
ಮಂಗಳೂರು (ಜೂ.20) : ಗಡಿನಾಡು ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಒಂದು ಕಡೆ ಪೋಷಕರು ಮಕ್ಕಳನ್ನು ಕಳಿಸಲು ನಿರಾಸಕ್ತಿ ತೋರಿಸುತ್ತಿದ್ದಾರೆ ಇನ್ನೊಂದೆಡೆ ಕನ್ನಡ ಶಿಕ್ಷಕರ ನೇಮಕ ಆಗದಿರುವುದು. ಇದೀಗ ಕೇರಳ ಸರ್ಕಾರ ಗಡಿನಾಡ ಕನ್ನಡಿಗರ ಮೇಲೆ ಕೇರಳ ಸರ್ಕಾರದಿಂದ ಅಪತ್ತು ಎದುರಾಗಿದೆ.
ಕನ್ನಡ ಮಕ್ಕಳು ಓದುತ್ತಿರುವ ಶಾಲೆಗಳಿಗೆ ಮಲಯಾಳಂ ಶಿಕ್ಷಕರ ನೇಮಿಸಿ ಕೇರಳ ಸರ್ಕಾರ ಉದ್ಧಟತನ ಮೆರೆದಿದೆ.

ಮಂಗಳೂರು ಗಡಿ ಭಾಗದ ಕೇರಳದ ಕಾಸರಗೋಡಿನ ಅಡೂರಿನ ಸರ್ಕಾರಿ ಹಿರಿಯ ಪ್ರೌಢಶಾಲೆ ಇದೆ. ಈ ಶಾಲೆಯಲ್ಲಿ ಕನ್ನಡದ ಮಕ್ಕಳು ಹೆಚ್ಚು ಓದುತ್ತಿರುವ ಈ ಶಾಲೆ ಕನ್ನಡ ಶಿಕ್ಷಕರ ನೇಮಿಸುವ ಬದಲು ಮಲಯಾಳಂ ಶಿಕ್ಷಕನ್ನು ನೇಮಿಸುವ ಮೂಲಕ ಗಡಿನಾಡ ಕನ್ನಡಿಗರ ಮೇಲೆ ಕೇರಳ ಸರ್ಕಾರದಿಂದ ಮತ್ತೆ ಗದಾ ಪ್ರಹಾರ ನಡೆಸಿದೆ.
ಕನ್ನಡ ಶಾಲೆಗೆ ಮಲಯಾಳಂ ಶಿಕ್ಷಕಿ ನೇಮಕ:
ಅಡೂರು ಶಾಲೆಗೆ ಕನ್ನಡ ಕಲಿಸಲು ಮಲಯಾಳಂ ಶಿಕ್ಷಕಿಯನ್ನು ನೇಮಿಸಲಾಗಿದೆ. ಕನ್ನಡ ಶಿಕ್ಷಕರನ್ನು ನೇಮಕ ಮಾಡುವಂತೆ ಮಕ್ಕಳು ಮತ್ತು ಪೋಷಕರು ಮನವಿ ಸಲ್ಲಿಸಿದ್ರೂ ಕ್ಯಾರೇ ಎನ್ನದ ಕೇರಳ ಸರ್ಕಾರ. ಈಗ ನೇಮಕವಾಗಿರುವ ಮಲಯಾಳಂ ಶಿಕ್ಷಕಿಗೆ ಕನ್ನಡದ ಗಂಧಗಾಳಿ ಗೊತ್ತಿಲ. ಇಂಥವರು ಮಕ್ಕಳಿಗೆ ಕನ್ನಡ ಕಲಿಸುವುದು ಸಾಧ್ಯವಾ ಎಂದು ಪೋಷಕರು ಪ್ರಶ್ನೆ.

ಪಾಠ ಅರ್ಥವಾಗದೆ ತರಗತಿ ಬಹಿಷ್ಕರಿಸಿದ ಮಕ್ಕಳು:
ಕನ್ನಡ ಗೊತ್ತಿಲ್ಲದೆ ಮಲಯಾಳಂ ಭಾಷೆಯಲ್ಲಿ ಪಾಠ ಮಾಡುವ ಶಿಕ್ಷಕಿ. ಶಿಕ್ಷಕಿಯ ಪಾಠ ಮಕ್ಕಳಿಗೆ ಅರ್ಥವಾಗದೇ ತರಗತಿ ಬಹಿಷ್ಕರಿ ಹೊರನಡೆದಿರುವ ಮಕ್ಕಳು. ಕನ್ನಡ ಶಿಕ್ಷಕರ ನೇಮಕಗೊಳಿಸುವಂತೆ ಪ್ರತಿಭಟನೆ ನಡೆಸಿದ್ದಾರೆ. ಶಿಕ್ಷಣ ಇಲಾಖೆ ಹಾಗೂ ಕೇರಳ ಸರ್ಕಾರದ ನಡೆಯ ವಿರುದ್ದ ಪೋಷಕರು ಗರಂ ಆಗಿದ್ದಾರೆ.
