
ವಿಜಯಪುರ: ಯುವತಿಯೊಬ್ಬಳನ್ನು ನಡುರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾದ ಘಟನೆ ವಿಜಯಪುರ (Vijayapura Young Woman Murder) ದಲ್ಲಿ ನಡೆದಿದೆ.ಗಂಗೂಬಾಯಿ ಯಂಕಂಚಿ(28) ಹತ್ಯೆಯಾದ ಯುವತಿ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದೆ
ಗಂಗೂಬಾಯಿ ಯಂಕಂಚಿ(28) ಹತ್ಯೆಯಾದ ಯುವತಿ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದೆ.

ನಡೆದಿದ್ದೇನು..?: ಗಂಗೂಬಾಯಿ ತನ್ನ ಸ್ಕೂಟಿಯಲ್ಲಿ ಸಿಂದಗಿ ಪಟ್ಟಣಕ್ಕೆ ವಾಪಸ್ ಆಗುತ್ತಿದ್ದರು. ಈ ವೇಳೆ ಪಟ್ಟಣದ ಹೊರವಲಯದ ಕೊಬೊಟೊ ಶೋರೂಂ ಬಳಿ ಮೇಲೆ ದುಷ್ಕರ್ಮಿಗಳು ಏಕಾಏಕಿ ಅಟ್ಯಾಕ್ ಮಾಡಿದ್ದಾರೆ. ನಡುರಸ್ತೆಯಲ್ಲಿಯೇ ಗಂಗೂಬಾಯಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಇತ್ತ ಹತ್ಯೆ ಮಾಡಿದ ಬಳಿಕ ಗಂಗೂಬಾಯಿ ಕುತ್ತಿಗೆಯಲ್ಲೆ ಚಾಕು ಬಿಟ್ಟು ಆಕೆಯ ಸ್ಕೂಟಿ ಜೊತೆ ಪರಾರಿಯಾಗಿದ್ದಾರೆ. ಈ ಘಟನೆ ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ರಕ್ತದ ಮಡುವಿನಲ್ಲಿಯೇ ಯುವತಿ ನರಳಾಡಿ ಸಾವು: ಇನ್ನು ಯುವತಿ ಒಬ್ಬಂಟಿಯಾಗಿ ಸ್ಕೂಟಿ ಮೇಲೆ ಹೊರಟಿದ್ದ ವೇಳೆ ದುಷ್ಕರ್ಮಿಗಳ ದಾಳಿ ಮಾಡಿದ್ದಾರೆ. ದಾಳಿ ವೇಳೆ ಯುವತಿಗೆ ಹೊಡೆದಿದ್ದು, ಆಕೆ ಕೆಳಗೆ ಬಿದ್ದ ನಂತರ ಚೀರಾಡುವುದನ್ನು ತಡೆಯಲು ಹರಿತವಾದ ಮಾರಕಾಸ್ತ್ರದಿಂದ ಆಕೆಯ ಕುತ್ತಿಗೆಯನ್ನು ಕೊಯ್ಯಲಾಗಿದೆ. ರಸ್ತೆಯ ಪಕ್ಕದಲ್ಲಿಯೇ ಯುವತಿ ಕುತ್ತಿಗೆ ಕುಯ್ದಿದ್ದು, ರಕ್ತದ ಮಡುವಿನಲ್ಲಿಯೇ ಯುವತಿ ನರಳಾಡಿ ಸ್ಥಳದಲ್ಲಿಯೇ ಪ್ರಾಣವನ್ನು ಬಿಟ್ಟಿದ್ದಾಳೆ. ಇನ್ನು ಹತ್ಯೆ ಮಾಡಿದ ಬಳಿಕ ಹಂತಕರು ಯುವತಿ ಓಡಿಸುತ್ತಿದ್ದ ಸ್ಕೂಟಿಯನ್ನು ಕೊಂಡೊಯ್ದಿದ್ದಾರೆ.
ಕುತ್ತಿಗೆಯಲ್ಲೇ ಚಾಕು ಬಿಟ್ಟು ಹೋದ ಹಂತಕರು: ಗ್ರಾಮೀಣ ಭಾಗಕ್ಕೆ ಕೆಲಸಕ್ಕೆ ತೆರಳಿ ಮರಳಿ ಸಿಂಧಗಿ ಪಟ್ಟಣಕ್ಕೆ ಬರುವಾಗ ಘಟನೆ ನಡೆದಿದೆ. ಸಿಂಧಗಿ ಪಟ್ಟಣದಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ನಡೆದ ದಾಳಿಯ ವೇಳೆ ಸಾರ್ವಜನಿಕರು ಸುತ್ತಲೂ ಇದ್ದರೂ ಯಾವುದೇ ಭಯವಿಲ್ಲದೆ ಕೃತ್ಯ ಎಸಗಿದ್ದಾರೆ. ನಂತರ, ಚಾಕುವಿನಿಂದ ಚುಚ್ಚಿ, ಕುತ್ತಿಗೆಯನ್ನು ಕೊಯ್ದಿದ್ದಾರೆ. ಆದರೆ, ಹಂತಕರು ಯುವತಿಯನ್ನು ಕೊಲೆ ಮಾಡಲು ಬಳಸಿದ್ದ ಚಾಕುವನ್ನು ಕೂಡ ಯುವತಿಯ ಕುತ್ತಿಗೆಯಲ್ಲಿಯೇ ಬಿಟ್ಟು ಪರಾರಿ ಆಗಿದ್ದಾರೆ. ಹಲ್ಲೆ ಮಾಡಲು ಬಳಸಿದ್ದ ದೊಣ್ಣೆಯೂ ಕೂಡ ಯುವತಿ ಮೃತದೇಹದ ಪಕ್ಕದಲ್ಲಿಯೇ ಬಿದ್ದಿದೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿದ್ದಾರೆ. ನಂತರ ಯುವತಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ