮ ಕೈಗೊಂಡಿದೆ.

ಸಿಸಿ ಕ್ಯಾಮೆರಾ ಜಾಲ:
ನಗರದ ಪ್ರಮುಖ 25 ಸ್ಥಳಗಳಲ್ಲಿ ಒಟ್ಟು 60 ಸಿಸಿಟಿವಿ ಕ್ಯಾಮೆರಾ ಇದ್ದು, 57 ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿವೆ, ತಾಂತ್ರಿಕ ಕಾರಣಗಳಿಂದ 3 ಕ್ಯಾಮೆರಾ ಸ್ಥಗಿತ ಇದಲ್ಲದೇ, ನಗರದ 20 ಸ್ಥಳಗಳಲ್ಲಿ ಮಹಾನಗರ ಪಾಲಿಕೆ ವತಿಯಿಂದ 53 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆದರೆ ವಾರ್ಷಿಕ ನಿರ್ವಹಣೆ ಇಲ್ಲದ ಕಾರಣ ಎಲ್ಲಾ 53 ಸಿಸಿಟಿವಿ ಕ್ಯಾಮೆರಾಗಳು ಸ್ಥಗಿತಗೊಂಡಿರುತ್ತವೆ. ಹೀಗಾಗಿ, 13-03-2023 ರಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಸದರಿ ಕ್ಯಾಮೆರಾ ದುರಸ್ಥಿ ಹಾಗೂ ವಾರ್ಷಿಕ ನಿರ್ವಹಣೆಗೆ ತಗುಲುವ ಅನುದಾನವನ್ನು ಬಿಡುಗಡೆಗೊಳಿಸಲು ಅಂದಾಜು ಪಟ್ಟಿಸಲ್ಲಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ

ಅಕ್ರಮ ಮರಳುಗಾರಿಕೆ ಸುತ್ತಮುತ್ತ:
ಅಕ್ರಮ ಮರುಳು ಸಾಗಾಟ ಮಾಡುವವರ ವಿರುದ್ಧ 20-06-2023ರಿಂದ ಇಲ್ಲಿಯವರೆಗೆ ಒಟ್ಟು 12 ಪ್ರಕರಣಗಳು ಹಾಗೂ ಅಕ್ರಮ ಮರುಳು ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರ ವಿರುದ್ಧ 4 ಪಿಎಆರ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೆ ಈ ಹಿಂದೆ ಒಬ್ಬ ಆರೋಪಿತನನ್ನು ಗಡಿಪಾರು ಮಾಡಲಾಗಿದೆ. 2021ರಲ್ಲಿ 215 ಪ್ರಕರಣಗಳು, 2022ರಲ್ಲಿ 119 ಪ್ರಕರಣಗಳು, 2023ರಲ್ಲಿ 88 ಪ್ರಕರಣಗಳು ಸೇರಿದಂತೆ ಒಟ್ಟು 422 ಪ್ರಕರಣಗಳು ದಾಖಲಾಗಿವೆ.
ಚೆಕ್ಪೋಸ್ಟ್ ನೋಟಗಳು:
ಶಹಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯ ಭಂಕೂರು ಚೆಕ್ಪೋಸ್ವ್ನಲ್ಲಿ ತಲಾ ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ, ಅಫಜಲ್ಪುರ ವ್ಯಾಪ್ತಿಯ ಚೌಡಾಪುರ ಚೆಕ್ಪೋಸ್ವ್ನಲ್ಲಿ ತಲಾ ಓರ್ವ ಪೊಲೀಸ್ ಸಿಬ್ಬಂದಿ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ, ನೆಲೋಗಿ ಠಾಣಾ ವ್ಯಾಪ್ತಿಯ ಜೇರಟಗಿ ಚೆಕ್ ಪೋಸ್ವ್ನಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ಕಂದಾಯ ಇಲಾಖೆ ಸಿಬ್ಬಂದಿ, ಮಾಡಬೂಳ ಠಾಣೆ ವ್ಯಾಪ್ತಿಯ ಇವಣಿ ಚೆಕ್ ಪೋಸ್ವ್ನಲ್ಲಿ ಓರ್ವ ಪೊಲೀಸ್ ಸಿಬ್ಬಂದಿ, ಚಿತ್ತಾಪುರ ಠಾಣಾ ವ್ಯಾಪ್ತಿಯ ಮರಗೋಳ ಚೆಕ್ ಪೋಸ್ಟ… ನಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
