
ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ಛತ್ತೀಸ್‌ಗಢ ಸರ್ಕಾರ ಒಪ್ಪಿದೆ. ಎಷ್ಟು ಕೊಡುತ್ತೇವೆ ಎಂದು ಛತ್ತೀಸ್‌ಗಢ ಸರ್ಕಾರ ತೀರ್ಮಾನಿಸಬೇಕಾಗುತ್ತೆ ಎಂದು ಆಹಾರ ಇಲಾಖೆ ಸಚಿವ ಮುನಿಯಪ್ಪ (KH Muniyappa) ಹೇಳಿದರು. ಅನ್ನಭಾಗ್ಯ ಯೋಜನೆಗೆ ಅಕ್ಕಿ ವ್ಯವಸ್ಥೆ ಮಾಡುವ ಸಂಬಂಧ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಭೆ ಮಾಡಲಾಗಿದೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪತ್ರ ವ್ಯವಹಾರ ಮಾಡುವಂತೆ ಸಿಎಸ್‌ಗೆ ಸೂಚನೆ ನೀಡಿದ್ದೇವೆ. ಓಪನ್ ಮಾರ್ಕೆಟ್‌ನಲ್ಲಿ ಅಕ್ಕಿಯನ್ನು ಖರೀದಿಸಲ್ಲ. NCCF ಸೇರಿ ಕೇಂದ್ರ ಸ್ವಾಯತ್ತ ಸಂಸ್ಥೆಗಳ ಜೊತೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದರು.

ಅಕ್ಕಿ ವಿಚಾರದಲ್ಲಿ ಕೇಂದ್ರ ರಾಜಕೀಯ ಮಾಡುತ್ತಿದೆ
2 ಮಾರ್ಗಗಳ ಮೂಲಕ ಅಕ್ಕಿ ಖರೀದಿ ಮಾಡುವ ಕೆಲಸ ಮಾಡುತ್ತಿದ್ದೇವೆ. ನಾನು ಬೇರೆ ರಾಜ್ಯದ ಪ್ರವಾಸ ಕೈಗೊಳ್ಳುವ ಅಗತ್ಯತೆ ಇಲ್ಲ. ಸಿಎಸ್‌ರವರೇ ಛತ್ತೀಸ್‌ಗಢದಿಂದ ಅಕ್ಕಿ ಖರೀದಿಸುವ ಕೆಲಸ ಮಾಡುತ್ತಾರೆ. ಕೇಂದ್ರ ಸರ್ಕಾರದ ರಾಜಕೀಯದಿಂದ ತಡವಾಗಿದೆ ಅಷ್ಟೇ. ಆದಷ್ಟು ಬೇಗ 10 ಕೆ.ಜಿ ಅಕ್ಕಿ ಕೊಡುತ್ತೇವೆ, ಸಿಎಂ ಸಿದ್ಧರಾಮಯ್ಯ ಹಣ ಮೀಸಲಿಟ್ಟಿದ್ದಾರೆ ಎಂದು ಹೇಳಿದರು.

ಅನ್ನಭಾಗ್ಯ ಯೋಜನೆ ಜುಲೈ 1ರಂದು ಜಾರಿಯಾಗುವುದು ಡೌಟ್
ಅನ್ನಭಾಗ್ಯ ಯೋಜನೆ ಇದೇ ಜುಲೈ 1 ರಂದು ಜಾರಿ ಮಾಡಲು ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿತ್ತು. ಆದರೆ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಹೀಗಾಗಿ ಜುಲೈ 1ರಂದು ಈ ಯೋಜನೆ ಜಾರಿಯಾಗುವುದು ಬಹುತೇಕ ಡೌಟ್ ಎನ್ನಲಾಗುತ್ತಿದೆ.

ಸದ್ಯ ಅನ್ನಭಾಗ್ಯ ಜಾರಿಗೆ ಎದುರಾಗಿರುವ ಅಕ್ಕಿ ಸಮಸ್ಯೆ ನಿವಾರಿಸಲು ರಾಜ್ಯ ಆಹಾರ ಇಲಾಖೆ ಪಂಜಾಬ್, ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ, ಛತ್ತೀಸ್‌ಘಡ್, ಮಧ್ಯಪ್ರದೇಶ ರಾಜ್ಯಗಳನ್ನ ಸಂಪರ್ಕ ಮಾಡಿದೆ. ಆ ಮೂಲಕ ಸದ್ಯ ಛತ್ತೀಸ್‌ಘಡ್ ಸರ್ಕಾರ ಅಕ್ಕಿ ನೀಡಲು ಒಪ್ಪಿಕೊಂಡಿದೆ. ರಾಜ್ಯದ ಜನತೆಗೆ ಪ್ರತಿ ತಿಂಗಳಿಗೆ ಉಚಿತವಾಗಿ ವಿತರಿಸಲು ಒಟ್ಟು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಿದೆ.
ಇದನ್ನೂ ಓದಿ :
ಸೌಜನ್ಯಾ ಆತ್ಯಾಚಾರ, ಕೊಲೆ ಪ್ರಕರಣಕ್ಕೆ ಸಾಕ್ಷಿಗಳೇ ಇಲ್ಲವಂತೆ:ಕಾಲೇಜಿಗೆ ಹೋದವಳು ವಾಪಸ್ ಬರಲೇ ಇಲ್ಲ!
https://hayathtv.com/news-14472/