
ಬೆಂಗಳೂರು: ಇಂದಿರಾ ಕ್ಯಾಂಟೀನ್‍ನನ್ನು ಹೊಸ ರೂಪದಲ್ಲಿ ತರೋಕೆ ಕಾಂಗ್ರೆಸ್ ಸರ್ಕಾರ (Congress Government) ಹೊರಟಿದೆ. ಈಗಾಗ್ಲೇ ಮೆನು, ದರದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ.
ಇದೀಗ ಇಂದಿರಾ ಕ್ಯಾಂಟೀನ್ (Indira Canteen) ನಲ್ಲಿ ಹೊಸ ಐಟಂಗಳ ಸೇರ್ಪಡೆ ಮಾಡಲು ತೀರ್ಮಾನಿಸಲಾಗಿದೆ. ಬೆಳಗ್ಗೆ ತಿಂಡಿ ಮೆನುಗೆ ಬ್ರೆಡ್ ಜಾಮ್ (Bread Jam) ಮತ್ತು ಮಂಗಳೂರು ಬನ್ಸ್ (Mangaluru Buns) ಸೇರ್ಪಡೆಯಾಗಲಿದೆ. ಮಧ್ಯಾಹ್ನದ ಊಟಕ್ಕೆ ಮುದ್ದೆ, ಸೊಪ್ಪು ಸಾರು ನೀಡಲು ತಿರ್ಮಾನ ಮಾಡಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ ಊಟಕ್ಕೆ ಸಿಹಿ ಅಂದ್ರೆ ಪಾಯಸ ನೀಡಲು ಬಿಬಿಎಂಪಿ ಚಿಂತನೆ ಮಾಡಿದೆ.

ದಿನ ಬಿಟ್ಟು ದಿನ ಮುದ್ದೆ ಊಟ ಒದಗಿಸುವ ಕುರಿತು ನಿರ್ಧಾರ ಮಾಡಲಾಗಿದೆ. ಮುದ್ದೆ ಇಲ್ಲದ ದಿನ ಚಪಾತಿ ಸಾಗು ಊಟ ನೀಡಲು ರೆಡಿಯಾಗಿದೆ. ಊಟ ಒದಗಿಸುವ ಏಜೆನ್ಸಿಗಳು ಫೈನಲ್ ಆಗುತ್ತಿದ್ದಂತೆ ಹೊಸ ಮೆನು ಜಾರಿಗೆ ಬರಲಿದೆ. ಬೆಳಗಿನ ತಿಂಡಿ 5 ರೂಪಾಯಿ ಇತ್ತು 10 ರೂಗೆ ಏರಿಕೆ ಆಗಲಿದೆ. ಮಧ್ಯಾಹ್ನ ಊಟಕ್ಕೆ 10 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ
