
ಶಾಸಕರು, ಎಂಎಲ್‌ಸಿಯೂ ಅಲ್ಲದ ಬೋಸರಾಜ್ ಅವರಿಗೆ ಸಚಿವ ಸ್ಥಾನ ಹೇಗೆ ಸಿಕ್ತು ಎಂದು ಒಳಗೊಳಗೆ ಕೈ ಪಡೆಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಈ ವಿಚಾರ ರಾಜ್ಯ ರಾಜಕೀಯದಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಸ್ವತಃ ಜನರಿಗೂ ಈ ಕುರಿತು ಶಾಕ್ ಉಂಟಾಗಿದ್ದು, ಯಾರು ಈ ಬೋಸರಾಜು ಅಂತ ತಲೆಕಡಿಸಿಕೊಂಡಿದ್ದಾರೆ.
ಬೆಂಗಳೂರು : ಇಂದು ರಾಜಭನದಲ್ಲಿ ನಡೆದ ಕಾರ್ಯಕ್ರಮದಲ್ಲಿ 24 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಸದ್ಯ ಅಸ್ತಿತ್ವವಿರುವ 10 ಮಂದಿಯ ಸಚಿವ ಸಂಪುಟಕ್ಕೆ 24 ಸಚಿವರು ಸೇರ್ಪಡೆಗೊಳ್ಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಪರಿಪೂರ್ಣವಾಗಿ ರಚನೆಯಾಗಿದೆ. ಇದರ ನಡುವೆ ಮಾಜಿ ಶಾಸಕ ಎನ್.ಎಸ್. ಬೋಸರಾಜು ಅವರಿಗೆ ಮಂತ್ರಿಗಿರಿ ನೀಡಿದ್ದಕ್ಕೆ ಕೈ ಪಾಳಯದಲ್ಲಿ ಆಕ್ರೋಶ ಹೆಚ್ಚಾಗಿದೆ.
ಹೌದು.ಬೋಸರಾಜು ಅವರು ಅಸಲಿಗೆ ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಶಾಸಕರಾದವರಂತೂ ಅಲ್ಲ, ಕಡೆಗೆ ಎಂಎಲ್‌ಸಿಯೂ ಅಲ್ಲ ಆದ್ರೂ ಅವರಿಗೆ ಸಚಿವರ ಸ್ಥಾನ ನೀಡಿದ ಬಗ್ಗೆ ಕಾಂಗ್ರೆಸ್ಸಿನ ಕೆಲವು ನಾಯಕರುಗ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸ್ವತಃ ಜನರಿಗೂ ಈ ಕುರಿತು ಶಾಕ್ ಉಂಟಾಗಿದ್ದು, ಯಾರು ಈ ಬೋಸರಾಜು ಅಂತ ತಲೆಕಡಿಸಿಕೊಂಡಿದ್ದಾರೆ.

ಸಿಎಂ ಸಿದ್ಧರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವ ಬೋಸರಾಜು ಅವರು, ಹುಟ್ಟಿದ್ದು, ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲೂರು ಗ್ರಾಮದದಲ್ಲಿ ಎನ್.ಎಸ್. ಬೋಸರಾಜ್ ಅವರು ಜನಿಸಿದರು. ಕೃಷಿಕ ಕುಟುಂಬದಲ್ಲಿ ಜನಿಸಿದ ಇವರು, ತಮ್ಮ ಡಿಪ್ಲೊಮಾ ಪದವಿ ನಂತರ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಜೇನೂರು ಕ್ಯಾಂಪ್‌ಗೆ ಬಂದ ಇವರು ಕೃಷಿಕರಾಗಿ ತಮ್ಮ ಜೀವನ ಮುಂದುವರೆಸಿದರು. ಹೈನುಗಾರಿಕೆ, ಕೋಳಿ ಸಾಕಾಣಿಕೆಯನ್ನು ಬೃಹತ್ ಪ್ರಮಾಣದ ಉದ್ಯಮವಾಗಿಸುವ ಜೊತೆಗೆ ಎನ್.ಎಸ್.ಬೋಸರಾಜ್ ಅವರು ರಾಜಕೀಯ ಪ್ರವೇಶ ಮಾಡಿದರು. ಕ್ಷತ್ರಿಯರಾಗಿರುವ ಬೋಸರಾಜು ಅವರು, ಎಐಸಿಸಿ ಕಾರ್ಯದರ್ಶಿ ಮತ್ತು ತೆಲಂಗಾಣ ಕಾಂಗೆಸ್ ಉಸ್ತುವಾರಿ ಸಹ ಆಗಿದ್ದರು. 1999 ಮತ್ತು 2004 ಶಾಸಕರಾಗಿ ಆಯ್ಕೆಯಾಗಿದ್ದರು. ಇದೀಗ ಸಿದ್ದು ಸಂಪುಟದಲ್ಲಿ ಸಚಿವರಾಗಿದ್ದಾರೆ.

ತ್ಯಾಗಕ್ಕೆ ಒಲಿಯಿತು ಮಂತ್ರಿಗಿರಿ : ಶಾಸಕರು, ಎಂಎಲ್‌ಸಿಯೂ ಅಲ್ಲದ ಬೋಸರಾಜ್ ಅವರಿಗೆ ಸಚಿವ ಸ್ಥಾನ ಹೇಗೆ ಸಿಕ್ತು ಎಂದು ಒಳಗೊಳಗೆ ಕೈ ಪಡೆಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಈ ವಿಚಾರ ರಾಜ್ಯ ರಾಜಕೀಯದಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆದ್ರೆ, ಬೋಸರಾಜ್ ಅವರಿಗೆ ಮಂತ್ರಿಭಾಗ್ಯ ದೊರೆತ್ತಿದ್ದೇ ಹೈಕಮಾಂಡ್ನಿಂದ. ಅವರು ಕ್ಷೇತ್ರ ತ್ಯಾಗ ಮಾಡಿದ್ದರಿಂದ.. ಹೌದು.. 2023 ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ನಗರ ವಿಧಾನಸಭಾಕ್ಷೇತ್ರದ ಟಿಕೆಟ್ ಮುಸ್ಲಿಂ ಅಭ್ಯರ್ಥಿಗೆ ನೀಡಲು ನಿರ್ಧಾರಿಸಲಾಗಿತ್ತು. ಆದ್ರೆ, ಬೋಸರಾಜ್ ಅವರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಒಂದು ವೇಳೆ ತಮಗೆ ಟಿಕೆಟ್ ಕೊಡದಿದ್ದರೆ ತಮ್ಮ ಪುತ್ರನಿಗಾದರೂ ನೀಡುವಂತೆ ಬೇಡಿಕೆಯಿಟ್ಟಿದ್ದರು. ರಾಜ್ಯ ಕೈ ನಾಯಕರ ಸಂಧಾನಕ್ಕೂ ಒಪ್ಪದ ಹಿನ್ನೆಲೆ ಖುದ್ದು ರಾಹುಲ್ ಗಾಂಧೀ ಅವರೇ ಮಾತುಕತೆ ನಡೆಸಿ, ಸರ್ಕಾರ ಬಂದರೆ ಎಂಎಲ್ಸಿ ಮಾಡಿ ಪ್ರಮುಖ ಹುದ್ದೆ ನೀಡುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ. ಅದರಂತೆ ಇದೀಗ ಬೋಸರಾಜ್ ಅವರು ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
