
Ashraf Kammaje |
Updated on: Jul 04, 2023 | 02:02 PM
ಇಂದು ನಡೆಯಬೇಕಿದ್ದ ಗುರುಪುರ ಗ್ರಾಮ ಪಂಚಾಯತ್ 2023-24 ನೇ ಸಾಲಿನ ಪ್ರಥಮ ಗ್ರಾಮ ಸಭೆಗೆ ಅಧಿಕಾರಿಗಳ ಅನುಪಸ್ಥಿತಿಯಿಂದ ಸಭೆಯನ್ನು ಮುಂದುವರಿಸಲು ಬಿಡದೆ ಗ್ರಾಮ ಸಭೆಯನ್ನು ಬಹಿಷ್ಕರಿಸಿದ ಫಟನೆಯು ಇಂದು ಗುರುಪುರ ಪಂಚಾಯತ್ ಸಭಾಂಗಣದಲ್ಲಿ ನಡೆದಿದೆ

ಕಳೆದ 3 ವರ್ಷದ ಹಿಂದೆ ಬಂಗ್ಲಗುಡ್ಡೆಯಲ್ಲಿ ಗುಡ್ಡ ಕುಸಿತದಿಂದ ಸುಮಾರು 12 ಮನೆಗಳು ನೆಲಸಮವಾಗಿದ್ದು ಸಂತ್ರಸ್ತರಿಗೆ ಸರಕಾರ ಹಾಗೂ ಸ್ಥಳೀಯ ಶಾಸಕರು ಜಾಗ ಖರೀದಿಸಿ ಕೊಡುವ ಭರವಸೆ ನೀಡಿದ್ದರು ಅದರೆ ಕಳೆದ 3 ವರ್ಷಗಳಿಂದ ಸಂತ್ರಸ್ತರಿಗೆ ಯಾವುದೇ ರೀತಿಯ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಅಸಮಾಧಾನಗೊಂಡಿರುವ ಸಂತ್ರಸ್ತರ ಪರವಾಗಿ ಮಾತನಾಡಿದ SDPI ಮುಖಂಡ ಉಸ್ಮಾನ್ ಗುರುಪುರ ಹಾಗೂ ಗ್ರಾಮಸ್ಥರು ಇಂದಿನ ಸಭೆಗೆ ತಹಶೀಲ್ದಾರ್ ರವರು ಬರಬೇಕೆಂದು ಪುಟ್ಟ ಹಿಡಿದಕ್ಕೆ ಸ್ಪಂದಿಸಿದ ಗ್ರಾಮ ಲೆಕ್ಕಾಧಿಕಾರಿಗಳು ಕೂಡಲೇ ಮೇಲಾಧಿಕಾರಿಗಳನ್ನು ಸಂಪರ್ಕಿಸಿ 2 ದಿವಸಗಳಲ್ಲಿ ನಿವೇಶನ ಹಂಚಿಕೆಯನ್ನು ಮಾಡುವ ಭರವಸೆಯನ್ನು ನೀಡಿದರೂ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡದೆ ಗ್ರಾಮ ಸಭೆಯನ್ನು ನಡೆಯಲು ಬಿಡದಂತೆ ಪಟ್ಟು ಹಿಡಿದಕ್ಕೆ ಪಂಚಾಯತ್ ಅಧ್ಯಕ್ಷರು ಇಂದಿನ ಸಭೆಯನ್ನು ಮುಂದೂಡಿದರು


