
ಚಾಮರಾಜನಗರ: ಲಘು ವಿಮಾನವೊಂದು ಪತನಗೊಂಡಿರುವ(Aircraft crash) ಘಟನೆ ಇಂದು(ಜೂನ್ 1) ಚಾಮರಾಜನಗರ(chamarajanagar) ತಾಲೂಕಿನ ಭೋಗಪುರ ಬಳಿ ನಡೆದಿದೆ. ವಿಮಾನದಲ್ಲಿದ್ದ ಇಬ್ಬರು ಪ್ಯಾರಾಚೂಟ್ ಮೂಲಕ ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಬೆಂಗಳೂರಿನ ಹೆಚ್ಎಎಲ್ ಏರ್ಪೋರ್ಟ್ನಿಂದ ತೆರಳಿದ್ದ ವಿಮಾನ, ಭೋಗಪುರ ಬಳಿ ಪತಗೊಂಡಿದೆ. ಇನ್ನು ವಿಮಾನ ಛಿದ್ರ ಛಿದ್ರವಾಗಿದ್ದು, ಅದರ ಬಿಡಿ ಭಾಗಗಗಳು ಎಲ್ಲೊಂದರಲ್ಲಿ ಬಿದ್ದಿವೆ. ಇನ್ನು ಕೆಲ ಭಾಗಗಳು ಬೆಂಕಿಯಿಂದ ಹೊತ್ತಿ ಉರಿಯುತ್ತಿವೆ.

ಚಾಮರಾಜನಗರದಲ್ಲಿ ಲಘು ವಿಮಾನ ಪತನಗೊಂಡಿರುವ

ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
