
ಸೆನ್ಸೇಷನ್ ಹುಟ್ಟಿಸಿದ್ದ ಕೇಸ್‌ನಲ್ಲಿ ಖುಲಾಸೆ ಸಿಕ್ಕಿದ್ದೇಗೆ..?
11 ವರ್ಷದ ಹಿಂದೆ ಬಾಲಕಿಯನ್ನು ಉರಿದು ಮುಕ್ಕಿದ್ಯಾರು ?
ಕೇಸ್ನ ತೀರ್ಪಿನ ಬಗ್ಗೆ ಹೇಳೋದಾದರೆ ನ್ಯಾಯ ನಿರಾಕರಣೆ ಆಯಿತೇ?
ಬರೊಬ್ಬರಿ 11 ವರ್ಷದ ಹಿಂದೆ ಕಾಲೇಜಿಗೆ ಹೋಗಿದ್ದ 17 ವರ್ಷದ ಯುವತಿ ನಾಪತ್ತೆಯಾಗಿದ್ಲು. ಮಾರನೇ ದಿನ ಆಕೆ ಹೆಣವಾಗಿ ಸಿಕ್ಕಿದ್ಲು. ಆಕೆಯನ್ನ ಯಾರೋ ಅತ್ಯಾಚಾರ ಮಾಡಿ ಕೊಲೆ ಮಾಡಿಬಿಟ್ಟಿದ್ರು. ಇದೆಲ್ಲಾ ನಡೆದಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ಕೂಗಳತೆ ದೂರದಲ್ಲಿ.ನಾವು ಮಾತನ್ನಾಡ್ತಿರೋದು ಸೌಜನ್ಯ ರೇಪ್ ಆ್ಯಂಡ್ ಮರ್ಡರ್ ಕೇಸ್ ಬಗ್ಗೆ. ಇಡೀ ದೇಶದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಕೇಸ್‌ನ ತೀರ್ಪು ಪ್ರಕಟವಾಗಿದೆ. ವೀರೇಂದ್ರ ಹೆಗಡೆಯ ವಿರುದ್ಧವೇ ಸೌಜನ್ಯ ಹೆತ್ತವರು ಆರೋಪಿಸಿಬಿಟ್ಟಿದ್ರು. ಇದಕ್ಕೆ ಕಾರಣ ಅವರ ಮಗಳ ಕೊಲೆ ಕೇಸ್‌ನಲ್ಲಿ ಹೆಗಡೆಯವರ ಮನೆಯ ಮಗನ ಹೆಸರು ಕೇಳಿ ಬಂದಿದ್ದು. ಹಾಗಾದ್ರೆ 11 ವರ್ಷದ ಹಿಂದಿನ ಸೌಜನ್ಯ ಕೇಸ್‌ನಲ್ಲಿ ಕೋರ್ಟ್ ಏನ್ ತೀರ್ಪು ಕೊಟ್ಟಿತ್ತು..?

ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಆಗಿದ್ದ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. 2012ರ ಅಕ್ಟೋಬರ್ 10 ರಂದುಸ ಧರ್ಮಸ್ಥಳದ ಬಳಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಆರೋಪಿ ಸಂತೋಷ್ ರಾವ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಬಳಿಕ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಹೀಗಾಗಿ ಹಲವು ಹೋರಾಟಗಳ ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಈಗ 11 ವರ್ಷಗಳ ಸುಧೀರ್ಘ ವಿಚಾರಣೆ ಬಳಿಕ ಸಿಬಿಐ ಕೋರ್ಟ್ ಅಂತಿಮ ತೀರ್ಪು ನೀಡಿದೆ.

ಹಾಗಾದರೆ ಕೊಂದವರು ಯಾರು?
ಸಾಕ್ಷಿಯೇ ಇಲ್ಲದಂತೆ ಕೊಂದವರು ಯಾರು? ಮರು ತನಿಖೆ ಯಾಗಲಿ, ಗಂಭೀರವಾಗಿ ನ್ಯಾಯಾಲಯ ತನಿಖೆ ಮಾಡಲಿ ಎಂದು ಸಾರ್ವಜನಿಕರ ಅಭಿಪ್ರಾಯ.
2012ರ ಅಕ್ಟೋಬರ್ 9ರಂದು ಸಂಜೆ ಕಾಲೇಜಿನಿಂದ ಮನೆಗೆ ಬರುತ್ತಿದ್ದಾಗ ನಾಪತ್ತೆಯಾಗಿದ್ದಳು. ಮರುದಿನ ರಾತ್ರಿ ಮಣ್ಣಸಂಕ ಬಳಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲು ಮಾಡಿತ್ತು. ಶಂಕಿತ ಆರೋಪಿ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಿವಾಸಿ ಸಂತೋಷ್ ರಾವ್ ಎಂಬಾತನನ್ನು ಬಾಹುಬಲಿ ಬೆಟ್ಟದ ಬಳಿ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆಗ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ನಂತರದ ಭಾರಿ ಪ್ರತಿಭಟನೆ ನಡೆದು ಪ್ರಕರಣವನ್ನು ಸಿಬಿಐಗೆ ನೀಡಲಾಗಿತ್ತು. ಸಂತೋಷ್ ರಾವ್ ಆರು ಬಾರಿ ಸಿಬಿಐ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಪ್ರಕರಣದಲ್ಲಿ ಸರಿಯಾದ ತನಿಖೆ ಮಾಡಲಾಗಿಲ್ಲ. ಆದ್ದರಿಂದ ಇಲ್ಲಿ ಸಾಕ್ಷ್ಯಾಧಾರದ ಕೊರತೆ ಎದ್ದು ಕಾಣುತ್ತಿದೆ. ಅತ್ಯಾಚಾರ, ರೇಪ್ ಆಗಿರುವ ವೇಳೆ ಆರೋಪಿ ಸ್ಥಳದಲ್ಲಿ ಇದ್ದಿರಲೇ ಇಲ್ಲ. ರೇಪ್ ಆಗಿರುವ ಬಗ್ಗೆ ವೈದ್ಯಕೀಯ ವರದಿ ಇಲ್ಲ ಎಂದು ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ತೀರ್ಪು ನೀಡಿದ್ದಾರೆ