
ಬಕ್ರೀದ್ ಸಂದರ್ಭದಲ್ಲಿ ಪಂಜಾಬ್ ಭಾಗದ ಭಾರತ – ಪಾಕಿಸ್ತಾನ ಗಡಿ ಬಳಿ ಸಿಹಿ ಹಂಚಲಾಗಿದೆ. ಪಂಜಾಬ್‌ನ ಅಟ್ಟಾರಿ- ವಾಘಾ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಪಾಕಿಸ್ತಾನ ರೇಂಜರ್‌ಗಳು ಸಿಹಿ ವಿನಿಮಯ ಮಾಡಿಕೊಂಡರು
ಅಮೃತಸರ, ಪಂಜಾಬ್ (ಜೂನ್ 29, 2023): ಇಂದು ಬಕ್ರೀದ್ ಹಬ್ಬ ಹಿನ್ನೆಲೆ ಭಾರತ ಸೇರಿ ಜಗತ್ತಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮುಸಲ್ಮಾನರ ಪ್ರಮುಖ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಅಥವಾ ಈದ್ ಅಲ್ – ಅಧಾ ಬಲಿದಾನ ಹಾಗೂ ತ್ಯಾಗದ ಸಂಕೇತವಾಗಿದೆ. ಇನ್ನು, ಈ ಹಬ್ಬಕ್ಕೆ ಹಿಂದೂಗಳು ಸಹ ತಮ್ಮ ಮುಸಲ್ಮಾನ ಸ್ನೇಹಿತರಿಗೆ ಹಬ್ಬದ ಶುಭಾಶಯಗಳನ್ನು ಕೋರುವುದು ಸಾಮಾನ್ಯ.

ಇದೇ ರೀತಿ,ಬಕ್ರೀದ್ ಸಂದರ್ಭದಲ್ಲಿ ಪಂಜಾಬ್ ಭಾಗದ ಭಾರತ – ಪಾಕಿಸ್ತಾನ ಗಡಿ ಬಳಿ ಸಿಹಿ ಹಂಚಲಾಗಿದೆ. ಪಂಜಾಬ್‌ನ ಅಟ್ಟಾರಿ- ವಾಘಾ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಪಾಕಿಸ್ತಾನ ರೇಂಜರ್‌ಗಳು ಸಿಹಿ ವಿನಿಮಯ ಮಾಡಿಕೊಂಡರು. ಪ್ರತಿ ವರ್ಷ ಪ್ರಮುಖ ಹಬ್ಬಗಳಂದು ಉಭಯ ದೇಶಗಳ ಸೈನಿಕರು ಪರಸ್ಪರ ಶುಭ ಹಾರೈಸುತ್ತಾರೆ. ಇದೇ ರೀತಿ, ಮುಸಲ್ಮಾನರ ಪ್ರಮುಖ ಹಬ್ಬಗಳಲ್ಲೊಂದಾದ ಬಕ್ರೀದ್ ಹಬ್ಬಕ್ಕೂ ಸಿಹಿ ಹಂಚಿ ಪರಸ್ಪರ ಶುಭಾಶಯಗಳನ್ನು ಕೋರಲಾಗಿದೆ.

ಭಾರತ – ಪಾಕ್ ನಡುವೆ ಸಾಕಷ್ಟು ಭಿನ್ನಾಭಿಪ್ರಾಯ ಹಾಗೂ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಿದ್ದರೂ ಗಡಿಯಲ್ಲಿ ಉಭಯ ದೇಶಗಳ ನಡುವೆ ಶಾಂತಿಯನ್ನು ಪಸರಿಸುವ ಸಣ್ಣ ಪ್ರಯತ್ನ ಇದಾಗಿದೆ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಉಭಯ ದೇಶಗಳು ಪರಸ್ಪರ ಸಿಹಿ ತಿನ್ನಿಸುವ ಮೂಲಕ ಸಂತಸ ವ್ಯಕ್ತಪಡಿಸುತ್ತವೆ. ಇದೇ ವೇಳೆ ಗಡಿಯಲ್ಲಿ ಇಬ್ಬರ ನಡುವಿನ ವಾತಾವರಣವೂ ಸ್ವಲ್ಪ ಸಾಮರಸ್ಯದಿಂದ ಇರುತ್ತದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಸಾಮಾನ್ಯವಲ್ಲ. ಆದರೂ, ಈಗಲೂ ಸಹ ಈ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ಪಂಜಾಬ್‌ನ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಪಾಕಿಸ್ತಾನ ರೇಂಜರ್‌ಗಳು ಈದ್-ಉಲ್-ಅಧಾ ಸಂದರ್ಭದಲ್ಲಿ ಅಟ್ಟಾರಿ-ವಾಘಾ ಗಡಿಯಲ್ಲಿ ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ. ಬಕ್ರೀದ್ ಸಂದರ್ಭದಲ್ಲಿ, BSF ನ 176 ಬೆಟಾಲಿಯನ್ ಫುಲ್ಬರಿ ಇಂಡೋ-ಬಾಂಗ್ಲಾದೇಶ ಗಡಿಯಲ್ಲಿ ಅದರ 18 ಗಡಿ ಕಾವಲು ಪಡೆ (BGB) ಪ್ರತಿರೂಪದೊಂದಿಗೆ ಸಿಹಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಾಗಿದೆ.