
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಪೊಲೀಸ್ ಠಾಣೆಯ ಕಾಂಪೌಂಡ್ ಗೋಡೆಗೆ ಯುವಕನೊಬ್ಬನ “ ಮೊದಲ ರಾತ್ರಿಯ ಸಂಭ್ರಮ” ಎಂಬ ಬ್ಯಾನರ್ ಹಾಕಲಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ
- ಗೆಳೆಯನ ಹನಿಮೂನ್‌ಗೆ ವಿಶ್ ಮಾಡಿದ ಸ್ನೇಹಿತರು.
- ಮೊದಲ ರಾತ್ರಿಗೆ ಶುಭ ಕೋರಿದ ಬ್ಯಾನರ್ ಹಾಕಿದ ಗೆಳೆಯರು.
- ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

First Night Wish Banner : ಈಗಂತೂ ಸಾಧನೆ, ಸೇವೆ ಮಾಡಿದವರನ್ನು ಗುರುತಿಸಿ ಬ್ಯಾನರ್ ಇಲ್ಲವೆ ಫ್ಲೆಕ್ಸ್ ಹಾಕುವುದಕ್ಕೆ ಜನ ಮುಂದೆ ಬರಲ್ಲ. ಆದ್ರೆ ಬಿಟ್ಟಿ ಪ್ರಚಾರ, ಶುಭಾಶಯ, ಸಂತಾಪ ಹೀಗೆ ಹಲವಾರು ಸಂಗತಿಗಳಿಗೆ ಬ್ಯಾನರ್ ಅಥವಾ ಫ್ಲೆಕ್ಸ್ ಹಾಕುವವರೇ ಹೆಚ್ಚಾಗಿದ್ದಾರೆ. ಆದ್ರೆ ಹನಿಮೂನ್ ವಿಚಾರಕ್ಕೂ ಬ್ಯಾನರ್ ಹಾಕಿ ಶುಭ ಕೋರುವುದದನ್ನು ಯಾವಾತ್ತಾದ್ರೂ ನೀವು ನೋಡಿದ್ರಾ..? ಇಲ್ಲಿದೆ ನೋಡಿ..

ಹೌದು… ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಪೊಲೀಸ್ ಠಾಣೆಯ ಕಾಂಪೌಂಡ್ ಗೋಡೆಗೆ ತಾಗಿಕೊಂಡಂತೆ ಯುವಕನೊಬ್ಬನ ಮದುವೆಯ ಮೊದಲ ರಾತ್ರಿಯ ಸಂಭ್ರಮ ಎಂಬ ಹೋರ್ಡಿಂಗ್ಸ್ ಹಾಕಲಾಗಿದ್ದು ವ್ಯಂಗ್ಯಕ್ಕೆ ಗುರಿಯಾಗಿದೆ. ಅಲ್ಲದೆ, ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರಾತ್ರಿಯಿಡೀ ಹೋರಾಡಿ ಗೆದ್ದು ಬಾ ಎಂದು ಗೆಳೆಯರು ಹಾರೈಸಿ ಸರ್ಕಾರಿ ಜಾಗದಲ್ಲಿ ದೊಡ್ಡ ಸಾಧನೆ ಎಂಬಂತೆ ಹೋರ್ಡಿಂಗ್ ಹಾಕಿದ್ದಾರೆ. ಸರ್ಕಾರಿ ಜಾಗದಲ್ಲಿ ಯಾವುದೇ ಅನುಮತಿ ಇಲ್ಲದೆ ತಮಗೆ ಇಷ್ಟಬಂದಂತೆ ಅಶ್ಲೀಲ ಸಂದೇಶ ಸಾರುವ, ಮುಜುಗರ ತರುವ ಜಾಹೀರಾತು ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಜೊತೆಗೆ ಮಳೆಗೆ ಚಳಿಗೆ ಕಚೇರಿಯಲ್ಲಿ ಕುಳಿತಿರುವ ಅಧಿಕಾರಿಗಳು ಮೈಚಳಿ ಬಿಟ್ಟು ಇಂತಹ ಅನಧಿಕೃತ, ಮತ್ತು ಅಶ್ಲೀಲ ಬ್ಯಾನರ್‌ಗಳ ವಿರುದ್ದ ದಂಡ ಅಥವಾ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರಿನ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.