
New Parliament Building Inauguration Live News Updates in Kannada:ಭಾರತದ ನೂತನ ಸಂಸತ್ ಭವನದ ಉದ್ಘಾಟನೆಯ ಚಾರಿತ್ರಿಕ ಕ್ಷಣ ಬಂದೇ ಬಿಟ್ಟಿದೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತಕ್ಕೆ ಹೊಸ ಸಂಸತ್ ಭವನ ಅರ್ಪಣೆಗೆ ಕ್ಷಣಗಣನೆ ಶುರುವಾಗಿದೆ. ಭಾರತದ ರಾಜಧಾನಿ ನವ ದೆಹಲಿಯ ಸೆಂಟ್ರಲ್ ವಿಸ್ಟಾ ಪ್ರದೇಶದಲ್ಲಿ ತಲೆ ಎತ್ತಿರುವ ನೂತನ ಸಂಸತ್ ಭವನ ಇಂದು ಕೆಲವೇ ಹೊತ್ತಲ್ಲಿ ಲೋಕಾರ್ಪಣೆಯಾಗಲಿದೆ. ಭಾರತದ ಸಂಸತ್ ಕಟ್ಟಡವನ್ನ ಭಾರತದ ಪ್ರಜಾಪ್ರಭುತ್ವದ ದೇಗಲು ಅಂತಲೇ ಬಣ್ಣಿಸಲಾಗುತ್ತೆ. ಇದೀಗ, ಭಾರತದ ಪ್ರಜಾತಂತ್ರಕ್ಕೆ ಹೊಸ ದೇಗುಲ ದೊರೆಯುತ್ತಿದ್ದು,

ನವದೆಹಲಿ: ನೂತನ ಸಂಸತ್ ಭವನ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ತ್ರಿಕೋನ ಆಕಾರದ 4 ಅಂತಸ್ತಿನ ಕಟ್ಟಡದ ವಿಸ್ತೀರ್ಣ 64,500 ಚದರ ಮೀಟರ್ ಇದ್ದು, ಕಟ್ಟಡದಲ್ಲಿ 1,280 ಸಂಸದರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಜ್ಞಾನದ್ವಾರ, ಶಕ್ತಿದ್ವಾರ, ಕರ್ಮದ್ವಾರ ಎಂಬ 3 ಪ್ರಮುಖ ದ್ವಾರಗಳನ್ನು ನಿರ್ಮಾಣ ಮಾಡಲಾಗಿದೆ. ಸಂಸದರು, ವಿಐಪಿ ಸಂದರ್ಶಕರು, ಅಧಿಕಾರಿಗಳಿಗಾಗಿ ಪ್ರತ್ಯೇಕ ದ್ವಾರ ನಿರ್ಮಿಸಲಾಗಿದೆ.

ಸ್ಪೀಕರ್ ಆಸನದ ಬಳಿ ಸೆಂಗೋಲ್ ಪ್ರತಿಷ್ಠಾಪಿಸಿದ ಪ್ರಧಾನಿ ಮೋದಿ
ನವದೆಹಲಿ: ದೆಹಲಿಯಲ್ಲಿ ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿದ್ದು, ಪುರೋಹಿತರಿಂದ ಸೆಂಗೋಲ್ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಸ್ಪೀಕರ್ ಆಸನದ ಬಳಿ ಸೆಂಗೋಲ್ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸಾಥ್ ನೀಡಿದ್ದಾರೆ.

ನೂತನ ಸಂಸತ್ ಭವನದಲ್ಲಿ ವಿವಿಧ ಧರ್ಮದ ಮುಖಂಡರಿಂದ ಪ್ರಾರ್ಥನೆ ಆರಂಭ
https://twitter.com/ANI/status/1662653934945857536?t=-sbKYftFevSCxfk9JFwkBw&s=19
ನವದೆಹಲಿ: ನೂತನ ಸಂಸತ್ ಭವನದಲ್ಲಿ ವಿವಿಧ ಧರ್ಮದ ಮುಖಂಡರಿಂದ ಪ್ರಾರ್ಥನೆ ಆರಂಭವಾಗಿದ್ದು, ಪ್ರಾರ್ಥನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಪ್ರಲ್ಹಾದ್ ಜೋಶಿ, ಎಸ್. ಜೈಶಂಕರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವರು ಭಾಗಿಯಾಗಿದ್ದಾರೆ. ಹಾಗೇ ಪ್ರಾರ್ಥನಾ ಸಭೆಯಲ್ಲಿ ಪಂಡಿತರು, ಸಾಧು ಸಂತರು ಪಾಲ್ಗೊಂಡಿದ್ದಾರೆ.
New Parliament inauguration Live: ಸಂಸತ್ ಭವನ ನಿರ್ಮಿಸಿದ ಕಾರ್ಮಿಕರಿಗೆ ಮೋದಿ ಸನ್ಮಾನ
ನವದೆಹಲಿ:ದೆಹಲಿಯಲ್ಲಿ ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿದ್ದು, ಸಂಸತ್ ಭವನದ ಕಟ್ಟಡ ನಿರ್ಮಿಸಿದ ಕಾರ್ಮಿಕರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸನ್ಮಾನ ಮಾಡಿದ್ದಾರೆ.
